ಕಾಲ ಬದಲಾದಂತೆ ಆಧುನಿಕತೆ ಹಾಗೂ ಒತ್ತಡದ ಜೀವನದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಹೊಸ ಹೊಸ ರೋಗಗಳ ಕುರಿತಾಗಿ ನೋಡುತ್ತಿರುವ ಜನರು ಹಿಂದೆಂದಿಗಿಂತಲೂ ಹೆಚ್ಚಿನ ಒತ್ತು ಆರೋಗ್ಯಕ್ಕೆ ಹಾಗೂ ಆರೋಗ್ಯ ವೃದ್ಧಿ ಮಾಡುವ ಆಹಾರಕ್ಕೆ ನೀಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ತರಕಾರಿಗಳು, ಹಣ್ಣುಗಳು ಹಾಗೂ ಹಸಿರು ಸೊಪ್ಪಿಗೆ ವಿಶೇಷ ಪ್ರಾಧಾನ್ಯತೆ ದೊರೆಯುತ್ತಿದೆ ಕೂಡಾ. ಅಂತಹವರಿಗಾಗಿ ನಾವಿಂದು ಆರೋಗ್ಯಕ್ಕೆ ದೃಷ್ಟಿಯಿಂದ ಬಹುಪಯೋಗಿ ಎನಿಸಿರುವ ಪಾಲಕ್ ಸೊಪ್ಪಿನ ಬಗ್ಗೆ ತಿಳಿಸಲು ಹೊರಟಿದ್ದು, ಈ ಸೊಪ್ಪಿನ ಉಪಯೋಗ ಅರಿತರೆ ನೀವು ಇದನ್ನು ಬೇಡ ಎನ್ನುವುದೇ ಇಲ್ಲ.

ಪಾಲಕ್ ನಲ್ಲಿ ಪ್ರೋಟೀನ್, ನಾರಿನಾಂಶ ಮತ್ತು ಕಬ್ಬಿಣದ ಅಂಶ ಹೇರಳವಾಗಿದ್ದು ಇದು ದೇಹದ ಆರೋಗ್ಯವನ್ನು ವೃದ್ಧಿಸುವುದು ಮಾತ್ರವೇ ಅಲ್ಲದೇ ಚರ್ಮದ ತುರಿಕೆಯಂತಹ ಸಮಸ್ಯೆಗೆ ಪರಿಹಾರ ಕೂಡಾ ನೀಡುತ್ತದೆ. ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ತಲೆ ಕೂದಲ ಬೆಳವಣಿಗೆಗೆ ಕೂಡಾ ಸಹಕಾರಿಯಾಗಿದೆ. ಇದರಲ್ಲಿರುವ ಕಬ್ಬಿಣಾಂಶ ಕೂದಲು ಉದುರುವುದನ್ನು ತಡೆಯುವ ಜೊತೆಗೆ, ಶಕ್ತಿಯನ್ನು ವರ್ಧಿಸಲು ಕೂಡಾ ಸಹಾಯಕವಾಗಿದೆ.
ಪಾಲಕ್ ನಲ್ಲಿರುವ ವಿಟಮಿನ್ ಸಿ ಮತ್ತು ಎ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ವಿಟಮಿನ್ ಸಿ ಇಂದಾಗಿ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.

ಪಾಲಕ್ ನಲ್ಲಿರುವ ವಿಟಮಿನ್ ಗಳು ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು, ಬಿಸಿಲಿನಿಂದ ಟ್ಯಾನ್ ಆದ ಚರ್ಮಕ್ಕೆ ಮತ್ತೆ ಸಹಜ ಕಾಂತಿಯನ್ನು ನೀಡುವುದು ಮಾತ್ರವೇ ಅಲ್ಲದೇ ಚರ್ಮದ ಆರೋಗ್ಯಕ್ಕೆ ಪೂರಕವಾಗಿದೆ. ಪಾಲಕ್ ನಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆ ಯಲ್ಲಿ ನೆರವಾಗುತ್ತದೆ ಹಾಗೂ ಮಲಬದ್ಧತೆಯ ಸಮಸ್ಯೆಗೆ ಒಂದು ಪರಿಹಾರ ನೀಡಲು ಸಹಕಾರಿಯಾಗಿದೆ. ಇಂತಹ ಉತ್ತಮ ಗುಣಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಪಾಲಕ್ ಸೊಪ್ಪನ್ನು ವಾರದಲ್ಲಿ ಮೂರು ಬಾರಿ ಬಳಸುವುದು ನಮ್ಮ ಆರೋಗ್ಯಕ್ಕೆ ಉತ್ತಮ ಹಾಗೂ ಅದರಿಂದ ಉತ್ತಮ ಫಲಿತಾಂಶ ಕಾಣಬಹುದು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here