ಉಪೇಂದ್ರ ನಟನಯೆ ‘ಐ ಲವ್​ ಯು’ ಚಿತ್ರ ನೆನ್ನೆ ತಾನೇ ಶತದಿನೋತ್ಸವ ಆಚರಿಸಿದೆ. ಖಾಸಗಿ ಹೋಟೆಲ್ ನಲ್ಲಿ ಶತದಿನ ಸಮರಂಭ ಸಹ ಐ ಲವ್ ಯು ಚಿತ್ರತಂಡ ಮಾಡಿ ಮುಗಿಸಿದೆ . ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಕಿರಣ್ ತೋಟಂಬೈಲೆ. ಅವರು ‘ಪೈಲ್ವಾನ್​’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. “ಪೈಲ್ವಾನ್​ ನೋಡಿ ಶಾಕ್​ ಅಲ್ಲಿದ್ದೇವೆ. ಕೃಷ್ಣ ಅವರೇ ಯಾಕೆ ಇಂಥ ಸಿನಿಮಾ ಮಾಡಿ ಸುದೀಪ್​ನ ಇನ್ಸಲ್ಟ್​ ಮಾಡ್ತೀರಾ,” ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು.ಈ ಪೋಸ್ಟ್​ಗೆ ಕಮೆಂಟ್​ ಮಾಡಿದ್ದ ಸುದೀಪ್​ ಅಭಿಮಾನಿ, ‘ನೀವು ಸಂಗೀತ ಸಂಯೋಜನೆ ಮಾಡಿದ್ದ ಐ ಲವ್​ ಯು ಸಿನಿಮಾ ಅತೀ ಕೆಟ್ಟದಾಗಿತ್ತು’ ಎಂದಿದ್ದ. ಇದಕ್ಕೆ ಉತ್ತರಿಸಿದ್ದ ಕಿರಣ್​, ‘ಐ ಲವ್​ ಯು ಚಿತ್ರ ಚೆನ್ನಾಗಿದೆ ಎಂದು ಹೇಳಿದವರಾರು?

ನಾನು ಸಂಗೀತ ಸಂಯೋಜನೆ ಮಾಡಿದ ಸಿನಿಮಾವೇ ನನಗೆ ಇಷ್ಟವಾಗಿಲ್ಲ. ಅಂತೆಯೇ ಪೈಲ್ವಾನ್​ ಕೂಡ’ ಎಂದಿದ್ದಾರೆ. ಮತ್ತೊಂದು ಕಮೆಂಟ್​ನಲ್ಲಿ ‘ಡಬ್ಬಾ ಐ ಲವ್​ ಯು’ ಎಂದು ಬರೆದುಕೊಂಡಿದ್ದಾರೆ ಕಿರಣ್​.ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ. ಓರ್ವ ಸಂಗೀತ ನಿರ್ದೇಶಕ,  ಅವರು ಮಾಡಿದ ಸಿನಿಮಾದ ಮೇಲೆ  ಹೆಮ್ಮೆ ಹೊಂದಿಲ್ಲ ಎಂದಾದರೆ ಅಂಥವರಿಗೆ ಇನ್ನೆಷ್ಟು ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕೀತು ಎಂದು ಕೆಲವರು ಪ್ರಶ್ನಿಸಿದ್ದಾರೆ. ನೆನ್ನೆ ಐ ಲವ್ ಯು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಅವರಿಗೆ ಪತ್ರಕರ್ತರು ಹಿಗ್ಗಾಮುಗ್ಗ ಜಾಡಿಸಿದ್ದಾರೆ. ನಿಮಗೆ ಯಾವ ನೈತಿಕತೆ ಇದೆ ಎಂದು ಸ್ಟೇಜ್ ಮೇಲೆ ನಿಂತುಕೊಂಡು ಮಾತನಾಡುತ್ತಿದ್ದೀರಿ?

ಕನ್ನಡ ಚಿತ್ರದ ಬಗ್ಗೆ ಬಹಿರಂಗವಾಗಿ ಚೆನ್ನಾಗಿಲ್ಲ ಎಂಬ ಹೇಳಿಕೆ ಕೊಡುವ ನೀವು ನಿಮ್ಮ ಚಿತ್ರದ ಬಗ್ಗೆ ನೆಗೆಟಿವ್ ಮಾತನಾಡುತ್ತೀರಲ್ಲಾ ನೀವು ಎಷ್ಟು ಹಾಡುಗಳಿಗೆ ಸಂಗೀತ ನೀಡಿದದ್ದೀರಿ ? ಎಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದೀರಾ? ನೀವು ಕೆಲಸ ಮಾಡಿದ ಎಷ್ಟು ಹಾಡುಗಳು ಹಿಟ್ ಆಗಿವೆ ? ಎಂದು ನಿರ್ದೇಶಕ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಅವರಿಗೆ ಪತ್ರಕರ್ತರು ತರಾಟೆಗೆ ತೆಗೆದುಕೊಂಡರು. ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಸಂಗೀತ ನಿರ್ದೇಶಕ ಮರುಮಾತನಾಡದೆ ಸ್ಟೇಜ್ ಇಳಿದು ಹೊರನಡೆದ ಪ್ರಸಂಗ ನಡೆದಿದೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಅರ್ ಚಂದ್ರು ನಿರ್ದೇಶನದ #I_LOVE_YOU ಚಿತ್ರದ ಶತದಿನದ ಸಮಾರಂಭ ಮತ್ತು ಇದೇ ಜೋಡಿಯ ಹೊಸ ಸಿನಿಮಾ ನೇರಪ್ರಸಾರ

ಕನ್ನಡವೇ ಸತ್ಯ ಕನ್ನಡವೇ ನಿತ್ಯ यांनी वर पोस्ट केले शनिवार, १४ सप्टेंबर, २०१९

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here