ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ಎಂದರೆ ಅದು ನಟಿ ರಚಿತಾ ರಾಮ್. ಪ್ರಸ್ತುತ ಅವರ ಮನೆಯಲ್ಲಿ ಅವರ ಅಕ್ಕ ನಿತ್ಯಾ ರಾಮ್ ಅವರ ಮದುವೆಯ ಸಂಭ್ರಮ ಮನೆ ಮಾಡಿದೆ. ಇದೇ ಡಿಸೆಂಬರ್ 4 ರಂದು ನಿತ್ಯಾ ರಾಮ್ ಅವರು ಆಸ್ಟ್ರೇಲಿಯಾದ ಹುಡುಗನೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ನಿತ್ಯಾ ಅವರ ಮದುವೆಯ ತಯಾರಿ ಅವರ ಮನೆಯಲ್ಲಿ ಸಾಕಷ್ಟು ಸಂಭ್ರಮದಿಂದ ನಡೆಯುತ್ತಿದೆ. ಅಕ್ಕ ತಂಗಿಯರಿಬ್ಬರು ನಟಿಯರು. ರಚಿತಾ ರಾಮ್ ಸಿನಿಮಾಗಳಲ್ಲಿ ಜನಪ್ರಿಯ ರಾದರೆ, ಅಕ್ಕ ನಿತ್ಯಾ ರಾಮ್ ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲೂ ನಟಿಸಿದ್ದರೂ, ಅವರು ಜನಪ್ರಿಯತೆಯನ್ನು ಪಡೆದಿರುವುದು ಕಿರು ತೆರೆ ನಟಿಯಾಗಿ‌.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಿತ್ಯಾ ರಾಮ್ ಮನೆ ಮಾತಾಗಿದ್ದಾರೆ.
ಸದ್ಯ ರಚಿತಾ ರಾಮ್ ಅವರು ತಮ್ಮ ಅಕ್ಕನ ಮದುವೆಯ ತಯಾರಿಯಲ್ಲಿದ್ದು, ತಮ್ಮ ಬಾವ ಆಗಲಿರುವವರು ಆಸ್ಟ್ರೇಲಿಯಾದವರಾದರೂ, ಮೂಲತಃ ಅವರು ಕರ್ನಾಟಕದವರೇ, ಅವರು ಅಪ್ಪಟ ಕನ್ನಡಿಗ ಎಂದು ಹೇಳಿದ್ದಾರೆ. ಮದುವೆಯ ನಂತರ ಅಕ್ಕ ಬಾವ ಇಬ್ಬರೂ ಆಸ್ಟ್ರೇಲಿಯಾದಲ್ಲೇ ನೆಲೆಸಲಿದ್ದಾರೆ ಎಂದು ರಚಿತಾ ರಾಮ್ ಹೇಳಿದ್ದಾರೆ.

ಅಕ್ಕನ ಮದುವೆ ಇನ್ನು ಕೆಲವೇ ದಿನಗಳಿವೆ ಎನ್ನುವಾಗಲೇ ರಚಿತಾ ಅವರು 2.4 ಕೋಟಿ ರೂ ನೀಡಿ ಬೆಂಜ್ ಕಾರನ್ನು ಕೂಡಾ ಖರೀದಿ ಮಾಡಿದ್ದರು.‌ ಮದುವೆಗೆ ಇನ್ನೆರಡು ದಿನಗಳು ಮಾತ್ರವೇ ಬಾಕಿಯಿದ್ದು, ಈಗಾಗಲೇ ಮದುವೆ ಶಾಸ್ತ್ರಗಳು ಆರಂಭವಾಗಿದೆ. ರಚಿತಾ ಅವರು ಸದ್ಯಕ್ಕೆ ತಮ್ಮ ಸಿನಿಮಾಗಳ ಚಿತ್ರೀಕರಣದ ಬ್ಯುಸಿ ಶೆಡ್ಯೂಲ್ ನಿಂದ ದೂರ ಉಳಿದಿದ್ದು, ಅಕ್ಕನ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದು, ಮದುವೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here