ಅಂಗಡಿಯೊಂದಕ್ಕೆ ನುಗ್ಗಿರುವ ಕಳ್ಳರು ನಗರದು ಹಣವನ್ನು ಬಿಟ್ಟು ಈರುಳ್ಳಿಯನ್ನು ಮಾತ್ರ ಕದ್ದೊಯ್ದ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೂರ್ ಜಿಲ್ಲೆಯಲ್ಲಿ ನಡೆದಿದೆ.ಪಶ್ಚಿಮ ಬಂಗಾಳದಲ್ಲಿ ಒಂದು ಕಿಲೋ ಈರುಳ್ಳಿ ದರ ೧೧೦ ರೂ. ಗಡಿ ದಾಟಿದ್ದು ರೈತರಲ್ಲಿ ಸಂತಸವಿದ್ದರೇ ಗ್ರಾಹಕರಲ್ಲಿ ಕಣ್ಣಿರನ್ನು ತರಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ನಗದಿಗಿಂತ ಈರುಳ್ಳಿಯೇ ಹೆಚ್ಚು ಬೆಲೆಬಾಳುತ್ತದೆ ಎಂದು ಅರಿತು ತರಕಾರಿ ಅಂಗಡಿಯೊಂದಕ್ಕೆ ಕನ್ನ ಹಾಕಿದ್ದಾರೆ.

ಅಕ್ಷಯ್ ಎಂಬ ವ್ಯಾಪರಿಯೊಬ್ಬ ಈರುಳ್ಳಿ ಅಂಗಡಿಯನ್ನು ಹೊಂದಿದ್ದು ಬೆಳಗ್ಗೆ ಬಂದು ನೋಡಿದಾಗ ಈರುಳ್ಳಿಗಳು ಕಣ್ಮರೆಯಾಗಿ ಎಲ್ಲೆಡೆ ಚದುರಿದ ವಸ್ತುಗಳು ಕಂಡುಬಂದಿದ್ದವು. ಇದರಿಂದ ಆಘಾತಕ್ಕೊಳಗಾದ ಅಕ್ಷಯ್ ಸುಮಾರು ೫೦ ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ. ಈರುಳ್ಳಿ ಜತೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನೂ ಕಳವು ಮಾಡಲಾಗಿದೆ.

ಅಚ್ಚರಿ ಸಂಗತಿ ಎಂದರೆ ನಗದು ಪೆಟ್ಟಿಗೆಯಲ್ಲಿದ್ದ ಒಂದು ರೂಪಾಯಿ ಹಣವನ್ನು ಕಳ್ಳರು ಮುಟ್ಟದೇ ಕೇವಲ ಈರುಳ್ಳಿ ಚೀಲಗಳನ್ನು ಮಾತ್ರ ಹೊತ್ತೊಯ್ದಿದ್ದಾರೆ. ಕಳ್ಳರಿಗೂ ಈಗ ಹಣಕ್ಕಿಂತ ಈರುಳ್ಳಿಯೇ ಅಮೂಲ್ಯ ಎನಿಸಿರುವುದು ಮಾತ್ರ ವಿಪರ್ಯಾಸ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here