ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿತ್ ಗಡ್ಕರಿ ಅವರು , ಸಾರಿಗೆ ನಿಯಮವನ್ನು ಉಲ್ಲಂಘಿಸಿದವರಿಗೆ ವಿಧಿಸುತ್ತಿರುವ ಭಾರೀ ಪ್ರಮಾಣದ ದಂಡದ ಕ್ರಮವನ್ನು ಸರಿಯೆಂದು ಸಮರ್ಥಿಸಿಕೊಂಡಿಸಿದ್ದಾರೆ. ಈ ಹೊಸ ನಿಯಮಗಳು ಜಾರಿಯಾಗಿರುವುದು ರಸ್ತೆ ಅಪಘಾತಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಎಂದು ಹೇಳಿರುವ ಅವರು, ಸಾರಿಗೆ ನಿಯಮಗಳನ್ನು ಸಮರ್ಪಕವಾಗಿ ಪಾಲನೆ ಮಾಡುವವರು ಇದರ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಕಾನೂನಿನ ಬಗ್ಗೆ ಗೌರವವಿಲ್ಲದೆ, ಭಯವಿಲ್ಲದೆ ನಡೆದುಕೊಂಡಿದ್ದಕ್ಕೆ,ಅದಕ್ಕೆಲ್ಲಾ ಕಡಿವಾಣ ಹಾಕಲು ಇಂತಹುದೊಂದು ಕಠಿಣ ಕ್ರಮ ತರಬೇಕಾಯಿತು ಎಂದಿದ್ದಾರೆ.

ಅವರು ಮಾತನಾಡುತ್ತಾ ಮಾನವ ಜೀವನ ಅಮೂಲ್ಯವಾದುದಲ್ಲವೇ? ಒಮ್ಮೆ ತಮ್ಮ ಪ್ರೀತಿ ಪಾತ್ರರನ್ನು ಅಪಘಾತದಲ್ಲಿ ಕಳೆದುಕೊಂಡವರಲ್ಲಿ ಕೇಳಿ ನೋಡಿ ಅವರ ನೋವು ಏನೆಂದು ತಿಳಿಯುತ್ತದೆ. ಅಲ್ಲದೆ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನುಪ್ಪುತ್ತಿರುವವರಲ್ಲಿ 65% 18 ರಿಂದ 35 ವರ್ಷ ವಯೋಮಾನದವರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ತಾನೂ ಕೂಡಾ ರಸ್ತೆ ಅಪಘಾತ ಸಂತ್ರಸ್ತ ಎಂದು ಹೇಳಿದ ಅವರು, ಸರಿಯಾದ ರೀತಿಯಲ್ಲಿ ಆಲೋಚಿಸಿ, ಪರಾಮರ್ಶೆ ಮಾಡಿ ಅನಂತರವೇ ಈ ಹೊಸ ಕಾನೂನನ್ನು ಜಾರಿ ಮಾಡಲಾಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಇಂಟೆಲಿಜೆನ್ಸ್‌ ಟ್ರಾಫಿಕ್‌ ಸಿಸ್ಟಮ್‌ (ಕೃತಕ ಬುದ್ಧಿಮತ್ತೆ ಸಾರಿಗೆ ವ್ಯವಸ್ಥೆ) ಯಾರಿಗೂ ತಾರತಮ್ಯ ಮಾಡುವುದಿಲ್ಲವೆಂದೂ, ಕೇಂದ್ರ ಸಚಿವರಾಗಿರಲಿ, ಮುಖ್ಯಮಂತ್ರಿಯಾಗಿರಲಿ, ಅಧಿಕಾರಿಗಳೇ ಆಗಿರಲಿ , ಯಾರೇ ಆದರೂ ಸರಿಯೇ ಅವರು ಸಾರಿಗೆ ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕು ಎಂದು ಗಡ್ಕರಿ ಹೇಳಿದ್ದಾರೆ. ಸರಿಯಾದ ದಾಖಲೆಗಳು ಇಲ್ಲದಿರುವಾಗ ಮಾತ್ರ ದುಬಾರಿ ದಂಡ ತೆರಬೇಕಾಗುವುದೇ ಹೊರತು ಎಲ್ಲಾ‌ ದಾಖಲೆಗಳು ಇದ್ದಾಗ ದಂಡ ತೆರುವ ಅಗತ್ಯ ಇರುವುದಿಲ್ಲ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here