ವಾರಭವಿಷ್ಯ (14 ರಿಂದ 20ಅಕ್ಟೋಬರ್, 2018)

ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com

ಮೇಷ(14 ರಿಂದ 20ಅಕ್ಟೋಬರ್, 2018)

ಬಹು ದಿವಸದಿಂದ ಸರಿಯಾದ ಮಾರ್ಗದರ್ಶನವಿಲ್ಲದೆಯೇ ಚಡಪಡಿಸುತ್ತಿದ್ದ ನಿಮಗೆ ಒಳ್ಳೆಯ ಮಾರ್ಗದರ್ಶನ ಲಭಿಸುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ. ಅನಿರೀಕ್ಷಿತ ಧನಾಗಮ. ಸಾಲದ ಸುಳಿಯಿಂದ ಹೊರ ಬರಲು ಹಲವು ಮಾರ್ಗಗಳು ಕಾಣಿಸುವುದು. ಹೆಂಡತಿಯ ಉದ್ಯೋಗ ಅಥವಾವ್ಯಾಪಾರಕ್ಕೆ ನೆರವಾಗುವಿರಿ. ಮನೆ ಬದಲಾವಣೆ ಮಾಡಲು ಆಲೋಚನೆಯಲ್ಲಿರುವವರಿಗೆ ಸೂಕ್ತ ಸಮಯ. ನಾಯಿಗಳಿಂದ ದೂರವಿರಿ. ದೇಹದ ತೂಕವನ್ನು ಕಾಯ್ದುಕೊಳ್ಳಲು ಹರ ಸಹಾಸ ಪಡುವಿರಿ. ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗಿ.

ವೃಷಭ(14 ರಿಂದ 20ಅಕ್ಟೋಬರ್, 2018)

ಕೆಲಸದ ಒತ್ತಡದಿಂದ ವಿರಾಮ ತೆಗೆದುಕೊಳ್ಳಲು ಉತ್ತಮ ಸಮಯ. ಉದ್ಯೋಗದಲ್ಲಿ ಬಡ್ತಿ ವಿಚಾರವಾಗಿ ಚರ್ಚೆ. ಕುಟುಂಬಅಥವಾ ಮಿತ್ರವರ್ಗದಲ್ಲಿ ಕೆಲಸಕ್ಕಾಗಿ ಸಹಾಯ ಮಾಡುವಿರಿ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಚರ್ಚೆ ಮತ್ತು ಪ್ರಯತ್ನ. ಕಾಲುಗಳ ಸಂಧಿಬಾಧೆಯಿಂದ ನರಳುವಿರಿ. ಸಹೋದರ/ಸಹೋದರರಿಗಾಗಿವೈದ್ಯರನ್ನು ಭೇಟಿ ಮಾಡುವಿರಿ. ಅವರ ಮನೆಯ ರಿಪೇರಿಗಾಗಿ ಹಣ ವ್ಯಯಿಸುವಿರಿ. ನಿಮ್ಮ ಶಿಸ್ತು ಹಾಗೂ ಸಮಯ ಪರಿಪಾಲನೆಗಾಗಿ ಪ್ರಶಂಸೆಗೆ ಒಳಗಾಗುವಿರಿ.

ಮಿಥುನ(14 ರಿಂದ 20ಅಕ್ಟೋಬರ್, 2018)

ಕೆಲಸದ ಒತ್ತಡ ಹೆಚ್ಚು. ಕಛೇರಿ ಕೆಲಸಗಳಲ್ಲಿ ಕಿರಿಕಿರಿ. ಕೆಲಸ ಬದಲಿಸುವ ಆಲೋಚನೆಯಲ್ಲಿ ಇರುವಿರಿ. ಕೈಜಾರಿ ಗಾಜೊಂದು ಒಡೆಯ ಬಹುದು. ಜ್ಞಾಪಕ ಶಕ್ತಿ ಕಮ್ಮಿ ಆಗುವ ವಾರ. ಉಸಿರಾಟದತೊಂದರೆಯಿಂದ ಬಳಲುವಿರಿ.  ಆರೋಗ್ಯದ ಬಗ್ಗೆಗಮನವಿರಲಿ. ಗುರುವಿನ ಪರಿವರ್ತನೆಯಿಂದ ಲಾಭ ಹೆಚ್ಚಿದ್ದರೂ ಖರ್ಚುಗಳ ಬಗ್ಗೆ ನಿಗಾವಹಿಸಿ. ಪ್ರತಿಷ್ಠೆ ತೋರಿಸಲು ಇದು ಸಕಾಲವಲ್ಲ. ವಾಹನಗಳಿಗಾಗಿ ಖರ್ಚು.

ಕರ್ಕಾಟಕ(14 ರಿಂದ 20ಅಕ್ಟೋಬರ್, 2018)

ವಾರದ ಆರಂಭದಲ್ಲಿ ದೇವಾಲಯ/ಧಾರ್ಮಿಕ ಕ್ಷೇತ್ರಗಳು/ಗುರು – ಹಿರಿಯರನ್ನು ಭೇಟಿ ಮಾಡುವಿರಿ. ವಾರದ ಮಧ್ಯದಲ್ಲಿ ವಿನಾಕಾರಣ ಜಗಳಗಳನ್ನು ಮೈಮೇಲೆಎಳೆದುಕೊಳ್ಳುವಿರಿ. ಸಂಧಿವಾತ ಹೆಚ್ಚಾಗುವುದು. ಸಹೋದರ ಅಥವಾ ಸಹೋದರಿಗೆ ವ್ಯಾಪಾರದಲ್ಲಿ ಅಥವಾ ಕೆಲಸದಲ್ಲಿ ಹಿನ್ನಡೆ/ಆರೋಗ್ಯದಲ್ಲಿ ಏರುಪೇರು. ಇಷ್ಟುದಿನ ನಿದ್ರಾಹೀನತೆಯಿಂದ ಬಳಲುತ್ತಿದ್ದ ನಿಮಗೆ ಉತ್ತಮ ಶಯನ ಸುಖ ಪ್ರಾಪ್ತಿ. ವಿಮೆಗಳಿಗಾಗಿ ಹಣಖರ್ಚು. ಹೊಟ್ಟೆಯ ಸಂಬಂಧಿ ಕಾಯಿಲೆ ಉಲ್ಬಣಿಸುವ ವಾರ. ಕುಟುಂಬಕ್ಕಿಂತ ಹೆಚ್ಚು ಸಮಯ ಸ್ನೇಹಿತರೊಂದಿಗೆ ಕಳೆಯುವಿರಿ.

ಸಿಂಹ(14 ರಿಂದ 20ಅಕ್ಟೋಬರ್, 2018)

ಬಹು ದಿನಗಳಿಂದ ಪ್ರಯತ್ನಿಸುತ್ತಿದ್ದ ಕಾರ್ಯವೊಂದು ಕೈಗೂಡಲಿದೆ. ಸುಖ ಹಾಗೂ ಸಂತೋಷದಿಂದ ವಾರ ಪ್ರಾರಂಭವಾದರೂ ಮಧ್ಯ ಹಾಗೂ ವಾರಾಂತ್ಯದಲ್ಲಿ ಕುಟುಂಬ/ಉದ್ಯೋಗ ಸ್ಥಳದಲ್ಲಿಮನಸ್ಸಿಗೆ ಕಿರಿಕಿರಿ. ಮೂಳೆ ತಜ್ಞರನ್ನು ಭೇಟಿಮಾಡುವ ವಾರ. ಕೊಟ್ಟಿರುವ ಸಾಲ ಹಿಂದಿರುಗಿ ಬರುವುದೋ ಇಲ್ಲವೋ ಎಂಬ ಆಲೋಚನೆಯಲ್ಲಿವಾರವನ್ನೂ ಕಳೆಯುವಿರಿ. ಮಕ್ಕಳ ವಿಷಯ ಈ ವಾರದ ಚರ್ಚೆಯ ವಿಷಯವಾಗಲಿದೆ. ಕುಲ ದೇವರ ಆರಾಧನೆಯಿಂದ ಒಳಿತು. ಹಳೆಯ ವಸ್ತುಗಳನ್ನು ಖರೀದಿಸುವಿರಿ.

ಕನ್ಯಾ(14 ರಿಂದ 20ಅಕ್ಟೋಬರ್, 2018)

ಕೊಂಚ ಮಟ್ಟಿಗೆ ವಿಶ್ರಾಂತಿ ಹಾಗು ನೆಮ್ಮದಿಯಿಂದ ವಾರ ಪ್ರಾರಂಭವಾದರೂ ವಾರದ ಮಧ್ಯಭಾಗದಲ್ಲಿ ಕುಟುಂಬ, ಉದ್ಯೋಗ ಹಾಗೂ ವ್ಯಾಪಾರ ಸ್ಥಳಗಳಲ್ಲಿ ಕಿರಿಕಿರಿ. ತಾಳ್ಮೆ ಇರಲಿ. ಆತುರದನಿರ್ಧಾರಗಳು ಬೇಡ. ಉತ್ತಮ ಧನಾರ್ಜನೆಯ ವಾರ. ಕುಟುಂಬ ಹಾಗೂ ಸ್ನೇಹಿತವರ್ಗವನ್ನು ಭೇಟಿಮಾಡುವ ವಾರ. ಹಿರಿಯರೊಬ್ಬರ ಸಹಾಯ/ಮಾರ್ಗದರ್ಶನ ದೊರೆಯುವ ವಾರ. ಸ್ತ್ರೀಯರಿಂದ ಸಮಸ್ಯೆ ಅಥವಾ ಕಿರಿಕಿರಿ ಅನುಭವಿಸುವಿರಿ. ವಾರಾಂತ್ಯಕ್ಕೆ ಹೆಚ್ಚಿನ ಓಡಾಟ ಹಾಗು ವೃಥಾ ಖರ್ಚು. ದೇವಿ ಆರಾಧನೆಯಿಂದ ಒಳಿತು.

ತುಲಾ(14 ರಿಂದ 20ಅಕ್ಟೋಬರ್, 2018)

ಸ್ನೇಹಗಳು ಪ್ರೀತಿಯಾಗಿ ತಿರುಗುವ ವಾರ, ಮುಂದುವರೆದರೆ ಮದುವೆ ಪ್ರಸ್ತಾಪನೆಯ ಮಾತುಗಳು ಬರಬಹುದು. ರಹಸ್ಯವಾಗಿ ಉಳಿಸಿಕೊಂಡಿದ್ದ ಕೆಲವು ವಿಷಯಗಳು ನಿಮ್ಮ ಕುಟುಂಬಕ್ಕೆ ತಿಳಿಯಪಡುವ ವಾರ. ಕ್ರೆಡಿಟ್ ಕಾರ್ಡ್ ನನ್ನು ಹೆಚ್ಚು ಬಳಸುವ ವಾರ. ಕುಟುಂಬ ವರ್ಗದವರಿಗೆ ನಿಮ್ಮ ಮೇಲೆನಂಬಿಕೆ ಹಾಗು ಧೈರ್ಯ ಹೆಚ್ಚಾಗುವ ವಾರ. ಹಾಗಾಗಿಯೂತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಉತ್ತಮ ವಾರ. ಷೇರು ವ್ಯವಹಾರದವರು ಈ ವಾರ ಹೂಡಿಕೆಯಿಂದ ದೂರವಿರಿ.

ವೃಶ್ಚಿಕ (14 ರಿಂದ 20 ಅಕ್ಟೋಬರ್, 2018)

ಬಹಳ ದಿನಿಗಳಿಂದ ಶುಭ ದಿನಗಳನ್ನು ಎದುರು ನೋಡುತ್ತಿದ್ದ ನಿಮಗೆ ಕೊಂಚ ಮಟ್ಟಿಗೆ ನಿರಾಳವಾಗುವ ವಾರವಾದರೂ ತಾಳ್ಮೆಯಿಂದಿರಿ. ಆತುರದ ನಿರ್ಧಾರ ಸಲ್ಲದು. ಹಣಕಾಸಿನ ವ್ಯವಸ್ಥೆ ಆಗುವುದು. ಕುಟುಂಬ ವರ್ಗದವರಿಗಾಗಿ ಹಣ ಖರ್ಚು. ಮನೆ ಬದಲಾಯಿಸುವಿರಿ ಅಥವಾ ಆಸ್ತಿಯ ವಿಷಯವಾಗಿ ಹೂಡಿಕೆ ಮಾಡಲು ಚರ್ಚೆಆಗುವುದು. ಹಿರಿಯರಿಂದ ಆಸ್ತಿ ನಿರೀಕ್ಷಿಸುತ್ತಿದ್ದ ಕೆಲವರಿಗೆ ಶುಭ ಸುದ್ದಿ. ಕೋರ್ಟು ಮೆಟ್ಟಿಲು ಏರಿದ್ದವರಿಗೆಶುಭ ಸುದ್ದಿ. ಹಳೆಯ ವಾಹನ ಕೊಳ್ಳಲು ಯೋಚಿಸುವಿರಿ ಅಥವಾ ಹಳೆಯ ವಸ್ತುಗಳನ್ನು ಕೊಳ್ಳುವಿರಿ ಅಥವಾ ಅದರ ರಿಪೇರಿಗಾಗಿ ಹಣ ವ್ಯಯ.

ಧನಸ್ಸು(14 ರಿಂದ 20ಅಕ್ಟೋಬರ್, 2018)

ಸೋದರ ಮಾವ ಅಥವಾ ಅವರ ಕುಟುಂಬ ವರ್ಗವನ್ನು ಭೇಟಿ ಮಾಡುವಿರಿ. ಸಂಗಾತಿಯ ಅಣತಿಯಂತೆ ಅಥವಾ ಸಲಹೆಯ ಮೇರೆಗೆ ಹೂಡಿಕೆಗೆ ಮುಂದಾಗುವಿರಿ. ನಿಮ್ಮ ಘನತೆಗೆ ತಕ್ಕಂತೆ ನಡೆದು ಕೊಳ್ಳಲು ವಿಫಲರಾಗುವಿರಿ. ವಾರಾಂತ್ಯಕ್ಕೆ ಹಠಾತ್ ಆಗಿ ವೈದ್ಯರನ್ನು ಕಾಣಬೇಕಾಗಬಹುದು. ನಿಮ್ಮಸಲಹೆಗಳು ನಿಮ್ಮ ಸ್ನೇಹಿತರಿಗೆ ಅನುಕೂಲವಾಗುವ ವಾರ. ವಾಹನದಿಂದಕಿರಿಕಿರಿ ಅಥವಾ ಖರ್ಚು. ಪ್ರೀತಿ-ಪ್ರೇಮದ ವಿಷಯವಾಗಿ ವೃತ ಬೇಸರ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯ. ಏಕಾಗ್ರತೆ ಕಳೆದುಕೊಳ್ಳುವ ವಾರ.

ಮಕರ(14 ರಿಂದ 20ಅಕ್ಟೋಬರ್, 2018)

ಅತಂತ್ಯ ಜಂಜಾಟದಿಂದ ಪ್ರಾರಂಭವಾಗುವ ವಾರ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ/ಕುಟುಂಬ ವರ್ಗದಲ್ಲಿ ಅನಾರೋಗ್ಯ ಹಾಗೂಖರ್ಚು. ಸಮಯ ಪರಿಪಾಲನೆಯಲ್ಲಿ ಎಡವುವಿರಿ. ವಸ್ತುಗಳನ್ನು ಖರೀದಿಸುವ ಆಲೋಚನೆಯಲ್ಲಿ ಇರುವ ನೀವು ಮುಂದೂಡಿದರೆಒಳಿತು. ವಸ್ತುಗಳು ಕಳುವಾಗಬಹುದು. ವಿಮೆ ಕ್ಲೈಮ್ ಮಾಡುವ ಪ್ರಸಂಗ ಒಂದು ಬರಬಹುದು. ಉತ್ತರಾರ್ಧದಲ್ಲಿ ಕೆಲಸದ ಒತ್ತಡ ನಿಭಾಯಿಸುವಲ್ಲಿ ಎಡವುವಿರಿ. ಉದ್ಯೋಗಸ್ಥರಿಗೆ ಕಛೇರಿಯಲ್ಲಿ ಹಾಗೂ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಕಿರಿಕಿರಿ. ತಾಳ್ಮೆಯಿಂದಿರಿ. ವಿದ್ಯಾರ್ಥಿಗಳಿಗೆ ಶಿವನ ಆರಾಧನೆಯಿಂದ ಏಕಾಗ್ರತೆ ಹೆಚ್ಚುವುದು.

ಕುಂಭ(14 ರಿಂದ 20ಅಕ್ಟೋಬರ್, 2018)

ಚಟುವಟಿಕೆಗಳಿಂದ ಕೂಡಿ ಶುಭವಾಗಿ ವಾರ ಪ್ರಾರಂಭವಾದರೂ ಸ್ವಲ್ಪ ಮಟ್ಟಿಗೆ ಮಾನಸಿಕ ಅಶಾಂತಿಯನ್ನು ತಂದುಕೊಳ್ಳುವಿರಿ. ದೂರದ ಸ್ನೇಹಿತರೊಂದಿಗೆ ಅಥವಾ ಸಂಬಂಧಿಗಳೊಂದಿಗೆ ಮಾತುಕತೆ. ಮಕ್ಕಳ ಮೇಲೆ ಅತಿಯಾದ ಶಿಸ್ತನ್ನು ಹೇರಬೇಡಿ. ಜ್ಞಾನಾರ್ಜನೆಯ ವಾರ. ಕುಟುಂಬ ವರ್ಗದವರ ಹಾಗುಸ್ನೇಹಿತರನ್ನು ಭೇಟಿಯಾಗುವಿರಿ. ವಾರಾಂತ್ಯದಲ್ಲಿ ಸೊಂಟ/ಹೊಟ್ಟೆನೋವಿನಿಂದ ಬಳಲುವಿರಿ. ಧನಾರ್ಜನೆಗೆ ತಲೆಕೆಡಿಸಿಕೊಳ್ಳುವಿರಿ ಹಾಗೂ ಪ್ರಯತ್ನಕ್ಕೆ ಉತ್ತಮ ಸಮಯ.

ಮೀನ(14ರಿಂದ 20 ಅಕ್ಟೋಬರ್, 2018)

ಪ್ರತಿಷ್ಠೆಗಾಗಿ ಖರ್ಚುಗಳು ಹೆಚ್ಚುವವು. ನೀವೆನಿಸಿದಂತೆ ಕೆಲಸ ಕಾರ್ಯಗಳು ಮುಂದುವರೆಯದು. ಸ್ವಲ್ಪ ನಿಧಾನ, ವಿನಾಕಾರಣ ಕೆಲಸದ ಸ್ಥಳಗಳಲ್ಲಿ ಸಿಡಿಮಿಡಿಗೊಳ್ಳುವಿರಿ. ನವ ವಿವಾಹಿತರಲ್ಲಿ ತಾಳ್ಮೆಯಿರಲಿ. ಕುಟುಂಬದಲ್ಲಿ ಅನವಶ್ಯಕ ವಿಷಯಗಳಿಗೆ ಚರ್ಚೆ ಆಗಲಿದೆ, ಸಂಯಮದಲ್ಲಿರಿ. ಉತ್ತರಾರ್ಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಬಾಂಧವ್ಯವೃದ್ಧಿ. ವ್ಯಾಪಾರಸ್ಥರಿಗೆ ಸರ್ಕಾರಿಮಟ್ಟದಲ್ಲಿ ಲಾಭ. ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು. ನಿಮ್ಮ ಆರೋಗ್ಯದ ಮೇಲು ಗಮನವಿರಲಿ. ವೈರಸ್ ಜ್ವರ ಬಾಧಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here