ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ನ ನಾಲ್ಕನೇ ಹಂತದ ವಿವರಣೆಯನ್ನು ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿ ಗೋಷ್ಠಿಯಲ್ಲಿ ಮಂಡಿಸಿ ವಿವರಿಸಿದ್ದಾರೆ. ಇಂದಿನ ಮುಖ್ಯಾಂಶಗಳ ಕಡೆ ಗಮನ ನೀಡುವುದಾದರೆ, ಕಲ್ಲಿದ್ದಲು ಕ್ಷೇತ್ರದ ಅಭಿವೃದ್ಧಿಗೆ ಗಮನವನ್ನು ನೀಡಿದ್ದು, ಇಲ್ಲಿ ಸರ್ಕಾರದ ಏಕಸ್ವಾಮ್ಯ ಅಂತ್ಯವಾಗಿದೆ. ಕಲ್ಲಿದ್ದಲಿನ ಆಮದು ಅವಶ್ಯಕತೆಯನ್ನು ಅವಲಂಬಿಸಿರುತ್ತದೆ. ಆಮದನ್ನು ಕಡಿಮೆ ಮಾಡಲು ನಮ್ಮಲ್ಲಿಯೇ ಹೆಚ್ಚು ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡುವುದಕ್ಕೆ ಪ್ರಾಶಸ್ತ್ಯ ಇದರಿಂದು ಉದ್ಯೋಗ ನಿರ್ಮಾಣವಾಗಲಿದೆ. ಸರಳ ನಿಯಮಗಳ ಅನ್ವಯ 50 ಕಲ್ಲಿದ್ದಲು ಉತ್ಪಾದನಾ ಕ್ಷೇತ್ರಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು.
ಕೋಲ್ ಇಂಡಿಯಾ ಲಿಮಿಟೆಡ್ ಗಣಿಯನ್ನು ಖಾಸಗೀಕರಣ ಮಾಡಲು ಸರ್ಕಾರ ಸಮ್ಮತಿ ನೀಡಿದೆ. ಕಲ್ಲಿದ್ದಲು ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂ. ಅನುದಾನವನ್ನು ನೀಡಲಾಗಿದೆ.

ದೇಆದಲ್ಲಿ 500 ಮೈನಿಂಗ್ ಬ್ಲಾಕ್ ಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು. ಗಣಿಗಾರಿಕೆಯ ಗುತ್ತಿಗೆಯನ್ನು ವರ್ಗಾವಣೆ ಮಾಡಲಾಗುವುದು. ಖನಿನ ಸಂಪತ್ತು ವಲಯವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಲ್ಲದೆ ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಭಾರತವು ವಿಶ್ವ ಮಾರುಕಟ್ಟೆಯ ಜೊತೆ ಸ್ಪರ್ಧೆಗೆ ಸಿದ್ಧವಾಗಬೇಕಿದೆ.

ರಕ್ಷಣಾ ವಲಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಇಲ್ಲಿ ಅಗತ್ಯ ಇರುವ ಉತ್ಪನ್ನಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದಿಸಲಾಗುವುದು. ಸೇನೆಗೆ ಅವಶ್ಯಕವಾಗಿರುವಂತಹ ನೂತನ, ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಲಾಗುವುದು. ಆರ್ಡಿನಸ್ ಫ್ಯಾಕ್ಟರಿ ಸಾಂಸ್ಥೀಕರಣ ಮಾಡಲಾಗುವುದು. ಆದರೆ ಅದನ್ನು ಖಾಸಗೀಕರಣ ಒಳಪಡಿಸುವುದಿಲ್ಲ. ಆರ್ಡಿನಸ್ ಫ್ಯಾಕ್ಟರಿಯನ್ನು ಷೇರು ಮಾರುಕಟ್ಟೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು. ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಉತ್ಪಾದಾನದಲ್ಲಿ ಎಫ್‍ಡಿಐ ಹೂಡಿಕೆಯನ್ನು ಶೇ 49ರಿಂದ ಶೇ.74ಕ್ಕೆ ಏರಿಕೆ ಮಾಡಲಾಗಿದೆ.

ನಾಗರಿಕ ವಿಮಾನಯಾನ ಕ್ಷೇತ್ರದ ಸುಧಾರಣೆಗಾಗಿ ಆರು ವಿಮಾನ ನಿಲ್ದಾಣಗಳನ್ನು ಹರಾಜು ಮಾಡಲಾಗುವುದು. ಈಗಾಗಲೇ 12 ಏರ್ ಪೋರ್ಟ್ ಹರಾಜು ಹಾಕಲಾಗಿದ್ದು, ಹೊಸ ಪ್ರಕ್ರಿಯೆ ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯುವುದು. ಹರಾಜು ಮೂಲಕ ಒಟ್ಟು 13 ಸಾವಿರ ಕೋಟಿ ಆದಾಯದ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಖಾಸಗೀಕರಣ ಮತ್ತು ಹರಾಜು ಪ್ರಕ್ರಿಯೆಯಿಂದ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚ ತಗ್ಗಲಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿರುವ ಎಸ್ಕಾಂಗಳ ಸುಧಾರಣೆಗಾಗಿ ಖಾಸಗೀಕರಣ ಮಾಡಲಾಗುವುದು. ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ನಿಗಧಿತ ಸಮಯದಲ್ಲಿ ಪಾವತಿ ಮಾಡುವುದು. ಗ್ರಾಹಕರ ರಕ್ಷಣೆಗಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಗಳನ್ನು ಅಳವಡಿಸುವುದು. ದೇಶದ ವಿದ್ಯುತ್ ಪ್ರಸರಣಗಳಲ್ಲಿ ಬದಲಾವಣೆ ಮಾಡುವುದು. ಸಾಮಾಜಿಕ ಅಭಿವೃದ್ಧಿಯಲ್ಲಿ 8100 ಕೋಟಿ ರೂ. ಹೂಡಿಕೆ.
ಆಸ್ಪತ್ರೆಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು.

ಬಾಹ್ಯಾಕಾಶ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭವಿಷ್ಯದ ಬಾಹ್ಯಾಕಾಶ ಅಧ್ಯಯನದಲ್ಲಿ ಖಾಸಗಿಯವರಿಗೆ ಪಾಲು ಇರುತ್ತದೆ. ಉಪಗ್ರಹ ಉಡಾವಣೆಯಲ್ಲಿ ಖಾಸಗಿ ಕಂಪನಿಯವರಿಗೆ ಅವಕಾಶ. ಖಾಸಗಿ ಕಂಪನಿಗಳು ಇಸ್ರೋ ಸೌಲಭ್ಯವನ್ನು ಪಡೆಯುವ ಅವಕಾಶವನ್ನು ಒದಗಿಸಲಾಗುವುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here