ನಮ್ಮ ಕನ್ನಡ ಚಿತ್ರರಂಗ ಇಂದು ವಿಶ್ವವ್ಯಾಪಿ ಹೆಸರು ಮಾಡಿದೆ. ಹಲವಾರು ಹೊಸಬರ ಚಿತ್ರಗಳು ದೇಶದ ಗಡಿಯಾಚೆಗೆ ಸದ್ದು ಮಾಡಲು ಆರಂಭಿಸಿವೆ. ಪ್ರಯೋಗಾತ್ಮಕ ,ಹಾರರ್ ಚಿತ್ರಗಳು ಕನ್ನಡದಲ್ಲೂ ಹೆಚ್ಚುತ್ತಿವೆ . ಈಗ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಮತ್ತೊಂದು ಹೊಸ ತಂಡದ ಸಿನಿಮಾವೇ ರತ್ನಮಂಜರಿ. ಕನ್ನಡದ ಮೇಲಿನ  ಅಪಾರ ಅಭಿಮಾನದಿಂದಾಗಿ ವಿದೇಶಿ  ಕನ್ನಡಿಗರು ಸಿನಿಮಾ ರಂಗದತ್ತ ಮುಖ  ಮಾಡುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ರತ್ನಮಂಜರಿ ತಂಡ .

ಅಮೆರಿಕಾದಲ್ಲಿ ನಡೆದ ಭಾರತೀಯರೊಬ್ಬರ ಕೊಲೆಯ ಹಿನ್ನೆಲೆಯಾಗಿಟ್ಟುಕೊಂಡು ಇವರು ಸಿನಿಮಾ ಮಾಡುತ್ತಿದ್ದು, ಕೆಲ ಅನಿವಾಸಿ ಕನ್ನಡಿಗರು ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ.  ಜೊತೆಗೆ  ಕನ್ನಡ ಚಿತ್ರರಂಗಕ್ಕೆ ಹೆಚ್ಚು ವಿಭಿನ್ನ ಚಿತ್ರಗಳೊಂದಿಗೆ ಕಾಲಿಡುತ್ತಿದ್ದಾರೆ.

ಅಂತೆಯೇ  ಇದೊಂದು ಮರ್ಡರ್‌ ಮಿಸ್ಟರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ನಟರಾಜ್‌ ಹಳೇಬಿಡು ಮತ್ತು ತಂಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 

ಚಿತ್ರದಲ್ಲಿ ರಾಜ್‌ ಚರಣ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಖಿಲಾ ಪ್ರಕಾಶ್ ,ಶ್ರದ್ಧಾ  ಸಾಲಿಯಾನ್ ,ಪಲ್ಲವಿ ರಾಜು  ನಾಯಕಿಯರಾಗಿ  ನಟಿಸಿದ್ದಾರೆ. ಮಾ.23 ರಂದು ಚಿತ್ರದ  ಟೀಸರ್ ಬಿಡುಗಡೆಯಾಗಿದೆ.

https://youtu.be/hrydEMvcnTc

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here