ಆಧುನಿಕ ಜೀವನದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಏರುತ್ತಿದೆ. ಬಡವರ ಜೀವನ ದುರ್ಬರವಾಗುತ್ತಿದೆ. ಆದರೆ ಇಂತಹ ಪರಿಸ್ಥಿತಿಯಲ್ಲೂ ಕೂಡಾ ಈ ದಿನ ಕೂಡಾ ಇಡ್ಲಿ ಒಂದು ರೂಪಾಯಿಗೆ ಸಿಗುತ್ತದೆ ಎಂದರೆ ಆಶ್ಚರ್ಯ ಅಥವಾ ಉತ್ಪ್ರೇಕ್ಷೆ ಎನಿಸಬಹುದು. ಆದರೆ ಇದು ವಾಸ್ತವ‌. ಇನ್ನು ಈ ರೀತಿ ಒಂದು ರೂಪಾಯಿಗೆ ಇಡ್ಲಿ ಮಾರುವ ವ್ಯಕ್ತಿ ಯಾವುದೋ ದೊಡ್ಡ ಹೋಟೆಲ್ ಮಾಲಿಕರೋ, ಸಮಾಜ ಸೇವಕರೋ ಅಲ್ಲ, ಆಕೆ ಒಬ್ಬ ಅತಿ ಸಾಮಾನ್ಯ ಮಹಿಳೆ 80 ವರ್ಷದ ಹಿರಿಯರಾದ ಆಕೆ ಕಳೆದ 30 ವರ್ಷಗಳಿಂದ ಒಂದು ರೂಪಾಯಿಗೆ ಇಡ್ಲಿ ಮಾರುತ್ತಾ, ತಾನು ಬಡವಿಯಾದರೂ, ಬಡವರ ಹಸಿವೆ ನೀಗಿಸುವ ಮಹತ್ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ.suddimane ಆ ಹಿರಿಯ ಮಹಿಳೆಯ ಹೆಸರು ಕಮಲಾಥಲ್ ಈಕೆ ನೆರೆಯ ತಮಿಳುನಾಡಿನ ವಡಿವೇಲಂಪಾಲಯಂ ಮೂಲದವರು.

ಕಳೆದ ಮೂವತ್ತು ವರ್ಷಗಳಿಂದ ಇಡ್ಲಿ ಮಾರುವ ಈಕೆಗೆ ವಯಸ್ಸಾದರೂ ಇನ್ನೂ ವೃತ್ತಿ ನಿಲ್ಲಿಸಿಲ್ಲ. ಪ್ರತಿದಿನ ತಾನೇ ಇಡ್ಲಿಗೆ ಬೇಕಾದ ಹಿಟ್ಟನ್ನು ರುಬ್ಬುವ ಈಕೆ ನಾಳೆಗೆ ಇಂದೇ ಇಡ್ಲಿಹಿಟ್ಟು ರುಬ್ಬಿ ಇಡಲು ಸುಮಾರು ನಾಲ್ಕು ಗಂಟೆಗಳ ಕಾಲ ತೆಗದುಕೊಳ್ಳುತ್ತಾರೆ. ಮಾರನೇ ದಿನ ಮುಂಜಾನೆ ಬೇಗ ಎದ್ದು ಬಿಸಿ ಬಿಸಿ ಇಡ್ಲಿ, ಸಾಂಬಾರ್ ಮತ್ತು ಚಟ್ನಿ ಸಿದ್ಧಗೊಳಿಸಿ ಒಂದು ರೂಪಾಯಿಗೆ ಮಾರುತ್ತಾರೆ. ತಾನಿರುವ ಆ ಊರಿನಲ್ಲಿ ಇರುವವರೆಲ್ಲಾ ಬಡವರು ಎನ್ನುವ ಆಕೆ ಲಾಭಕ್ಕಾಗಿ ನಾನು ಇಡ್ಲಿ ಮಾರುತ್ತಿಲ್ಲ. ಬಡವರಿಗೆ, ಹಸಿದವರಿಗೆ , ಅವಶ್ಯಕತೆ ಇರುವವರಿಗೆ ಸಹಾಯ ಮಾಡುತ್ತಿದ್ದೇನೆ ಎಂದಾಗ ಕೋಟಿ ಕೋಟಿ ಗಳಿಸಿದವರಿಗಿಲ್ಲದ ಹೃದಯವಂತಿಕೆ ಈಕೆಯಲ್ಲಿ ಕಾಣುತ್ತದೆ.

ಕಮಲಾಥಲ್ ಅವರು ದಿನವೊಂದಕ್ಕೆ ಸಾವಿರ ಇಡ್ಲಿ ಮಾರಾಟ ಮಾಡುತ್ತಾರೆ. ಕೆಲವು ಸರ್ಕಾರಗಳು ಜನರಿಗೆ ಸುಲಭವಾಗಿ ಊಟ ಒದಗಿಸಲು ಐದು ರೂಪಾಯಿಗೆ ಊಟ ಸಿಗುವಂತೆ ಮಾಡಿವೆ. ಆದರೆ ಯಾವುದೇ ಲಾಭದ ಆಸೆಯಿಲ್ಲದೆ ಒಂದು ರೂಪಾಯಿಗೆ ಇಡ್ಲಿ ಮಾರುವ ಕಮಲಾಥಲ್ ಅವರ ಸೇವೆ ದೊಡ್ಡದು ಎಂಬುದು ಅಕ್ಷರಶಃ ಸತ್ಯ. ಕಮಲಾಥಲ್ ರಂತಹ ಸೇವೆಯನ್ನು , ಲಾಭಕ್ಕಾಗಿ ಜನರ ಬಗ್ಗೆ ಯೋಚಿಸದೆ ಇರುವ ಸ್ವಾರ್ಥಿಗಳ ಮಧ್ಯೆ ನಿಸ್ವಾರ್ಥವಾಗಿ ದುಡಿಯುವ ಇಂತಹವರನ್ನು ಮೆಚ್ಚಿ ಗೌರವಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here