ಕಿಚ್ಚ ಸುದೀಪ್ ಅವರ ಫೈಲ್ವಾನ್ ಚಿತ್ರದ ಬಿಡುಗಡೆಯ ನಂತರ ಚಿತ್ರವನ್ನು ನೋಡಿ ಉತ್ತರ ಭಾರತದ ಆ್ಯಂಗ್ರಿ ರ್ಯಾಂಟ್ ಮ್ಯಾನ್ ಎಂಬ ಹೆಸರಿನಲ್ಲೇ ಯೂ ಟ್ಯೂಬ್ ಚಾನೆಲ್ ಮಾಡಿಕೊಂಡಿರುವ,ಈ ಹಿಂದೆ ಕೆಜಿಎಫ್ ಸಿನಿಮಾ ಬಿಡುಗಡೆಯ ನಂತರವೂ ಸಿನಿಮಾ ಬಗ್ಗೆ ಮಾತಾಡಿ ಹೆಸರಾಗಿದ್ದ ವ್ಯಕ್ತಿ, ಇದೀಗ ಫೈಲ್ವಾನ್ ಚಿತ್ರದ ಬಗ್ಗೆ ಮಾತನಾಡಿ, ಸಿನಿಮಾ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಒಂದು ಸ್ಪೂರ್ತಿದಾಯಕ, ಪ್ರೇರಣದಾಯಕ ಹಾಗೂ ಸಿಡಿಯುವ ಸ್ಪೋಟಕದಂತಹ ಹಾಗೂ ಯಶಸ್ವಿ ಸಿನಿಮಾ ಎಂದು ಆತ ಫೈಲ್ವಾನ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯ ಅದ್ಭುತ ಎಂದಿರುವ ವ್ಯಕ್ತಿ ಫೈಲ್ವಾನ್ ಎಂಟ್ರಿ ದೃಶ್ಯವೇ ಪೈಸಾ ವಸೂಲ್ ಆಗುವಂತದ್ದು ಎಂದು ಉದ್ಗರಿಸಿದ್ದಾರೆ. ತಂದೆಯ ಪಾತ್ರ ನಿರ್ವಹಣೆ ಮಾಡಿರುವ ಸುನೀಲ್ ಶೆಟ್ಟಿ ಪಾತ್ರವು ನಿಜವಾಗಿಯೂ ತಂದೆ ಯಾವ ರೀತಿ ಮಗನನ್ನು ತರಬೇತುಗೊಳಿಸಬೇಕು ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. ಚಿತ್ರದಲ್ಲಿನ ಡೈಲಾಗ್ಸ್ ಸೂಪರ್, ಔಟ್ ಸ್ಟಾಂಡಿಂಗ್ ಮತ್ತು ಬ್ರಿಲಿಯೆಂಟ್ ಎಂದೆಲ್ಲಾ ಹೊಗಳಿದ್ದಾರೆ. ಕಿಚ್ಚ ಸುದೀಪ್ ಮತ್ತು ಸುನೀಲ್ ಶೆಟ್ಟಿ ಇಬ್ಬರೂ ಅತ್ಯುತ್ತಮವಾದ ಅಭಿನಯವನ್ನು ನೀಡಿದ್ದಾರೆ. ಕ್ರೀಡೆಗಳ ಬಗ್ಗೆ ಅವರಿಗಿರುವ ಅತೀವ ಆಸಕ್ತಿಯನ್ನು ಅವರ ನಟನೆಯಲ್ಲಿ ನೋಡಬಹುದು ಎಂದಿದ್ದಾರೆ.

ಇನ್ನು ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ನಲ್ಲಿ ದೃಶ್ಯಗಳು ಭರ್ಜರಿಯಾಗಿದೆಯೆಂದು, ಅರ್ಜುನ್ ಜನ್ಯಾ ಅವರ ಸಂಗೀತ ನಾಲ್ಕು ಭಾಷೆಗಳಿಗೂ ಇಷ್ಟವಾಗುವಂತೆ ಶ್ರಮ ವಹಿಸಿ ಸಂಗೀತ ನೀಡಿದ್ದಾರೆ ಎಂದು ಹೇಳಿರುವ ಆತ, ನಿರ್ದೇಶಕ ಕೃಷ್ಣ ಅವರ ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ, ಚಪ್ಪಾಳೆ ಹೊಡೆಯುವಂತಿದೆ ಎಂದಿರುವ ಆತ, ಸಿನಿಮಾದ ವಿಲನ್ ಗಳು ಕೂಡಾ ಚಿತ್ರದ ಆಕರ್ಷಣೆ ಎಂದಿದ್ದು, ಸಿನಿಮಾದಲ್ಲಿ ಓವರ್ ಆಕ್ಟಿಂಗ್ ಅನ್ನುವುದೇ ಇಲ್ಲ. ಎಲ್ಲವೂ ನೈಜವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here