ವಿಶ್ವದ ನೂರು ಅತ್ಯಂತ ಪ್ರಭಾವಶಾಲಿ ಮಹಿಳೆಯರ ಸಾಲಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಭಾರತೀಯ ನಾರಿಯರು ಈ ವರ್ಷ ಸ್ಥಾನ ಗಳಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಸತತ ೯ನೇ ವರ್ಷವೂ ಫೋರ್ಬ್-೧೦೦ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಯೂರೋಪ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟಿನ್ ಲಗಾರ್ಡ್ ದ್ವಿತೀಯ, ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಸೆ ತೃತೀಯ ಮತ್ತು ಬಿಲ್ ಗೇಟ್ಸ್ ಪತ್ನಿ ಮಿಲಿಂದಾ ಗೇಟ್ಸ್ ೬ನೇ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ೨೯ನೇ, ನ್ಯೂಜಿಲೆಂಡ್ ಪ್ರಧಾನಿ ಜಸೀನಾ ಆರ್ಡರ್ನ್ ೩೮ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಪುತ್ರಿ ಇವಾಂಕಾ ೪೨ನೇ ಸ್ಥಾನದಲ್ಲಿದ್ದಾರೆ.
ರಕ್ಷಣಾ ಮತ್ತು ಹಣಕಾಸು ಖಾತೆಗಳನ್ನು ನಿಭಾಯಿಸಿ ಗಮನ ಸೆಳೆದಿರುವ ನಿರ್ಮಲಾ ಸೀತಾರಾಮನ್ ೩೪ನೇ ಸ್ಥಾನದಲ್ಲಿದ್ದು ಎಚ್‌ಸಿಎಲ್ ಕಾರ್ಪೊರೇಷನ್ ಸಿಇಓ ರೋಶ್ನಿ ನಾಡರ್ ಮಲ್ಹೋತ್ರ ೫೪ನೇ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮೋಜುಂದಾರ್ ಶಾ ೬೫ನೇ ಸ್ಥಾನ ಗಳಿಸಿಕೊಂಡಿದ್ದಾರೆ.

ಗಾಯಕಿಯರಾದ ರಿಹನ್ನಾ, ಬೆಯೋನ್ಸ್, ಟೇಲರ್ ಸ್ವಿಫ್ಟ್, ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಹಾಗೂ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಕೂಡಾ ವಿಶ್ವದ ಅತ್ಯಂತ ಪ್ರತಿಷ್ಠಿತ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here