ವಯಸ್ಸಾಗುತ್ತಾ ಹೋದಂತೆ ನಮ್ಮ ಹಿರಿಯರಲ್ಲಿ ಚಟುವಟಿಕೆ ಕಡಿಮೆಯಾಗಿ ಬಿಡುತ್ತದೆ. ಅವರು ದೇವರ ಧ್ಯಾನ, ಪುಟ್ಟ ಮಕ್ಕಳ ಆರೈಕೆ ಹಾಗೂ ಅವರಿಗೆ ಕಥೆ ಹೇಳುವುದು ಹೀಗೆ ಸಮಯವನ್ನು ಕಳೆಯುತ್ತಾರೆ. ಆದರೆ ಒಬ್ಬ ಹಿರಿಯ ಮಹಿಳೆ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಗಿರುಬ ವಯಸ್ಸಿನಲ್ಲಿ , ಮನಸ್ಸಿದ್ದರೆ , ದೃಢ ಸಂಕಲ್ಪವಿದ್ದರೆ ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ಸಾಧಿಸಿ ತೋರಿಸುವ ಜೊತೆಗೆ ಯುಗ ಜನತೆಗೂ ಆಕೆ ಮಾದರಿಯಾಗಿದ್ದಾರೆ. ಕಿಮ್ಲನ್ ಜಿನಾಕುಲ್ ಎಂಬುವವರೆ ಆ ಹಿರಿಯ ಮಹಿಳೆ. ಅವರ ಸಾಧನೆ ಏನು ಎಂಬುದು ತಿಳಿಯಲು, ಜೀವನದಲ್ಲಿ ಸಾಧನೆ ಮಾಡಬೇಕು‌ ಎನ್ನುವವರು ಇದನ್ನು ಓದಲೇ ಬೇಕು.

ಥಾಯ್ಲಾಂಡ್ ನ ಈ ಹಿರಿಯ ಮಹಿಳೆಯ ಈಗಿನ ವಯಸ್ಸು 93 ವರ್ಷ. ಈಕೆ ತನ್ನ ಹೈಸ್ಕೂಲ್ ಮುಗಿಸಿದ ಮೇಲೆ ಮನೆಯ ಆರ್ಥಿಕ ಸಂಕಷ್ಟಗಳಿಂದ ಉನ್ನತ ವಿದ್ಯಾಭ್ಯಾಸ ಪಡೆಯಲು ಆಗಲಿಲ್ಲ. ಆದರೆ ವಿದ್ಯಾಭ್ಯಾಸ ಪಡೆಯುವ ಇಚ್ಚೆ ಮಾತ್ರ ಮನಸ್ಸಿಂದ ಮಾಸಲಿಲ್ಲ. ಅದಕ್ಕಾಗಿ ಆಕೆ ಕಾಯ ತೊಡಗಿದರು. ಮದುವೆಯಾಗಿ ಮಕ್ಕಳು, ಮೊಮ್ಮಕ್ಕಳಾದರು.‌ ಮೊಮ್ಮಕ್ಕಳು ಒಳ್ಳೆಯ ಪದವೀಧರರಾಗಿ ಉದ್ಯೋಗ ಪಡೆದಾಗ ಅಜ್ಜಿಗೆ ಕೂಡಾ ಮತ್ತೆ ತಾನೂ ಶಿಕ್ಷಣ ಪಡೆಯಬೇಕು ಎಂಬ ಆಸೆ ಚಿಗುರೊಡೆಯಿತು. ಅದಕ್ಕಾಗಿ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ STOU ವಿಶ್ವವಿದ್ಯಾಲಯದಲ್ಲಿ ಪದವಿಗೆ ಅರ್ಜಿ ಹಾಕಿದರು. ಆದರೆ ಕಾರಣಾಂತರಿಂದ ಆಗಲೂ ಅವರ ಆಸೆ ಈಡೇರಲಿಲ್ಲ.

ನಂತರ 2011 ರಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಅವರು ಕಾಲೇಜು ಸೇರಿದರು. ಕಾಲೇಜಿನ ಆಡಳತ ಮಂಡಳಿ ಹೇಳುವಂತೆ ಕಿಮ್ಲನ್ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಿಲ್ಲ. ಅವರು ಇತರ ವಿದ್ಯಾರ್ಥಿಗಳ ಹಾಗೆಯೇ ಅಧ್ಯಯನ ನಡೆಸಿದರು. ಅಲ್ಲದೆ ಅರ್ಧಕ್ಕಿಂತ ಹೆಚ್ಚ ವಿಷಯಗಳಲ್ಲಿ ಆಕೆ ಫೇಲಾದರು. ಆದರೂ ಆಕೆ ಏನೇ ಆಗಲಿ ಪದವಿ ಪಡೆದೇ ತೀರುವೆನೆಂದು ಮಾಡಿದ ಪ್ರಯತ್ನದ ಫಲವಾಗಿ ಕಡೆಗೂ ಪದವಿ ಮುಗಿಸಿದರು. 2017 ರಲ್ಲಿ ಆಕೆ ತನ್ನ 91 ವಯಸ್ಸಿನಲ್ಲಿ STOU ವಿಶ್ವವಿದ್ಯಾಲಯದಿಂದ ಪದವಿ ಪಡೆದ ಹಿರಿಯ ವ್ಯಕ್ತಿಯಾಗಿ ಹೊರ ಬಂದರು.

ಜೀವನದಲ್ಲಿ ವಿಫಲತೆ ಎದುರಾದ ಕೂಡಲೇ ಕಾರ್ಯದಿಂದ ವಿಮುಖರಾಗುವ, ಹತಾಶರಾಗುವ ಜನರಿಗೆ ಕಿಮ್ಲನ್ ಜಿನಾಕುಲ್ ಒಂದು ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಕೆ ಪದವಿ ಪಡೆಯಲು ಮಾಡಿದ ಪ್ರಯತ್ನಗಳ ಪರಿಶ್ರಮವೇ ಆಕೆ ಪದವಿಯನ್ನು ಪಡೆದಿರುವುದು. ಶ್ರಮಕ್ಕೆ ತಕ್ಕ ಪ್ರತಿಫಲ ಒಂದಲ್ಲಾ ಒಂದು ದಿನ ಸಿಗುತ್ತದೆ ಎಂಬುದಕ್ಕೆ ಇವರ ಜೀವನವೇ ಒಂದು ಸಾಕ್ಷಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here