ಲಾಕ್ ಡೌನ್ ನಿಂದ ದೇಶದಲ್ಲಿ ಬಹುತೇಕ ಬಡವರ ಸ್ಥಿತಿ ಅತಂತ್ರವಾಗಿದೆ. ದೇಶದ ಬೆನ್ನೆಲುಬಾದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಿನ ಅಗತ್ಯವಿದೆ, ಅವರ ಧೈರ್ಯಗುಂದದಂತೆ ನೋಡಿಕೊಳ್ಳುವ ಜವಾಬ್ದಾರಿಯು ಸರ್ಕಾರದ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದ ಅನ್ನದಾತರಾದ ರೈತರ ನೆರವಿಗೆ ನಿಂತಿದ್ದು, ಕೇಂದ್ರ ಸರ್ಕಾರವು ಈಗಾಗಲೇ ಘೋಷಣೆ ಮಾಡಿದ್ದಂತಹ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಕೇಂದ್ರಸರ್ಕಾರ ಹಣದ ನೆರವನ್ನು ನೀಡುತ್ತಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮಾಡಿದ್ದಾರೆ.

ನಿರ್ಮಲಾ ಅವರು ತಮ್ಮ ಟ್ವೀಟ್ ನಲ್ಲಿ “ಮಾರ್ಚ್ 2020 ರಿಂದ, ಲಾಕ್‌ಡೌನ್ ಸಮಯದಲ್ಲಿ ಪಿಎಂ-ಕಿಸಾನ್ ಅಡಿಯಲ್ಲಿ 18,253 ಕೋಟಿ ರೂ. ಗಳನ್ನು 9.13 ಕೋಟಿ ರೈತರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು 4,22,113 ಕೋಟಿ ರೂ.ಗಳ ಕೃಷಿ ಸಾಲ ಹೊಂದಿರುವ ಸುಮಾರು ಮೂರು ಕೋಟಿ ರೈತರಿಗೆ 3 ತಿಂಗಳ ಸಾಲ ಮತ್ತು ಬಡ್ಡಿ ಪಾವತಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೊಂದು ಟ್ವೀಟ್ ಕೂಡಾ ಮಾಡಿರುವ ವಿತ್ತ ಸಚಿವರು ಅದರಲ್ಲಿ ಇನ್ನಷ್ಟು ಮಾಹಿತಿಯನ್ನು ಕೂಡಾ ನೀಡಿದ್ದಾರೆ.

ಅವರ ಟ್ವೀಟ್ ನಲ್ಲಿ ಇನ್ಫ್ರಾ ಯೋಜನೆಗಳ ಮೂಲಕ ಗ್ರಾಮೀಣ ಉದ್ಯೋಗವನ್ನು ಉತ್ತೇಜಿಸಲು 2020 ರ ಮಾರ್ಚ್‌ನಲ್ಲಿ ಆರ್‌ಐಡಿಎಫ್ ಅಡಿಯಲ್ಲಿ ರಾಜ್ಯಗಳಿಗೆ 4224 ಕೋಟಿ ರೂ. ಮಾರ್ಚ್, 2020 ರಿಂದ ರಾಜ್ಯ ಸರಕಾರಿ ಸಂಸ್ಥೆಗಳಿಗೆ ಕೃಷಿ ಸರಕುಗಳನ್ನು ಖರೀದಿಸಲು 6700 ಕೋಟಿ ರೂ.ಗಳ ಕಾರ್ಯ ಬಂಡವಾಳ ಮಿತಿಯನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here