ನೆನ್ನೆ ಭಾರತದ ವಾಯುಸೇನೆ ಪಾಕಿಸ್ತಾನದ ಮೇಲೆ ನಡೆಸಿದ್ದಂತಹ ಏರ್ ಸ್ಟ್ರೈಕ್ ನಿಂದ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಅಲ್ಲದೆ ಈ ಧಾಳಿಯಲ್ಲಿ ಸುಮಾರು ಮುನ್ನೂರಕ್ಕಿಂತ ಅಧಿಕ ಉಗ್ರರು ಹತರಾದ ಸಂಭ್ರಮವನ್ನು ಇಡೀ ದೇಶ ಆಚರಿಸಿತ್ತು. ಇದು ಭಾರತೀಯ ಸೇನೆ ಪಾಕಿಸ್ತಾನಕ್ಕೆ ನೀಡಿದ ಪ್ರಬಲ ಹೊಡೆತವಾಗಿದೆ. ಅದನ್ನೇ ಕಾರಣವಾಗಿಟ್ಟುಕೊಂಡ ಪಾಕಿಸ್ತಾ‌ನ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಇಂದು ಭಾರತದ ಮೇಲೆ ದಾಳಿ ಮಾಡಲು ತನ್ನ ಪ್ರಯತ್ನವನ್ನು ಮಾಡಿದೆ. ಇಂದು ಪಾಕಿಸ್ತಾನದ ಕಡೆಯಿಂದ ಬಂದ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಬೆಳಿಗ್ಗೆ ಹೊಡೆದುರುಳಿಸಿದೆ. ಆದರೆ ಇದೇ ವೇಳೆ ಭಾರತದ ಮಿಗ್-21 ಯುದ್ದವೂ ಪತನವಾಗಿತ್ತು.

ಈ ಎಲ್ಲಾ ಬೆಳವಣಿಗೆಗಳು ನಡೆಯುವಾಗ ಇದ್ದಕ್ಕಿದ್ದಂತೆ ಒಂದು ಸ್ಪೋಟಕ ಮಾಹಿತಿ ಹೋರಬಿದ್ದಿದೆ. ಅದು ವಿಮಾನದ ಪೈಲಟ್ ವಿಂಗ್ ಕಮ್ಯಾಂಡರ್ ಅಭಿನಂದನ್ ಎನ್ನುವವರು ಪಾಕಿಸ್ತಾನದ ಸೇನೆಯಿಂದ ಬಂಧಿಯಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನ ಕೂಡಾ ಆ ವಿಷಯವನ್ನು ಪುಷ್ಟಿಗೊಳಿಸುವಂತೆ ಹೇಳಿಕೆಗಳನ್ನು ನೀಡಿತ್ತು. ಅಲ್ಲದೆ ಫೋಟೋ ಹಾಗೂ ವಿಡಿಯೋಗಳು ಕೂಡಾ ಬಿಡುಗಡೆಗೊಂಡವು. ವಿಷಯದ ಸತ್ಯಾಸತ್ಯತೆಯ ಬಗ್ಗೆ ಎಲ್ಲೆಡೆ ಆತಂಕ ಹಾಗೂ ಗೊಂದಲಗಳು ನಿರ್ಮಾಣವಾದವು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಅವರ ಸೇಫ್ಟಿಗಾಗಿ ಸರ್ಕಾರವನ್ನು ಕೋರುತ್ತಾ ಟ್ವೀಟ್ ಮಾಡತೊಡಗಿದ್ದಾರೆ. ವಿಷಯ ಹೀಗಿರುವಾಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಅಭಿನಂದನ್ ನಾನು ಸೇಫ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಅಭಿನಂದನ್ ಚಹಾ ಕುಡಿಯುತ್ತಿರುವ ವೀಡಿಯೋ ಒಂದನ್ನ ಪಾಕಿಸ್ತಾನ ಬಿಡುಗಡೆ ಮಾಡಿದೆ. ಆ ವೀಡಿಯೋದಲ್ಲಿ ಅಭಿನಂದನ್ ಅವರು ಮಾತನಾಡುವುದನ್ನು ನಾವು ನೋಡಬಹುದು. ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ ಜನರಿಂದ ಪಾಕಿಸ್ತಾನದ ಸೇನೆ ನನ್ನನ್ನು ರಕ್ಷಿಸಿ ಕಾಪಾಡಿದೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಭಾರತೀಯ ಸೇನೆಯ ಕುರಿತು ಅಭಿನಂದನ್ ಪ್ರಶ್ನಿಸಲು ಪಾಕ್ ನ ಅಧಿಕಾರಿ ಪ್ರಯತ್ನ ಪಟ್ಟಾಗ ಅವರು ಅಭಿನಂದನ್ ನಾನು ಭಾರತದ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ.ಈ ವೀಡಿಯೋ ದಲ್ಲಿ ಇರುವುದು ಅಭಿನಂದನ್ ಹಾ ? ಮಿಸ್ ಆಗಿರುವ ಪೈಲೆಟ್ ಇವರೇನಾ ? ಗೊತ್ತಿಲ್ಲ.. ಆದರೆ ಪಾಕ್ ಹೇಳುವ ಪ್ರಕಾರ ಮಿಸ್ ಆಗಿರುವ ಪೈಲೆಟ್ ಇವರೆ ಅಂತೆ..

ವೀಡಿಯೋ ಇಲ್ಲಿದೆ ನೋಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here