ಹಿರಿಯ ಅಡ್ವೊಕೇಟ್ ಇಂದಿರಾ ಜೈಸಿಂಗ್ ಅವರು ಕೆಲವು ದಿನಗಳ ಹಿಂದೆ ನಿರ್ಭಯಾ ಅಪರಾಧಿಗಳ ಬಗ್ಗೆ ಮಾತನಾಡುತ್ತಾ, ನಿರ್ಭಯಾ ತಾಯಿ ಜೈಲಿನಲ್ಲಿರುವ ಅಪರಾಧಿಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಜೀವ್ ಗಾಂಧಿ ಹತ್ಯೆಗೆ ಕಾರಣರಾಗಿದ್ದವರನ್ನು ಕ್ಷಮಿಸುವಂತೆ ದೊಡ್ಡ ಮನಸ್ಸು ಮಾಡಬೇಕೆಂದು ಹೇಳಿಕೆ ನೀಡಿ, ಇಂದಿರಾ ಜೈಸಿಂಗ್ ಅವರ ಈ ಹೇಳಿಕೆಗೆ ರಾಷ್ಟ್ರಾದ್ಯಂತ ಟ್ವಿಟರ್ ನಲ್ಲಿ, ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು ನೆಟ್ಟಿಗರು. ಸ್ವತಃ ನಿರ್ಭಯಾ ತಾಯಿ ಕೂಡಾ ಅಡ್ವೊಕೇಟ್ ಅವರ ಈ ಮಾತಿಗೆ ನೊಂದು ತಮ್ಮ ಬೇಸರವನ್ನು ಹೊರಹಾಕಿದ್ದರು.

ಇಂದಿರಾ ಜೈಸಿಂಗ್ ಅವರು ನೀಡಿದ್ದ ಈ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ತಿರುಗೇಟು ನೀಡಿದ್ದಾರೆ. ಖಡಕ್ಕಾದ ಪ್ರತಿಕ್ರಿಯೆ ನೀಡಿರುವ ಕಂಗನಾ ನಿರ್ಭಯಾ ಹತ್ಯೆಯ ಆರೋಪದಲ್ಲಿ ಜೈಲಿನಲ್ಲಿರುವ ಖೈದಿಗಳ ಜೊತೆ ನಾಲ್ಕು ದಿನ ಆಕೆಯನ್ನು ಇರಲಿ ಬಿಡಿ, ಇಂಥಾ ರಾಕ್ಷಸರು ಮತ್ತು ಕೊಲೆಗಡುಕರಿಗೆ ಜನ್ಮ ನೀಡುವವರು ಈ ರೀತಿಯ ಮಹಿಳೆಯರೇ ಎಂದು ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ನಟಿ ಹೊರಹಾಕಿದ್ದಾರೆ. ತಮ್ಮ ಪಂಗಾ ಸಿನಿಮಾದ ಪ್ರಮೋಷನ್ ವೇಳೆ ಕಂಗನಾ ಇಂತಹುದೊಂದು ಹೇಳಿಕೆ ನೀಡಿದ್ದಾರೆ.

ಹಿರಿಯ ಅಡ್ವೊಕೇಟ್ ಇಂದಿರಾ ಜೈಸಿಂಗ್ ಅವರು ಕೆಲವೇ ದಿನಗಳ ಹಿಂದೆ ಟ್ವಿಟರ್ ನಲ್ಲಿ ನಿರ್ಭಯಾ ಅವರ ತಾಯಿ ಆಶಾ ದೇವಿಗೆ ಸಲಹೆಯೊಂದನ್ನು ನೀಡುತ್ತಾ, ಆಕೆ ಸೋನಿಯಾ ಗಾಂಧಿಯವರಂತೆ, ರಾಜೀವ್ ಗಾಂಧಿ ಹತ್ಯೆಗೆ ಕಾರಣವಾಗಿದ್ದ ನಳಿನಿಗೆ ಗಲ್ಲು ಶಿಕ್ಷೆ ಬೇಡ ಎಂದು ಹೇಳಿದಂತೆ, ಆಶಾ ದೇವಿ ಕೂಡಾ ನಿರ್ಭಯಾ ಹಂತಕ ರನ್ನು ಕ್ಷಮಿಸಬೇಕು. ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ ಎಂದು ಟ್ವೀಟ್ ಮಾಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here