ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರದ 17 ವರ್ಷದ ಬ್ಯಾಟ್ಸ ಮನ್ ಜೈಸ್ವಾಲ್ ಜಾರ್ಖಂಡ್ ವಿರುದ್ಧ ಯಶಸ್ವಿಯಾಗಿ ದ್ವಿಶತಕ ಬಾರಿಸುವ ಮೂಲಕ ಈ ವರ್ಷದ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಷ್ಟು ಸಾಧನೆಯನ್ನು ಮೆರೆದಿರುವ ಜೈಸ್ವಾಲ್ ಜೀವನ ಹೂವಿನ ಹಾಸಿಗೆಯಲ್ಲ ಬದಲಾಗಿ ಕಷ್ಟಗಳೆಂಬ ಮುಳ್ಳಿನ ಹಾದಿಯಲ್ಲಿ ನಡೆದು ಬಂದು ಈ ಹಂತವನ್ನು ತಲುಪಿರುವ ಅವರ ಸಾಧನೆ ಮತ್ತು ಶ್ರಮ ನಿಜಕ್ಕೂ ಒಂದು ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ.
ಉತ್ತರ ಪ್ರದೇಶದ ಬದೋಹಿಯಲ್ಲಿ ಒಂದು ಸಣ್ಣ ಅಂಗಡಿಯನ್ನು ಹೊಂದಿರುವ ವ್ಯಕ್ತಿಯ ಮಗನಾದ ಜೈಸ್ವಾಲ್ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂಬೈ ಕಡೆಗೆ ಹೊರಟು ಬಂದ ಯುವಕ.

ಆರಂಭದಲ್ಲಿ ಮುಂಬೈನಲ್ಲಿ ತನ್ನ ಅವಶ್ಯಕತೆಗಳನ್ನು , ಪೂರೈಸಲು ಜೈಸ್ವಾಲ್ ಅವರು ಬಹಳಷ್ಟು ಹೆಣಗಾಡಬೇಕಾಯಿತು. ರಾತ್ರಿ ಹೊತ್ತು ಮಲಗಲು ಡೈರಿ ಅಂಗಡಿಯ ಬಳಿ ಇರಬೇಕಾಗಿತ್ತು. ಆದರೆ ಅಲ್ಲಿಂದ ಹೊರ ಹಾಕಲ್ಪಟ್ಟಾಗ, ಆಜಾದ್ ಮೈದಾನದ ಮುಸ್ಲಿಂ ಯುನೈಟೆಡ್ ಕ್ಲಬ್ ಡೇರೆಗಳಲ್ಲಿ ಗ್ರೌಂಡ್‌ಮೆನ್‌ಗಳೊಂದಿಗೆ ಮಲಗುತ್ತಿದ್ದರು ಜೈಸ್ವಾಲ್. ಜೀವನೋಪಾಯಕ್ಕಾಗಿ ಆತ ಪಾನಿ ಪುರಿಯನ್ನೂ ಮಾರಿದರು. ಆದರೆ ಕಷ್ಟಗಳಿಗೆ ಹೆದರಿ ಓಡುವ ಕೆಲಸವನ್ನು ಮಾಡಲಿಲ್ಲ.

ನಂತರ, ಸ್ಥಳೀಯ ತರಬೇತುದಾರ ಜ್ವಾಲಾ ಸಿಂಗ್ ಅವರು ಜೈಸ್ವಾಲ್ ಗೆ ಉಳಿದುಕೊಳ್ಳಲು ಒಂದು ಆಶ್ರಯವನ್ನು ಒದಗಿಸಲು ಸಹಾಯ ಮಾಡಿದರು. ಜೈಸ್ವಾಲ್ ಪ್ರಸ್ತುತ ಸಂತಕ್ರೂಜ್‌ನ ಕದಮ್‌ವಾಡಿಯಲ್ಲಿರುವ ಚಾಲ್‌ನಲ್ಲಿ ವಾಸಿಸುತ್ತಿದ್ದಾರೆ ಆದರೆ ಅವರ ಕ್ರಿಕೆಟ್ ಬ್ಯಾಟ್ ಇದೇ ವೇಗದಲ್ಲಿ ಓಡಿದರೆ ಜೈಸ್ವಾಲ್ ಜೀವನ ರೀತಿ ಪ್ರಕಾಶಮಾನವಾಗಿ ಹೊಳೆಯುವುದರಲ್ಲಿ ಮತ್ತು ಸುಂದರವಾಗುವುದರಲ್ಲಿ ಅನುಮಾನವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here