ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಮತ್ತೆ ಸುಧಾರಿಸಲು ಕೇಂದ್ರ ಸರ್ಕಾರ ಬೃಹತ್ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಒಂದನ್ನು ಘೋಷಿಸಿರುವ ವಿಷಯ ನಮಗೆಲ್ಲಾ ತಿಳಿದೇ ಇದೆ. ಪ್ಯಾಕೇಜ್ ಬಗ್ಗೆ ಟೀಕೆ ಟಿಪ್ಪಣಿಗಳನ್ನು ನೀಡುತ್ತಲೇ ಬರುತ್ತಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ಆರ್ಥಿಕ ಪ್ಯಾಕೇಜ್ ಕುರಿತಾಗಿ ಟೀಕೆ ಮಾಡಿದ್ದು ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರ ಸ್ವಾಮಿ ಅವರು ಮಾತನಾಡುತ್ತಾ ಮೊದಲ ದಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ 6.54 ಲಕ್ಷ ಕೋಟಿಗಳ ಪ್ಯಾಕೇಜ್ ಸುಳ್ಳಿನ ಕಂತೆ ಎಂದಿದ್ದಾರೆ.

ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ 2500 ಕೋಟಿಗಳು ಮಾತ್ರ ಎಂದಿರುವ ಕುಮಾರ ಸ್ವಾಮಿ ಅವರು ಹಣಕಾಸು ಆಯೋಗದ ಶಿಫಾರಸು ಗಳಿಗೆ ಗಮನ ನೀಡದೆ ತೆಗೆದುಕೊಂಡಿರುವ ನಿರ್ಧಾರವಿದು ಎಂದು ಟೀಕೆ ಮಾಡಿದ್ದಾರೆ. ಸಾಲ ನೀಡುವುದಾಗಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದ್ದು, ಇದನ್ನು ಕೇಂದ್ರ ಸರ್ಕಾರವು ತನ್ನ ಖಜಾನೆಯಿಂದ ನೀಡುವುದಿಲ್ಲ ಬದಲಿಗೆ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ನೀಡುವುದು ಎಂದು ಅವರು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಟಿಡಿಎಸ್ ಕುರಿತಾಗಿ ಕೂಡಾ ಟೀಕೆಗಳನ್ನು ಮಾಡಿದ್ದು, ಟಿಡಿಎಸ್ ಅನ್ನು 25% ಕಡಿಮೆ ಮಾಡಿರುವುದಾಗಿ ಅವರು ಹೇಳಿದ್ದಾರೆ. ಆದರೆ ಯಾರೆಲ್ಲಾ ತೆರಿಗೆಯನ್ನು ಕಟ್ಟುತ್ತಾರೆಯೋ ಅವರು ಸೇವಾ ತೆರಿಗೆಯನ್ನು ಕೂಡಾ ಪಾವತಿಸಲೇ ಬೇಕು. ಅದನ್ನು ಒಂದಲ್ಲಾ ಒಂದು ದಿನ ಕಟ್ಟಲೇ ಬೇಕಿದೆ ಎಂದ ಹೆಚ್.ಡಿ.ಕೆ ಟಿಡಿಎಸ್ ಹಣವನ್ನೇಕೆ
ಇಟ್ಟುಕೊಂಡಿದ್ದಾರೆಂಬ ವಿಷಯವನ್ನು ಸ್ವತಃ ವಿತ್ತ ಸಚಿವರೇ ತಿಳಿಸಬೇಕು ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here