ಉತ್ತರ ಕರ್ನಾಟಕದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಅಲ್ಲಿ ಉಂಟಾದ ಭಾರೀ ಮಳೆ, ಭೀಕರ ಪ್ರವಾಹದಿಂದಾಗಿ ಜನರ ಜೀವನದ ಮೇಲೆ ಬಹು ದೊಡ್ಡ ಪೆಟ್ಟು ಬಿದ್ದಿದೆ. ಅಲ್ಲಿನ ಜನರು ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ತಿಂಗಳುಗಳೇ ಬೇಕಾಗಬಹುದು. ಆದರೆ ಅಲ್ಲಿಯವರೆಗೆ ಅಲ್ಲಿನ ಜನರಿಗೆ ನೆರವಿನ ಅಗತ್ಯವಿದೆ.‌ ಧೈರ್ಯ ನೀಡುವ ಅವಶ್ಯಕತೆ ಇದೆ ಹಾಗೂ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಅದಕ್ಕಾಗಿಯೇ ಅನೇಕರು ತಮ್ಮ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ನೆರೆ ಸಂತ್ರಸ್ತರಿಗೆ ನೆರವನ್ನು ನೀಡಲು ಮುಂದಾಗಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ಮಿಡಿದಿರುವ ಬೆಂಗಳೂರು ನಗರ ಪೋಲಿಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು, ತಮ್ಮ ಒಂದು ತಿಂಗಳ ವೇತನವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ. ಅವರು ವೈಯಕ್ತಿಕವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಚೆಕನ್ನು ನೀಡಿದ್ದಾರೆ. ಅವರ ಈ ನಡೆ ನಿಜಕ್ಕೂ ಶ್ಲಾಘನೀಯ ಎನಿಸಿದೆ. ಅವರು ಮಾತ್ರವಲ್ಲದೇ ಈಗಾಗಲೇ ಅನೇಕ ಗಣ್ಯರು ಕೂಡಾ ನೆರೆ ಸಂತ್ರಸ್ತರಿಗೆ ಹಣದ ಸಹಾಯವನ್ನು ನೀಡಿದ್ದಾರೆ.

ಈಗ ಉತ್ತರ ಕರ್ನಾಟಕದ ಪರಿಸ್ಥಿತಿಯನ್ನು ಸುಧಾರಿಸಲು ಇಂತಹ ನೆರವಿನ ಅಗತ್ಯ ಇದೆ. ಎಲ್ಲರೂ ಕೂಡ ಈ ರೀತಿ ಆಲೋಚನೆ ಮಾಡಬೇಕಾದ ಅನಿವಾರ್ಯತೆ ಕೂಡಾ ಇದೆ. ಅದರ ಜೊತೆಗೆ ಎಲ್ಲದಕ್ಕಿಂತ ಮೊದಲು ಸರ್ಕಾರವು ಈ ಜನರ ಪುನರ್ವಸತಿಗಾಗಿ ಆದಷ್ಟು ಬೇಗ ಕಾರ್ಯೋನ್ಮುಖವಾಗಬೇಕಾದ್ದು ಕೂಡಾ ಅಷ್ಟೇ ಮಹತ್ವದ ಕಾರ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here