ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಬಳಿಕ ಭಾರತ-ಪಾಕ್ ಗಡಿಯಲ್ಲಿ ಸಮರ ಸನ್ನಿವೇಶ ಸೃಷ್ಟಿಯಾಗಿದೆ. ಪಾಕಿಸ್ತಾನ ಕಮಾಂಡೋ ಪಡೆ ನಿಯೋಜಿಸಿದ್ದು, ಇಂದಿನಿಂದ ೩ ದಿನಗಳ ಕಾಲ ಕ್ಷಿಪಣಿ ಪರೀಕ್ಷೆಗೂ ಮುಂದಾಗಿದೆ. ಈ ಎಲ್ಲ ಬೆಳವಣಿಗೆಗಳು ಯುದ್ಧದ ಸಾಧ್ಯತೆಯನ್ನು ಸನ್ನಿಹಿತಗೊಳಿಸಿವೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್, ಭಾರತದ ವಿರುದ್ಧ ಅಂತಿಮ ಯುದ್ಧ ಅಕ್ಟೋಬರ್-ನವೆಂಬರ್‌ನಲ್ಲಿ ಪೂರ್ಣ ಪ್ರಮಾನದ ಯುದ್ಧವೇ ನಡೆಯಲಿದೆ. ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ಘೋಷಿಸಿದ್ದಾರೆ.

ಕಾಶ್ಮೀರ ವಿವಾದವನ್ನು ಬಗೆಹರಿಸಬೇಕೆಂಬ ಉದ್ದೇಶ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಇದ್ದಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗುತ್ತಿತ್ತು. ಆದರೆ ಇಲ್ಲಿಯೂ ಪಾಕ್‌ಗೆ ವ್ಯತಿರಿಕ್ತ ತೀರ್ಮಾನ ಬಂದಿದೆ. ಹಾಗಾಗಿ ಭಾರತದ ಜತೆ ಮಾತುಕತೆ ಎನ್ನುವುದ ಮೂರ್ಖತನ. ಪ್ರಸ್ತುತ ನಿರ್ಣಾಯಕ ಯುದ್ಧದ ಸಮಯ ಬಂದಿದೆ ಎಂದು ರಶೀದ್ ಹೇಳಿಕೊಂಡಿದ್ದಾರೆ. ಕಾಶ್ಮೀರಕ್ಕಾಗಿ ಅಂತಿಮ ಸ್ವಾತಂತ್ರ್ಯ ಸಂಗ್ರಾಮ ನಡೆಸುವ ಸಮಯ ಬಂದಿದೆ ಎಂದೂ ಆರ್ಭಟಿಸಿರುವ ಪಾಕ್ ಸಚಿವ ಸರ್ವಾಧಿಕಾರಿ ಭಾರತದ ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಕಾಶ್ಮೀರ ನಾಶವಾಗುತ್ತಿದೆ.

ಅರಿಗಿರುವ ಒಂದೇ ಒಂದು ಅಡ್ಡಗೋಡೆಯೆಂದರೆ ಪಾಕಿಸ್ತಾನ. ಈ ವಿಚಾರದಲ್ಲಿ ಜಗತ್ತಿನ ಮುಸ್ಲಿಂ ದೇಶಗಳು ಏಕೆ ದಿವ್ಯಮೌನ ತಾಳಿದೆ ಎಂದೂ ಅಚ್ಚರಿಯಿಂದ ಪ್ರಶ್ನಿಸಿದ್ದಾರೆ.
ಭಾರತದ ವಿರುದ್ಧ ಯುದ್ಧದ ಹಾದಿಯಲ್ಲಿರುವ ಪಾಕ್ ಅಗಸ್ಟ್ ೨೮ ಮತ್ತು ೩೧ ರಂದು ಕ್ಷಿಪಣಿ ಪರೀಕ್ಷೆಗೆ ಸಜ್ಜಾಗಿದೆ. ಕರಾಚಿ ಬಳಿಯ ಸೊನ್ಮಿಯಾನಿ ಪರೀಕ್ಷಾ ಶ್ರೇಣಿಯಿಂದ ಕ್ಷಿಪಣಿ ಪರೀಕ್ಷೆ ನಡೆಯಲಿದ್ದು ಬುಧವಾರ ವಾಯುಪಡೆ ಮತ್ತು ನೌಕಾದಳಕ್ಕೆ ಎಚ್ಚರಿಸಲಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here