ಸರ್ಕಾರ ಅಭದ್ರವಾಗಿ ಕೆಲವು ದಿನಗಳೇ ಕಳೆದು ಹೋಗಿದೆ. ಕರ್ನಾಟಕ ರಾಜಕಾರಣ ದಿಕ್ಕೆಟ್ಟು ನಡೆಯುವ ಈ ಸಂದರ್ಭದಲ್ಲಿ, ರಾಜ್ಯದಲ್ಲಿ ರಾಜಕೀಯ ಹೈ ಡ್ರಾಮಾ ನಡೆಯುವಾಗಲೇ, ನೆರೆಯ ಗೋವಾದಲ್ಲಿ ಕೂಡಾ ರಾಜಕೀಯ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಗೋವಾದಲ್ಲೂ ಕೂಡಾ ಕಾಂಗ್ರೆಸ್ ಶಾಸಕರು ಅಲ್ಲಿನ ಆಡಳಿತದಿಂದ ಅತೃಪ್ತರಾಗುವ ಬದಲಿಗೆ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ತಾವೆಲ್ಲಾ ಕಾಂಗ್ರೆಸ್ ನ ಕೈ ಬಿಟ್ಟು, ಕಮಲದ ಕಡೆ ಮುಖ ಮಾಡಲು ಮುಂದಾಗಿದ್ದಾರೆ. ನಮ್ಮಲ್ಲಿ ಅಸ್ತಿತ್ವದಲ್ಲಿ ಇರುವ ಸರ್ಕಾರದ ಬಗ್ಗೆ ಅಸಮಾಧಾನದಿಂದ ರಾಜೀನಾಮೆ ನೀಡಿ ಶಾಸಕರು ಮುಂಬೈ ಸೇರಿದ್ದಾರೆ.

ಕೋಪಿಸಿಕೊಂಡು ರಾಜೀನಾಮೆ ನೀಡಿ, ಮುಂಬೈ ಸೇರಿದ ಅತೃಪ್ತರನ್ನು ಮರಳಿ ಗೂಡಿಗೆ ತರಲು ಹರಸಾಹಸವನ್ನು ಮೈತ್ರಿ ನಾಯಕರು ಮಾಡುತ್ತಿದ್ದಾರೆ. ಆದರೆ ಅದು ಫಲಕಾರಿಯಾಗುವ ಸೂಚನೆಗಳು ಮಾತ್ರ ಇಲ್ಲ. ಕರ್ನಾಟಕದಲ್ಲಿ ಇಂತಹ ಅತಂತ್ರ ಪರಿಸ್ಥಿತಿ ಇದ್ದರೆ, ಅತ್ತ ಗೋವಾದಲ್ಲಿ ಬಿಜೆಪಿ ಆಡಳಿತವಿದ್ದು , ಅಲ್ಲಿನ ಮುಖ್ಯಮಂತ್ರಿ ಅವರು ಆಡಳಿತವನ್ನು ಉತ್ತಮವಾಗಿ ನಡೆಸುತ್ತಿದ್ದಾರೆ, ಅವರ ಕಾರ್ಯ ವಿಧಾನವನ್ನು ಮೆಚ್ಚಿ ಕಾಂಗ್ರೆಸ್ ಶಾಸಕರು ತಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿನ 15 ಶಾಸಕರಲ್ಲಿ ಈಗಾಗಲೇ 10 ಜನರು ರಾಜೀನಾಮೆಯನ್ನು ನೀಡಿದ್ದಾರೆ ಹಾಗೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 40 ಸದಸ್ಯರ ಬಲವನ್ನು ಹೊಂದಿರುವ ಗೋವಾ ವಿಧಾನ ಸಭೆಯಲ್ಲಿ ಕಾಂಗ್ರೆಸ್ ನ 15 ಶಾಸಕರಿದ್ದರು. ಆದರೆ ಈಗ ನಡೆದಿರುವ ಬೆಳವಣಿಗೆಗಳಿಂದಾಗಿ , ವಿಪಕ್ಷ ನಾಯಕರಾದ ಚಂದ್ರಕಾಂತ್ ಬಾಬು ಕವಳೇಕರ್ ಅವರ ನೇತೃತ್ವದಲ್ಲಿ ಹತ್ತು ಜನ ಶಾಸಕರು ಬಂಡಾಯ ಎದ್ದು, ತಮ್ಮನ್ನು ಬಿಜೆಪಿ ಜೊತೆ ವಿಲೀನಗೊಳಿಸುವಂತೆ ಸ್ಪೀಕರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here