ರಾಜ್ಯ ರಾಜಕಾರಣದಲ್ಲಿ ಹಾಗೂ ಗೋವಾ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮವನ್ನು ವಿರೋಧಿಸಿ ರಾಷ್ಟ್ರೀಯ ಕಾಂಗ್ರೆಸ್ ‌ನಾಯಕಿ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಕಾಂಗ್ರೆಸಿನ ಇಂದಿನ ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಅವರು ಸಂಸತ್ ಎದುರಿಗೆ ನಡೆಸಿದ ಪ್ರತಿಭಟನೆಗೆ ಅನೇಕ ಕೈ ನಾಯಕರು ಕೂಡಾ ಜೊತೆ ಸೇರಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಜೊತೆಗೆ ಇತರೆ ಕಾಂಗ್ರೆಸ್ ನಾಯಕರು ಸೇರಿ ಸಂಸತ್ ಭವನದ ಮುಂದೆ ಇರುವ ಗಾಂಧೀಜಿ ಪುತ್ಥಳಿಯ ಮುಂದೆ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಕಾಂಗ್ರೆಸ್ ನಾಯಕರು ಕೈ ಗಳಲ್ಲಿ ಹಿಡಿದಿದ್ದ ಫಲಕಗಳಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು. ಬಿಜೆಪಿಯ ಕಾರ್ಯ ವೈಖರಿಯನ್ನು ಕುರಿತು ಕೈ ನಾಯಕರು ಈ ಸಂದರ್ಭದಲ್ಲಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಪ್ರತಿಭಟನೆ ನಿರತರಾಗಿದ್ದರು. ಪ್ರತಿಭಟನೆಯ ವೇಳೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಶಾಸಕರನ್ನು ತನ್ನಡೆ ಸೆಳೆದು ಸರ್ಕಾರವನ್ನು ಬೀಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪ ಮಾಡಲಾಯಿತು.

ಅದರ ಜೊತೆಗೆ ಗೋವಾದಲ್ಲಿ ಕೂಡಾ ಕಾಂಗ್ರೆಸ್ ಶಾಸಕರು ಕೈ ಪಕ್ಷವನ್ನು ತೊರೆದು ಬಿಜೆಪಿ ಕಡೆ ಒಲವು ತೋರಿರುವುದನ್ನು ಕೂಡಾ ಖಂಡಿಸಲಾಯಿತು. ಕಾಂಗ್ರೆಸ್ ನ ಹದಿನೈದು ಮಂದಿ ಶಾಸಕರಲ್ಲಿ ಹತ್ತು ಮಂದಿ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಸೇರ್ಪಡೆಯಾಗಿರುವುದಕ್ಕೂ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕುತ್ತಾ, ಗೋವಾ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ನ ಈ ಅತಂತ್ರ ಪರಿಸ್ಥಿತಿಗೆ ಬಿಜೆಪಿ ಯೇ ಕಾರಣ ಎಂದು ತಮ್ಮ ಕೋಪವನ್ನು ಪ್ರತಿಭಟನೆಯ ಮೂಲಕ ಹೊರಹಾಕಿದೆ ರಾಷ್ಟ್ರೀಯ ಕಾಂಗ್ರೆಸ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here