ಪಂಚರತ್ನಂ ಎಂದೊಡನೆ ಯಾವುದೋ ಐದು ರತ್ನಗಳ ಬಗ್ಗೆ ಹೇಳಲು ಹೊರಟಿದ್ದಾರೆ ಎಂದು ಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಹೇಳಲು ಹೊರಟಿರುವುದು ಒಂದೇ ದಿನ‌ ಜನಿಸಿದ ಐವರ ಬಗ್ಗೆ, ಮನೆಯವರು ಪ್ರೀತಿಯಿಂದ ಪಂಚರತ್ನಂ ಎಂದೇ ಕರೆಯುವ ಐವರ ಬಗ್ಗೆ. ದೇವರನಾಡೆಂದೇ ಖ್ಯಾತವಾದ ಕೇರಳದಲ್ಲಿ 1995 ರಲ್ಲಿ ಐವರೂ ಒಮ್ಮೆಲೆ ಜನಿಸಿದ್ದರು. ಅವರ ಜನನವೇ ವಿಶೇಷ. ಆದ್ದರಿಂದಲೇ ಅದು ಅಂದಿನ ವಿಶೇಷ ಸುದ್ದಿ ಕೂಡಾ ಆಗಿತ್ತು. ಐವರಲ್ಲಿ ನಾಲ್ಕು ಜನ ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದು ಅವರ ಶಾಲೆ, ಕಾಲೇಜು , ಮೊದಲ ಓಟಿಂಗ್ ಹೀಗೆ ಎಲ್ಲವೂ ಕೂಡಾ ಒಟ್ಟಾಗಿಯೇ ನಡೆದಿದೆ. ಕೇರಳದ ಸುದ್ದಿ ಮಾದ್ಯಮಗಳು ಈ ಐವರ ಬಗ್ಗೆ ಸುದ್ದಿ ಮಾಡಿ ಸಂಭ್ರಮಿಸುತ್ತಿತ್ತು ಕೂಡಾ.

ಈಗ ಪಂಚರತ್ನಂ ಎಂದು ಕರೆಯಲ್ಪಡುವ ಈ ಐವರಲ್ಲಿ, ಸಹೋದರನ ಹೊರತು ಪಡಿಸಿ, ಇನ್ನುಳಿತ ನಾಲ್ಕು ಜನ ಸಹೋದರಿಯರ ವಿವಾಹ ನಿಶ್ಚಯವಾಗಿದ್ದು, ನಾಲ್ವರು ಸಹೋದರಿಯರು ತಮ್ಮ ಹೊಸ ಜೀವನಕ್ಕೂ ಕೂಡಾ ಏಕಕಾಲದಲ್ಲಿ ಅಡಿಯಿಡಲಿದ್ದಾರೆ. ಅಂದರೆ ನಾಲ್ಕು ಜನ ಸಹೋದರಿಯರ ವಿವಾಹ ಮಹೋತ್ಸವ ಬರುವ ಏಪ್ರಿಲ್ 26 ರಂದು ಗುರುವಾಯೂರಿನ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ನಡೆಯಲಿದೆ. ನಾಲ್ವರು ಸಹೋದರಿಯರು ಒಂದೇ ದಿನ ತಮ್ಮ ವೈವಾಹಿಕ ಜೀವನವನ್ನು ಆರಂಭಿಸಲಿದ್ದು, ವಿವಾಹದ ಸಿದ್ಧತೆಗಳು ಬಹಳ ಸಂಭ್ರಮದಿಂದ ನಡೆದಿವೆ ಎನ್ನಲಾಗಿದೆ.

ಉಥ್ರಾಜ​, ಉಥಾರಾ, ಉಥಮಾ, ಉಥ್ರ ಮತ್ತು ಉಥ್ರಾಜನ್ ಎಂದು ಹೆಸರುಳ್ಳ ಈ ಸಹೋದರಿಯರು ಮತ್ತು ಸಹೋದರ ನವೆಂಬರ್ 18, 1995 ರಲ್ಲಿ ಒಟ್ಟಿಗೆ ಜನಿಸಿದ್ದರು. ಐವರೂ ಕೂಡಾ ಮಲಯಾಳಂ ಕ್ಯಾಲೆಂಡರ್​ ಉಥ್ರಮ್​ ದಿನದಂದು ಜನಿಸಿದ್ದರಿಂದ ಅದರ ನೆನಪಿಗಾಗಿ ಹೀಗೆ ಹೆಸರಿಡಲಾಗಿದೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರ ಜೀವನ ಅನೇಕ ಏರಿಳಿತಗಳನ್ನು ಕಂಡಿದೆ‌. ಇವರ ತಂದೆ ಮಕ್ಕಳನ್ನು ಬೆಳೆಸಲು ಬಹಳ ಕಷ್ಟ ಪಟ್ಟಿದ್ದಾರೆ. ರೋಗ ಗ್ರಸ್ತ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಾಗ ಇಡೀ ರಾಜ್ಯವೇ ದುಃಖ ಪಟ್ಟಿತ್ತು. ಮಾದ್ಯಮಗಳು ಕೂಡಾ ಅವರ ನೆರವಿಗೆ ಬಂದಿತ್ತು ಎನ್ನಲಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here