ಐಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರದಲ್ಲೇ ನಾಲ್ಕನೇ ಸ್ಥಾನ ಪಡೆದಿರುವ ರಿಚಾ ಸಿಂಗ್ ಎನ್ನುವ ವಿದ್ಯಾರ್ಥಿನಿಗೆ ಹಣವನ್ನೋ, ಫಲಕವನ್ನೋ ಬಹುಮಾನವಾಗಿ ನೀಡುವ ಬದಲಾಗಿ, ಆಕೆಯನ್ನು ಬುಧವಾರ ಕೋಲ್ಕತಾ ಪೊಲೀಸರ ಉಪ ಪೋಲಿಸ್ ಕಮೀಷನರ್ ನ್ನಾಗಿ ಮಾಡಿ, ಆಕೆಯ ಸಾಧನೆಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಡಿ ಬಿರ್ಲಾ ಸೆಂಟರ್ ಫಾರ್ ಎಜುಕೇಶನ್ನ ವಿದ್ಯಾರ್ಥಿನಿ ರಿಚಾ ಅವರು ಮಂಗಳವಾರ ಪ್ರಕಟವಾದ ಪ್ಲಸ್ ಎರಡು ಪರೀಕ್ಷೆಯ ಫಲಿತಾಂಶಗಳಲ್ಲಿ 99.25 ಶೇ. ಅಂಕಗಳನ್ನು ಪಡೆದಿದ್ದಾರೆ. ಈ ಸಾಧನೆಗಾಗಿ ನಗರದ ಪೋಲಿಸ್ ಉಪ ಕಮೀಷನರ್ (ಸೌತ್ ಈಸ್ಟರ್ನ್ ಡಿವಿಜನ್)ಕುರ್ಚಿಯಲ್ಲಿ ಆಕೆಯನ್ನು ಬೆಳಿಗ್ಗೆ ಆರರಿಂದ ಮಧ್ಯಾಹ್ನ ಹನ್ನೆರಡರ ವರೆಗೆ ಕುಳ್ಳಿರಿಸಲಾಗಿತ್ತು.

ರಿಚಾ ಸಿಂಗ್ ಗರಿಯಾಹತ್ ಪೋಲಿಸ್ ಠಾಣೆಯ ಪೊಲೀಸ್ ಠಾಣೆಯ ಹೆಚ್ಚುವರಿ ಅಧಿಕಾರಿ-ಡಿಸಿ ರಾಜೇಶ್ ಸಿಂಗ್ ಅವರ ಮಗಳು. ಒಂದು ದಿನಕ್ಕೆ ಪೋಲಿಸ್ ಕಮೀಷನರ್ ಆದ ರಿಚಾಳನ್ನು ಬಾಸ್ ಆಗಿ ತನ್ನ ತಂದೆಗೆ ಏನಾದರೂ ಆರ್ಡರ್ ಮಾಡುವುದಿದೆಯಾ? ಎಂದಾಗ ಆಕೆ ಇದೆ, ನಾನು ನನ್ನ ತಂದೆಗೆ ಮನೆಗೆ ಬೇಗ ಹಿಂದಿರುಗಲು ಆದೇಶ ನೀಡುತ್ತೇನೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತಾನು ಇತಿಹಾಸ ಮತ್ತು ಸಮಾಜಶಾಸ್ತ್ರ ಅಧ್ಯಯನ ಮಾಡಲು ಇಚ್ಚಿಸುವುದಾಗಿ ರಿಚಾ ಹೇಳಿದ್ದಾರೆ. ಅಲ್ಲದೆ ಯುಪಿಎಸ್ಸಿ ಪರೀಕ್ಷೆ ಎದುರಿಸುವ ಗುರಿ ಹೊಂದಿರುವುದಾಗಿ ಆಕೆ ಹೇಳಿದ್ದಾರೆ.

ರಿಚಾ ತಂದೆ ಮಗಳ ಸಾಧನೆಯಿಂದ ಬಹಳಷ್ಟು ಸಂತಸಗೊಂಡಿದ್ದು, ನನಗೆ ಅಪರಿಮಿತವಾದ ಸಂತೋಷವಾಗಿದೆ, ರಿಚಾ ಈ ದಿನಕ್ಕೆ ನನಗೆ ಒಂದೊಳ್ಳೆ ಹೆಸರನ್ನು ಮತ್ತು ಕೀರ್ತಿಯನ್ನು ತಂದು ಕೊಟ್ಟಿದ್ದಾಳೆ ಎಂದು ಹೇಳಿದ್ದಾರೆ. ಅಲ್ಲದೆ ಮಗಳು ಅಧಿಕಾರಿಯಾಗಿ ನನಗೆ ಮನೆಗೆ ಬೇಗ ಹಿಂದಿರುಗಲು ಆದೇಶ ನೀಡಿದ್ದಾಳೆ, ನಾನು ಅದನ್ನು ಪಾಲಿಸುತ್ತೇನೆ ಎಂದು ಕೂಡಾ ಅವರು ಹೇಳಿದ್ದಾರೆ. ರಿಚಾ ಸಾಧನೆಗೆ ತಂದೆ ನೀಡಿದ ಶ್ಲಾಘನೆ ನಿಜಕ್ಕೂ ಅರ್ಥಪೂರ್ಣ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here