ನಿನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​​​ ಕುರಿತಾಗಿ ಇಂದು ಬಹು ನಿರೀಕ್ಷಿತ ಎನಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸುದ್ದಿ ಗೋಷ್ಠಿಯಲ್ಲಿ ಅವರು ಅಭಿವೃದ್ಧಿ ಹಾಗೂ ಸ್ವಾವಲಂಬಿ ಭಾರತಕ್ಕಾಗಿ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ ಎಂದು ಹೇಳಿದ್ದು, ಇದು ಆತ್ಮ ನಿರ್ಭರ ಭಾರತ ಅಭಿಯಾನ ಅಂದರೆ ಸ್ವಯಂ ಅವಲಂಬಿತ ಭಾರತ ನಿರ್ಮಾಣದ ಪ್ಯಾಕೇಜ್ ಎಂದು ಹೇಳಿದ್ದಾರೆ. ಇದರಲ್ಲಿ ಐದು ಸ್ತಂಭಗಳಾದ ಆರ್ಥಿಕತೆ, ಮೂಲ ಸೌಕರ್ಯಗಳು, ತಂತ್ರಜ್ಞಾನ,, ಇ ಡೆಮಾಗ್ರಫಿ ಹಾಗೂ ಬೇಡಿಕೆಗಳ ಮೇಲೆ ಸ್ವಾವಲಂಬಿ ಭಾರತಕ್ಕಾಗಿ ಪ್ಯಾಕೇಜ್​ ಘೋಷಿಸಲಾಗಿದೆಯೆಂದಿದ್ದಾರೆ.

ಇಂದು ಸುದ್ದಿ ಗೋಷ್ಠಿಯ ಮೊದಲ ದಿನವಾಗಿದ್ದು,
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ
3 ಲಕ್ಷ ಕೋಟಿ ಸಾಲವನ್ನು ನೀಡಲಾಗುತ್ತಿದೆಯೆಂದು ತಿಳಿಸಿದ್ದಾರೆ. ಈ ಸಾಲ ಜಾಮೀನುರಹಿತವಾದುದು ಎಂದು ತಿಳಿಸಿದ್ದು, ಇದರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಚೈತನ್ಯ ತುಂಬಲಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ಎಂಎಸ್ಎಂಇ ಅಂದರೆ ಮೈಕ್ರೂ, ಸ್ಮಾಲ್, ಮೀಡಿಯಂ ಎಂಟರ್ ಪ್ರೈಸಸ್ ಅಂದರೆ ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಅಭಿವೃದ್ಧಿ ಹಾಗೂ ಚೇತರಿಕಯೆ ಕಡೆಗೆ ಮಹತ್ವ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 2 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಕಂಪನಿಗಳಿಗೆ ಲಾಭವಾಗಲಿದೆ ಎನ್ನಲಾಗಿದೆ.

5 ರಿಂದ 10 ಕೋಟಿ ರೂಪಾಯಿ ಹೂಡಿಕೆಯಾಗುವ ಸಂಸ್ಥೆಗಳನ್ನು ಸ್ಮಾಲ್, 10-20 ಕೋಟಿ ಹೂಡಿಕೆಯಾಗುವ ಸಂಸ್ಥೆಗಳನ್ನು ಮೀಡಿಯಂ ಕೆಟಗರಿಯಲ್ಲಿ ಪರಿಗಣಿಸಲಾಗುತ್ತದೆ.‌

100ಕ್ಕಿಂತ ಕಡಿಮೆ ಉದ್ಯೋಗಿಗಳಿರುವ (ಶೇ.90ಕ್ಕಿ ಕಡಿಮೆ ಉದ್ಯೋಗಿಗಳಿಗೆ ಮಾಸಿಕ 15 ಸಾವಿರಕ್ಕಿಂತ ಕಡಿಮೆ ಸಂಬಳ ಇರುವ) MSME ಗಳ ಹಾಗೂ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಇಪಿಎಫ್​​ ಕಂತನ್ನು ಮುಂದಿನ ಮೂರು ತಿಂಗಳಿಗೂ ಕೇಂದ್ರ ಸರ್ಕಾರವೇ ನೀಡಲಿದೆ. ಕೈಗಾರಿಕೆಗಳಿಗೆ ಮೂರು ತಿಂಗಳ ಇಪಿಎಫ್ ನೆರವು ನೀಡಿದ್ದು, ಇಪಿಎಫ್ ಪೇಮೆಂಟ್ ಗಾಗಿ 2,500 ಕೋಟಿ ನೆರವನ್ನು ನೀಡಲಾಗಿದೆ. ಇದರಿಂದ 72 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ.

ಟೆಂಡರ್ ನೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ವಿದೇಶಿ ಕಂಪನಿಗಳಿಗೆ ಅವಕಾಶವಿಲ್ಲ ಎಂದಿದ್ದು ಸುಮಾರು 200 ಕೋಟಿಗಳವರೆಗಿನ ಜಾಗತಿಕ ಟೆಂಡರ್ ಇಲ್ಲ ಎಂದಿದ್ದು, ಇದರಿಂದ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ದೊಡ್ಡ ಲಾಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪಿಎಫ್ 12% ನಿಂದ 10% ಗೆ ಇಳಿಕೆ ಮಾಡಲಾಗಿದೆ. ಬ್ಯಾಂಕೇತರ ಸಂಸ್ಥೆಗಳಿಗೆ 30,000 ಕೋಟಿ ನೆರವನ್ನು ಘೋಷಣೆ ಮಾಡಲಾಗಿದೆ. ರೈಲ್ವೆ, ರಸ್ತೆ ಟೆಂಡರ್ ಮುಗಿಸಲು ಆರು ತಿಂಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಮಾರುಕಟ್ಟೆ ವಿಸ್ತರಣೆಗೆ 10,000 ಕೋಟಿಯನ್ನು ಮೀಸಲಿಡಲಾಗಿದೆ. ವಿದ್ಯುತ್ ಕಂಪನಿಗಳಿಗೆ 90,000 ಕೋಟಿಗಳ ನೆರವು ನೀಡಲಾಗಿದೆ.

NBFC ಗಳಿಗೆ 45 ಸಾವಿರ ಕೊಟಿ ರೂಪಾಯಿ ಸಹಾಯ ಯೋಜನೆ; ಇದರಂತೆ ಮೊದಲ ಶೇ.20 ನಷ್ಟವನ್ನು ಭಾರತ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here