ಭಾರತದಿಂದ ಪರಾರಿಯಾಗಿ ಅಮೆರಿಕಾ ಸೇರಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಅಲ್ಲೊಂದು ದ್ವೀಪವನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಒಂದು ಹೊಸ ದೇಶವನ್ನೆ ಕಟ್ಟುತ್ತಿರುವುದಾಗಿ ಘೋಷಣೆ ಕೂಡಾ ಮಾಡಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾದ್ಯಮಗಳಲ್ಲಿ ಹರಿದಾಡಿ ದೊಡ್ಡ ಸದ್ದು ಮಾಡಿದೆ. ನಿತ್ಯಾನಂದನನ್ನು ಗುಜರಾತ್​ನ ಪೊಲೀಸರು ಅತ್ಯಾಚಾರ ಸೇರಿದಂತೆ, ಇನ್ನೂ ಹಲವು ಪ್ರಕರಣಗಳಿಗೆ ಆತನನ್ನ ಹುಡುಕುತ್ತಿರುವಾಗಲೇ ಆತ ದೇಶ ಬಿಟ್ಟು ಓಡಿ ಹೋಗಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ನಿತ್ಯಾನಂದ ಈಗ ಅಲ್ಲಿಂದ ಕೋರ್ಟ್​ಗೆ ಸವಾಲ್​ ಹಾಕುವ ಮಟ್ಟಕ್ಕೆ ಹೋಗಿದ್ದಾನೆ.

ನಿತ್ಯಾನಂದ ತಾನು ವಾಸ್ತವಗಳನ್ನು ಹಾಗೂ ಸತ್ಯವನ್ನ ಬಹಿರಂಗ ಪಡಿಸಿ, ತನ್ನ ಸಮಗ್ರತೆಯನ್ನು ಪ್ರದರ್ಶಿಸುವುದಾಗಿ ಹೇಳಿದ್ದಾನೆ. ಪ್ರಸ್ತುತ ತನ್ನನ್ನು ಯಾರೂ ಕೂಡಾ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿ ಉದ್ಟಟತನವನ್ನು ಮೆರೆದಿದ್ದಾನೆ‌. ಅಲ್ಲದೆ ತಾನು ಒಂದು ಸತ್ಯವನ್ನು ಹೇಳುವುದಾಗಿ, ಅದೇನೆಂದರೆ ತಾನೇ ಪರಮಶಿವ ಎಂದು ಹೇಳಿಕೊಂಡಿದ್ದಾ‌ನೆ. ನಾನೇ ಪರಮಶಿವ ಎಂದಿರುವ ಅವನು ಯಾವುದೇ ಸ್ಟುಪಿಡ್ ಕೋರ್ಟ್ ಕೂಡಾ ನನ್ನನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾ‌ನೆ. ನನ್ನನ್ನು ಸತ್ಯ ಹೇಳುವುದರಿಂದ ಯಾರು ತಡೆಯಲು ಸಾಧ್ಯವಿಲ್ಲ. ನಾನೇ ಪರಮಶಿವನಾಗಿದ್ದು, ನಿಮ್ಮ ನಿಷ್ಠೆಯನ್ನು ನನಗೆ ತೋರಿಸಿ ಎಂದು ಹೇಳಿದ್ದಾನೆ ನಿತ್ಯಾನಂದ. ಅಲ್ಲದೆ ಅವನಿಗೆ ನಿಷ್ಠೆ ತೋರಿಸಿದ ಯಾರಿಗೂ ಸಾವಿಲ್ಲ ಎಂದು ಆಶ್ವಾಸನೆ ನೀಡಿದ್ದಾನೆ.

ಭಾರತದಿಂದ ಪರಾರಿಯಾದ ನಿತ್ಯಾನಂದ ಈಗ ದೂರ ದೇಶದಲ್ಲಿ ಕುಳಿತು ಮನಬಂದಂತೆ ಮಾತನಾಡುತ್ತಿರುವ ಸಂದೇಶವನ್ನು ಹರಿ ಬಿಟ್ಟಿದ್ದಾನೆ.
ನಿತ್ಯಾನಂದನ ಈ ಸಂದೇಶದ ಈಗಾಗಲೇ‌ ತಿಳಿದರುವ ಭದ್ರತಾ ಸಂಸ್ಥೆಗಳು, ಇಲಿಯೊಂದನ್ನು ಹಿಡಿಯಲೇಬೇಕೆಂದು, ಅಂತರಾಷ್ಟ್ರೀಯ ಸಂಸ್ಥೆಗಳ ಜೊತೆ ರಹಸ್ಯ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ನಿತ್ಯಾನಂದ ನಂತಹ ದೇವಮಾನವರ ಆಟ ಗಳು ಯಾವಾಗ ಅಂತ್ಯವಾಗುತ್ತದೆ ಎಂಬುದನ್ನು ನೋಡ ಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here