ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದು ಪಡಿಸಿದ ನಿರ್ಧಾರಕ್ಕೆ 1 ವರ್ಷ ತುಂಬಲು ಇನ್ನೊಂದು ದಿನ ಬಾಕಿಯಿದೆ ಎನ್ನುವಾಗಲೇ ಪಾಕಿಸ್ತಾ‌ನ ಭಾರತವನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಿದೆ. ಸದಾ ಒಂದಲ್ಲಾ ಒಂದು ಕುಟಿಲತೆಯನ್ನು ಮೆರೆಯುವ ಪಾಕಿಸ್ತಾನ ಈಗ ಮತ್ತೊಮ್ಮೆ ತನ್ನ ಚಾಳಿಯನ್ನು ಮುಂದುವರೆಸಿದೆ. ಪಾಕ್ ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದ ಕೆಲವು ಭಾಗಗಳನ್ನು ತನ್ನದು ಅಥವಾ ತನಗೆ ಸೇರಿದ್ದು ಎಂದು ಬಿಂಬಿಸುವಂತಹ ಹೊಸ ರಾಜಕೀಯ ನಕ್ಷೆಯೊಂದನ್ನು ಮಂಗಳವಾರದಂದು ಹೊರ ತಂದಿದೆ.

ಈ ಹೊಸ ನಕ್ಷೆಯಲ್ಲಿ ಪಾಕಿಸ್ತಾನವು ಈಗಾಗಲೇ ತನ್ನ ವಶದಲ್ಲಿರುವ ಕಾಶ್ಮೀರ ಕಣಿವೆ ಮಾತ್ರವಲ್ಲದೇ, ಭಾರತದ ಇಡೀ ಕಾಶ್ಮೀರ ಕಣಿವೆ ಪ್ರದೇಶವನ್ನು ಪಾಕಿಸ್ತಾನ ಎನ್ನುವಂತೆ ನಕ್ಷೆಯನ್ನು ರಚನೆ ಮಾಡಿದೆ. ಇದೇ ನಕ್ಷೆಯಲ್ಲಿ ಪಾಕ್ ಗಡಿ ನಿಯಂತ್ರಣ ರೇಖೆಯನ್ನು ಕೂಡಾ ವಿಸ್ತರಣೆ ಮಾಡಿದ್ದು, ಈಗ ಅದು ಕಾರಕೋಮ್‌ ಪಾಸ್‌ವರೆಗೂ ವಿಸ್ತರಣೆ ಕಂಡಿದೆ. ತನ್ನ ಈ ಕುಟಿಲ ಪ್ರಯತ್ನದ ಮೂಲಕ ಈಗ ಸಿಯಾಚಿನ್‌ ಕೂಡಾ ತನಗೆ ಸೇರಿದ್ದು ಎಂದು ವಾದಿಸುವ ಯತ್ನ ಒಂದನ್ನು ಮಾಡುತ್ತಿದೆ. ಇದು ಮಾತ್ರವೇ ಅಲ್ಲದೇ ಪಾಕ್ ನ ಸಚಿವ ಸಂಪುಟ ಇಸ್ಲಾಮಾಬಾದ್ ನಲ್ಲಿನ ಪ್ರಮುಖ ರಸ್ತೆಯ ಹೆಸರನ್ನು ಕಾಶ್ಮೀರಿ ಹೆದ್ದಾರಿ ಬದಲಾಗಿ ಶ್ರೀ ನಗರ ಹೆದ್ದಾರಿ ಎಂದು ಬದಲಿಸಲು ತೀರ್ಮಾನ ಕೈಗೊಂಡಿದೆ.

ಪಾಕಿಸ್ತಾನ ನಡೆಸುತ್ತಿರುವ ಇಂತಹ ಪುಂಡಾಟಿಕೆಗಳ ವಿರುದ್ಧ ಭಾರತ ಕೂಡಾ ಕಿಡಿಕಾರಿದ್ದು, ಕಾನೂನು ಸಿಂಧುತ್ವ ಇಲ್ಲದ ಹಾಗೂ ಅಂತರರಾಷ್ಟ್ರೀಯ ವಿಶ್ವಾಸ ಅಥವಾ ಮಾನ್ಯತೆ ಇಲ್ಲದ ಈ ನಕ್ಷೆಗೆ ಯಾವುದೇ ಮಾನ್ಯತೆ ಇಲ್ಲವೆಂದು, ಈ ಹೊಸ ನಕ್ಷೆ ಒಂದು ಹಾಸ್ಯಾಸ್ಪದ ಬೆಳವಣಿಗೆ ಮಾತ್ರವೇ ಎಂದು ಭಾರತವು ಪಾಕಿಸ್ತಾನಕ್ಕೆ ತಿರುಗೇಟನ್ನು ನೀಡಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here