ಬೆಂಗಳೂರಿನ ಕೊರೊನ ಡೇಂಜರ್ ಜೋನ್  ಪಾದರಾಯನಪುರದ ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.ಕಂಟೈನ್‍ಮೆಂಟ್ ಝೋನ್‍ನಲ್ಲಿ ಓಡಾಡಿದ್ದ ಇಮ್ರಾನ್ ಪಾಷಾ ಅವರು ಶುಕ್ರವಾರ ಬೆಳ್ಳಗ್ಗೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ನೆನ್ನೆ ಸಂಜೆ ಬಂದ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಇಮ್ರಾನ್ ಪಾಷ ಅವರ ಮನೆ ಇರುವ ಪಾದರಾಯನಪುರದ 13ನೇ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ.

ಇಮ್ರಾನ್ ಪಾಷ ಅವರ ಪ್ರಾರ್ಥಮಿಕ ಸಂಪರ್ಕದಲ್ಲಿ ಪತ್ನಿ, ಮೂವರು ಮಕ್ಕಳು, ಇಬ್ಬರು ಕಾರ್ ಚಾಲಕರು, ಇಬ್ಬರು ಮನೆ ಕೆಲಸದವರು, ಏಳು ಜನ ಕಚೇರಿ ಕೆಲಸದವರು ಸೇರಿ ಒಟ್ಟು 21 ಜನರಿದ್ದರು. ಎಲ್ಲರನ್ನೂ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆದಿದೆ.ರಂಜಾನ್ ಹಬ್ಬದ ಪ್ರಯುಕ್ತ ಇಮ್ರಾನ್ ಪಾಷ ಅವರು ವಾರ್ಡಿನಲ್ಲಿ ಪ್ರತಿ ಮನೆಮನೆಗೆ ತೆರಳಿ ರೇಷನ್ ವಿತರಣೆ ಮಾಡಿದ್ದರು.

ಇಮ್ರಾನ್ ಫಾಷ  ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಆದರೆ ಇಮ್ರಾನ್ ಫಾಷ ಅವರು ಆಸ್ಪತ್ರೆಗೆ ತೆರಳಲು ಕೆಲವು ಗಂಟೆಗಳ ಹೈಡ್ರಾಮಾ ನಡೆಸಿದರು. ಆಂಬುಲೆನ್ಸ್ ಬಂದು ಎರಡು ತಾಸು ಕಾದರು ಇಮ್ರಾನ್ ಫಾಷ ಮಾತ್ರ ಮನೆ ಬಿಟ್ಟು ಹೊರಗಡೆ ಬಂದಿರಲಿಲ್ಲ. ಇಮ್ರಾನ್ ಫಾಷ ಮನೆ ಮುಂದೆ ಹಲವಾರು ಜನ ಜಮಾಯಿಸಿದ್ದರು. ಕೊನೆಗೂ ಇಮ್ರಾನ್ ಫಾಷ ಆಂಬುಲೆನ್ಸ್ ನಲ್ಲಿ ವಿಕ್ಟೋರಿಯ ಆಸ್ಪತ್ರೆಗೆ ತೆರಳಿದರು.

ಸೀಲ್‍ಡೌನ್ ಆಗಿದ್ದ ಏರಿಯಾದ ಮನೆಗಳಿಗೂ ತೆರಳಿ ಕಿಟ್ ನೀಡಿದ್ದರು. ಪ್ರತಿನಿತ್ಯ ನೂರಾರು ಜನರನ್ನ ಭೇಟಿ ಮಾಡಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಅವರನ್ನು ಪತ್ತೆ ಹಚ್ಚುವುದು ಬಿಬಿಎಂಪಿ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.  ಇಮ್ರಾನ್ ಫಾಷ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪತ್ತೆ ಹಚ್ಚುವ ಕೆಲಸ ಸಹ ಇಂದು ನಡೆಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here