ಸೌಂದರ್ಯ ಎಂಬುದು ಶಾಶ್ವತವಲ್ಲ ಎಂಬುದು ಹಲವು ಸಲ ಹಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇದೇ ಜನರ ಮಧ್ಯೆ ಅನೇಕರು ಅದೇ ರೂಪ, ಆಕಾರ ಹಾಗೂ ಅವರ ನ್ಯೂನತೆಗಳಿಂದಾಗಿ, ತಮ್ಮ ಸುತ್ತ ಮುತ್ತಲಿನ ಜನರು ಆಡುವ ಮಾತುಗಳನ್ನು, ಅವರ ಬಗ್ಗೆ ತೋರುವ ಕೀಳಿರಿಮೆ, ಹಂಗಿಸುವುದು ಇಂತವನ್ನೆಲ್ಲಾ ನೋಡಿ ಜೀವನದ ಬಗ್ಗೆ ನಿರಾಶರಾಗಿ, ಕೆಲವೊಮ್ಮೆ ಆತ್ಮಹತ್ಯೆಗೆ ಕೂಡಾ ಪ್ರಯತ್ನ ಪಡುತ್ತಾರೆ. ಅಂತಹುದೇ ಒಂದು ಘಟನೆಯಲ್ಲಿ ಕೇವಲ ಒಂಬತ್ತು ವರ್ಷದ ಬಾಲಕನೊಬ್ಬ ಜನರ, ಸ್ನೇಹಿತರ ಮಾತುಗಳಿಗೆ ನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿ, ಬಾಲಕನ ಬಗ್ಗೆ ಹಲವರು ಸಹಾನುಭೂತಿಯನ್ನು ತೋರಿಸುತ್ತಿದ್ದಾರೆ.

ಆಸ್ಟ್ರೇಲಿಯಾದ ಈ ಬಾಲಕನ ಹೆಸರು ಕ್ವಾಡನ್ ಬೇಲ್ಸ್. ಹುಟ್ಟಿನಿಂದಲೇ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದು ಆತ ಎಲ್ಲಾ ಮಕ್ಕಳಂತೆ ಬೆಳೆಯದೆ ಎತ್ತರದಲ್ಲಿ ಕಡಿಮೆ ಇರುವುದರಿಂದ, ಕುಬ್ಜ ನಾಗಿ ಕಾಣುವುದರಿಂದ ಆತನನ್ನು ಶಾಲೆಯಲ್ಲಿ ಇತರೆ ವಿದ್ಯಾರ್ಥಿಗಳು, ಹೊರಗಡೆ ಹಲವರು ಹಂಗಿಸುವುದು,
ಆತನನ್ನು ಮನ ಬಂದಂತೆ ಆಡಿಸುವುದು ಮಾಡಿದಾಗ ಮನನೊಂದ ಬಾಲಕ ಆತ್ಮಹತ್ಯೆ ಕಡೆ ಮುಖ ಮಾಡಿದ ಬಾಲಕ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾತನಾಡಿದ್ದ ಹೃದಯ ವಿದ್ರಾವಕ ವಿಡಿಯೋವನ್ನು ಆತನ ತಾಯಿ ಕೆಲವು ವಾರಗಳ ಹಿಂದೆ ಅಪ್ಲೋಡ್ ಮಾಡಿದ್ದರು. ಇದನ್ನು ನೋಡಿ ವಿಶ್ವದ ಮೂಲೆ ಮೂಲೆಗಳಿಂದ ಬಾಲಕನ ಪರ ಸಹಾನುಭೂತಿ ಹರಿದು ಬಂದಿತ್ತು.

ವಿಡಿಯೋದಲ್ಲಿ ಕ್ವಾಡನ್ ತಾಯಿ ಇತರರನ್ನು ಹಂಗಿಸುವುದು ಯಾವ ಪರಿಣಾಮಕ್ಕೆ ದಾರಿಯಾಗುತ್ತದೆ ನೋಡಿ ,ಇನ್ನಾದರೂ ಮಕ್ಕಳಿಗೆ ಸರಿಯಾದ ವಿಚಾರಗಳನ್ನು ಕಲಿಸಿಕೊಡಿ ಎಂದಿದ್ದರು. ಈ ವಿಡಿಯೋ ವೈರಲ್ ಆಗಿ ಮಿಲಿಯನ್ ಗಟ್ಟಲೆ ಜನ ನೋಡಿದರು. ಇದಾದ ನಂತರ ಆಸ್ಟ್ರೇಲಿಯಾ ದಲ್ಲಿ ನಡೆದ ರಗ್ಬಿ ಟೂರ್ನಿಯಲ್ಲಿ ತಂಡವನ್ನು ಮುನ್ನೆಡಸುವ ಅವಕಾಶವನ್ನು ಈ ಬಾಲಕನಿಗೆ ನೀಡಲಾಯಿತು. ಆತನಿಗೆ ಒಂದು ಆತ್ಮಸ್ಥೈರ್ಯ ಹಾಗೂ ಆತ್ಮ ವಿಶ್ವಾಸವನ್ನು ಮೂಡಿಸುವ ಮೊದಲ ಹೆಜ್ಜೆ ಅಲ್ಲಿಂದ ಆರಂಭವಾಗಿದೆ. ಜಗತ್ತಿನಲ್ಲಿ ಜನ ದೈಹಿಕ ನ್ಯೂನ್ಯತೆ ಇರುವವರಿಗೆ ಆತ್ಮ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕಾದದ್ದು ಅವರ ಕರ್ತವ್ಯ ಎಂದರೆ ತಪ್ಪಾಗಲಾರದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here