ಐಟಿ ವಿಚಾರಣೆಗೆ ಸಂಬಂಧಿಸಿದಂತೆ, ಪರಮೇಶ್ವರ್ ಅವರ ಪಿಎ ರಮೇಶ್ ನನಗೆ ಐಟಿ ವಿಚಾರಣೆಯನ್ನು ಎದುರಿಸುವುದಕ್ಕೆ ಆಗುವುದಿಲ್ಲ, ಹಾಗೂ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಈಗ ಆ ಬೆದರಿಕೆ ನಿಜವಾಗಿದೆ. ಮಾಜಿ ಡಿಸಿಎಂ ಪರಮೇಶ್ವರ್ ಅವರ ಪಿಎ ರಮೇಶ್ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ್ ಅವರು ಕಳೆದ 6 ವರ್ಷದಿಂದ ಪರಮೇಶ್ವರ್ ಅವರ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪರಮೇಶ್ವರ್ ಅವರ ಮೇಲೆ ಐಟಿ ಧಾಳಿ ನಡೆದ ಹಿನ್ನೆಲೆಯಲ್ಲಿ ರಮೇಶ್ ಅವರ ಮನೆಯ ಮೇಲೂ ಕೂಡಾ ಧಾಳಿ ನಡೆದಿತ್ತು. ಆದರೆ ಅವರ ಮನೆಯಲ್ಲಿ ಯಾವುದೇ ರೀತಿಯ ದಾಖಲೆಗಳು ದೊರೆತಿರಲಿಲ್ಲ.

ರಮೇಶ್ ಅವರಿಗೆ ಪರಮೇಶ್ವರ್ ಪತ್ರ ವ್ಯವಹಾರದ ಬಗ್ಗೆ ತಿಳಿದಿದ್ದರಿಂದಣ ಐಟಿ ಅಧಿಕಾರಿಗಳು ಧಾಳಿ ನಡೆಸಿದ್ದರು. ಈ ವಿಚಾರವಾಗಿ ಐಟಿ ಅಧಿಕಾರಿಗಳು
2 ದಿನ ವಿಚಾರಣೆ ನಡೆಸಿದ್ದರು. ವಿಚಾರಣೆಯ ವೇಳೆ ಐಟಿ ಅಧಿಕಾರಿಗಳು ಜೈಲಿಗೆ ಹೋಗ್ತಿಯಾ, ಈಗಾಗಲೇ ನಮಗೆ ಹವಾಲಾ ದಂಧೆ ಸಾಕ್ಷ್ಯ ಸಿಕ್ಕಿದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಹೆದರಿದ್ದರು ಎನ್ನಲಾಗಿದ್ದು, ಈ ದಿನ ಬೆಳಿಗ್ಗೆ ಅವರು ತಮ್ಮ ಆಪ್ತರಿಗೆ ಫೋನ್ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ನಂತರ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಕೊಂಡಿದ್ದರು.

ಆ ಸಮಯದಲ್ಲಿ ಅವರು ಇಬ್ಬರು ಆಪ್ತರಲ್ಲಿ ತಾನು ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ ಇರುವುದಾಗಿ ಹೇಳಿದ ನಂತರ ನಾಪತ್ತೆಯಾಗಿದ್ದರು.ಆಪ್ತರಿಗೆ ಕರೆ ಮಾಡಿದ ಸಂದರ್ಭದಲ್ಲಿ ಅವರು ನಾನು ಬಡವ. ಆದರೂ ಅಧಿಕಾರಿಗಳು ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದ್ದ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು, ವಿಚಾರಣೆ ಎದುರಿಸಲು ಆಗುವುದಿಲ್ಲ ಎಂದಿದ್ದಾರೆ. ಅನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕಡೆಗೆ ಹೇಳಿದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here