ಕೇರಳ ರಾಜ್ಯ ಪ್ರವಾಹದಿಂದ ಮಳೆಯಿಂದ ತತ್ತರಿಸಿದೆ ಎಂಬುದು ದೇಶಕ್ಕೇ ಗೊತ್ತು. ಆದರೆ ನಮ್ಮ ಕರ್ನಾಟಕದಲ್ಲಿ ಸಹ ಅಷ್ಟೇ ಆಪತ್ತು ಸಂಭವಿಸುತ್ತಿದೆ ಎಂಬುದು ದೇಶದ ಹಲವರಿಗೆ ಗೊತ್ತೇ ಆಗಿಲ್ಲ. ಕಳೆದ ಕೆ ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ‌ಸಹಿತ ಮಳೆಗೆ ಕರ್ನಾಟಕದ ಕಾಶ್ಮೀರ ಕೊಡಗು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೂರೇ ದಿನದಲ್ಲಿ 32 ಜನರು ಸಾವೀಗೀಡಾಗಿದ್ದಾರೆ ಎನ್ನುವ ಆತಂಕಕಾರಿ ಸುದ್ದಿ ಜೊತೆಗೆ ಗುಡ್ಡಗಳು ಕುಸಿಯುತ್ತಿರುವ ಭಯದಿಂದ ಮನೆಗಳನ್ನು ತೊರೆದು ಬೆಟ್ಟದ ಮೇಲೆ ಸೇರಿಕೊಂಡಿರುವ ಸುಮಾರು 600 ಕ್ಕೂ ಹೆಚ್ಚಿನ ಜನರ ಪೈಕಿ 300 ಜನರ ಸಂಪರ್ಕ ಇನ್ನೂ ಸಿಗುತ್ತಿಲ್ಲ ಎಂಬ ಆತಂಕಕಾರಿ ಸುದ್ದ ಬೆಳಕಿಗೆ ಬಂದಿದೆ.

ಬಾರಿ ಬಿರುಗಾಳಿ ಬೀಸುತ್ತಿರುವುದರ ಪರಿಣಾಮವಾಗಿ ಗುಡ್ಡಗಳ ಕುಸಿಯುತ್ತಿವೆ ಕೆಲವೆಡೆ ಮನೆಗಳು ಸಹ ಕುಸಿದು ಬೀಳುತ್ತಿವೆ. ಇನ್ನು ಕೊಡಗುವಿನಿಂದ ಹೊರಗೆ ಬರಲು‌ ಎಲ್ಲೆಂದರಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹರಿಯುತ್ತಿರುವದರಿಂದ ಕೆಲವು ಜನ ಪ್ರಾಣ ರಕ್ಷಣೆ ಹಾಗೂ ಕುಟುಂಬದ ರಕ್ಷಣೆ ಮಾಡಿಕೊಳ್ಳಲು ಗುಡ್ಡದ ಮೇಲೆ ತೆರಳಿದ್ದಾರೆ. ಆದರೆ ಅವರಲ್ಲಿ‌ ಕೆಲವರು ನಾಪತ್ತೆಯಾಗಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಇನ್ನು ಹಲವೆಡೆ ಮನೆಗಳ ತುಂವಾ ನೀರು ರಸ್ತೆಗಳ ತುಂಬಾ ನೀರು ನದಿಯಂತೆ ಮಾರ್ಪಡುತ್ತಿವೆ.ಹೊಲ ಗದ್ದೆಗಳು ನಾಶವಾಗಿವೆ. ಮನೆಗಳು ಬೀಳುತ್ತಿವೆ.

ಮಳೆ ಕಮ್ಮಿಯಾಗದ ಕಾರಣ ನದಿ ನೀರಿನ ರಭಸ ಹೆಚ್ಚಾಗಿ ನೀರು ಗ್ರಾಮಗಳಿಗೆ ಪ್ರವೇಶ ಮಾಡಿದೆ. ಕೊಡಗಿನ ಜನರ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಕೊಡಗಿನಲ್ಲಿ ಅವಾಂತರ ಸೃಷ್ಟಿಸರುವ ಬಿರುಗಾಳಿ ಸಹಿತ ಮಳೆ ಕರಾವಳಿ ಭಾಗದ ಜನರಿಗೂ ಆತಂಕ ಸೃಷ್ಟಿಸಿದೆ. ಕರಾವಳಿ‌ ಭಾಗದ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳೆ ಹೀಗೇ ಮುಂದುವರಿದರೆ ಕರಾವಳಿ ಭಾಗದ ಜನರು ಸಹ ಪ್ರವಾಹದ ಭೀತಿ ಎದುರಿಸುವ ಸಾಧ್ಯತೆ ಇದ್ದು ಸರ್ಕಾರ ಮುನ್ನೆಚ್ವರಿಕೆ ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಪಾತ್ರ ವಹಿಸಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here