ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ನಂತರ ಎಲ್ಲರಿಗಿಂತ ಹೆಚ್ಚು ನೊಂದವರು ಚಿರು ಅವರ ಪತ್ನಿ ಮೇಘನಾ ರಾಜ್. ಗರ್ಭಿಣಿಯಾಗಿರುವ ಅವರಿಗೆ ಪತಿ ಹತ್ತಿರವಾಗಿ ಇರಬೇಕಾದ ಈ ದಿನಗಳಲ್ಲಿ ಅವರು ದೂರಾದರೆಂಬ ನೋವಿದ್ದರೂ, ಅವರ ಪ್ರೇಮದ ಕಾಣಿಕೆ ತನ್ನ ಗರ್ಭದಲ್ಲಿದೆ ಎಂಬ ಸಮಾಧಾನದಿಂದ ನೋವಲ್ಲೇ ನಲಿವನ್ನು ಕಾಣುತ್ತಿದ್ದಾರೆ ಈ ಹೆಣ್ಣು ಮಗಳು. ಚಿರು ಅವರ ಅಗಲಿಕೆಯ ನೋವಿನಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಮೇಘನಾ ಅವರು. ಕೆಲವೇ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಚಿರು ಅವರ ನೆನಪಿನಲ್ಲೊಂದು ಭಾವ ಪೂರ್ಣ ಬರಹವನ್ನು ಹಂಚಿಕೊಂಡು ಮನದ ಮಾತುಗಳನ್ನು ಹೇಳಿಕೊಂಡಿದ್ದರು.

ಈಗ ಒಳ್ಳೆ ಹುಡುಗು ಪ್ರಥಮ್ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದು ಇದೇ ಮೊದಲ ಬಾರಿಗೆ ಅಷ್ಟಾಗಿ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಮಾಜಿ ಸಿಎಂ ಸಿದ್ಧರಾಮಯ್ಯನವರ ಸೊಸೆ ಸ್ಮಿತಾ ಅವರು ಮೇಘನಾ ಅವರನ್ನು ಭೇಟಿ ಮಾಡಿ, ಆತ್ಮೀಯತೆಯಿಂದ ಸಾಂತ್ವನ ನೀಡಿದ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಸ್ಮಿತಾ ಅವರು ಒಬ್ಬ ಅಕ್ಕನ ಸ್ಥಾನದಲ್ಲಿ ನಿಂತು ಮೇಘನಾ ಅವರೊಡನೆ ಮಾತನಾಡಿ, ಅವರಿಗೆ ಧೈರ್ಯ ಹಾಗೂ ಸಾಂತ್ವನ ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ವಿಚಾರವನ್ನು ಪ್ರಥಮ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇದೊಂದು ಹೃದಯ ಸ್ಪರ್ಶಿ ಭೇಟಿ ಎಂದಿದ್ದು, ನಮ್ಮ ಸಿದ್ಧರಾಮಯ್ಯ‌ನವರ ಸೊಸೆ ಇವತ್ತಿನ ತನಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮೇಘನಾ ಅವರ ಬಗ್ಗೆ ಒಂದು ವಿಶೇಷ ಪ್ರೀತಿ,ಕಳಕಳಿ…! ಒಂದಷ್ಟು ಮಾತಾಡಿ ಸಮಾಧಾನ ಹೇಳಿದ್ರು…! ಒಂದು ಸಾಂತ್ವಾನದ ಭೇಟಿ.ಬೇರೇನೂ ಇಲ್ಲ ಎಂದು ತಿಳಿಸಿರುವ ಪ್ರಥಮ್, ಮೇಘನಾ ರ ಮುಖದಲ್ಲಿ ಗೆಲುವಿದೆ‌..! ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ! ಎಲ್ಲಕ್ಕಿಂತಲೂ ದೊಡ್ಡದು ಮಾನವೀಯತೆ…!ಸ್ಮಿತಾ ಮೇಡಂ ಅವರ ಭೇಟಿಯ ಬಗ್ಗೆ ಅನಾವಶ್ಯಕ ಕಲ್ಪನೆ ಬೇಡ…! ಒಂದು ವಿಶೇಷ ಮನವಿ…!

ಸಂಬಂಧವೇ ಇರದ ಗಾಸಿಪ್ ಗಳು ಇಲ್ಲಸಲ್ಲದ ಗಾಸಿಪ್ ಗಳನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ, ಆದಷ್ಟು ಮೇಘನಾ ಅವ್ರ ಭಾವನೆಗಳನ್ನು ಗೌರವಿಸಿ…! ಎಲ್ಲಿಯೂ ಮಾತನಾಡದ ಸ್ಮಿತಾ ಮೇಡಂ ಬಹಳಷ್ಟು ವಿಚಾರಗಳನ್ನ ಅಕ್ಕನ ಜಾಗದಲ್ಲಿ ನಿಂತು ಮೇಘನಾರ ಜೊತೆ ಮಾತಾಡಿದ್ದಾರೆ…! ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದಾರೆ.ಅವರ ಎಲ್ಲಾ ಆಸೆಗಳು ಈಡೇರಲೆಂದು ಸ್ವಚ್ಛ ಮನಸ್ಸಿನಿಂದ ಹಾರೈಸೋಣ…!ಎಂದು ಬರೆದು ಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here