ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಭಾನುವಾರ ನಡೆಯಲಿರುವ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯಕ್ಕೆ ತಮ್ಮ ಗೆಳೆಯ ಪಾಕಿಸ್ತಾ‌ ಮೂಲದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ಬಶೀರ್ (ಚಾಚಾ ಶಿಕಾಗೋ) ಅವರಿಗೆ ಪಂದ್ಯದ ಟಿಕೆಟ್ ಕೊಡಿಸಿದ್ದಾರೆ. ಧೋನಿ ಹಾಗೂ ಬಶೀರ್ ಅವರು ಕಳೆದ ಒಂಬತ್ತು ವರ್ಷಗಳಿಂದ ಗೆಳೆಯರಾಗಿದ್ದಾರೆ. ಅಲ್ಲದೇ ಬಶೀರ್ ಅವರು ದೋನಿಯ ಅಭಿಮಾನಿಯೂ ಹೌದು. ಇದೇ ಭಾನುವಾರ ಅಂದರೆ ಜೂನ್ 16ರಂದು ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಹೈ ವೋಲ್ಟೆಜ್ ಕ್ರಿಕ್ರೆಟ್ ಪಂದ್ಯಕ್ಕೆ ಅಲ್ಲಿನ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯಕ್ಕೆ ಧೋನಿಯವರು ಬಶೀರ್ ಅವರಿಗೆ ಉಡುಗೊರೆ ರೂಪದಲ್ಲಿ ಪಂದ್ಯದ ಟಿಕೆಟ್‍ನ್ನು ನೀಡಿದ್ದಾರೆ.

ಬಶೀರ್ ಅವರ ಅಮೆರಿಕದ ಶಿಕಾಗೋ ನಗರದಲ್ಲಿ ಒಂದು ರೆಸ್ಟೋರೆಂಟ್ ಮಾಲಿಕರಾಗಿದ್ದಾರೆ. 63 ಯ ವಯೋಮಾನಾದ ಈ ಹಿರಿಯರು ಪಾಕಿಸ್ತಾನ ಮೂಲದವರಾಗಿದ್ದು, ಬಶೀರ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಯಾಗಿರುವುದು ವಿಶೇಷ. ಈ ಹಿಂದೆ ಅಂದರೆ 2011ರ ವಿಶ್ವಕಪ್ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊಹಾಲಿಯಲ್ಲಿ ಸೆಮಿಫೈನಲ್ ಪಂದ್ಯ ನಡೆದಾಗಲೂ ಕೂಡಾ ಮೊಹಮ್ಮದ್ ಬಶೀರ್ ಅವರು ಪಂದ್ಯ ವೀಕ್ಷಣೆ ಮಾಡಲು ಅಮೆರಿಕದಿಂದ ಭಾರತಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಕೂಡಾ ಧೋನಿ ತಮ್ಮ ಹಿರಿಯ ಅಭಿಮಾನಿಗಾಗಿ ಟಿಕೆಟ್ ಖರೀದಿಸಿದ್ದರು.

ಪಂದ್ಯ ನೋಡಲು ಬಶೀರ್ ಅವರು ಇಂಗ್ಲೆಂಡ್‍ಗೆ ತಲುಪಿದ್ದಾರೆ. ಅವರು ಮಾತನಾಡುತ್ತಾ ಧೋನಿ ಒಬ್ಬ ಒಳ್ಳೆಯ ವ್ಯಕ್ತಿ ಅವರ ಜೊತೆ ಕಳೆದ 9 ವರ್ಷಗಳಿಂದ ನನಗೆ ಸ್ನೇಹವಿದೆ ಎಂದು ಹೇಳಿದ್ದಾರೆ. ಅಲ್ಲದೆ ಭಾರತ ಹಾಗೂ ಪಾಕ್ ನಡುವಿನ ಈ ರೋಚಕ ಪಂದ್ಯಕ್ಕಾಗಿ ಜನರು 800-900 ಪೌಂಡ್ ಕೊಟ್ಟು ಟಿಕೆಟ್ ಪಡೆಯಲು ಸಿದ್ಧರಿದ್ದಾರೆ. ಆದರೆ ನಾನು ಈ 800-900 ಪೌಂಡ್ ನಲ್ಲಿ ಮತ್ತೆ ಚಿಕಾಗೋಗೆ ಮರಳಲು ಕೂಡಾ ಸಾಧ್ಯ. ಟಿಕೆಟ್ ಗಾಗಿ ನಾನು ಅಷ್ಟು ಹಣ ಖರ್ಚು ಮಾಡುವ ಅಗತ್ಯವಿಲ್ಲ ಏಕೆಂದರೆ ನಾನು ನನಗೆ ಧೋನಿ ಅವರು ಟಿಕೆಟ್ ನೀಡಿದ್ದಾರೆಂದು ಬಹಳ ಖುಷಿಯಿಂದ ಹೇಳುತ್ತಾರೆ ಬಶೀರ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here