ಅಪರಾಧಗಳನ್ನು ಮಾಡಿ ಶಿಕ್ಷೆಗೊಳಗಾಗಿ, ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು, ಅಪರಾಧಿಗಳೆನಿಸಿದವರ ಮನ ಪರಿವರ್ತನೆಯಾಗಿ ಅವರು ಬದಲಾಗಬೇಕು ಎನ್ನುವುದಕ್ಕಾಗಿ ಅಪರಾಧಿಗಳನ್ನು ಜೈಲಿನಲ್ಲಿ ಇರಿಸಲಾಗುತ್ತದೆ. ಆದರೆ ಅಂತಹ ಜೈಲುಗಳೇ ಅಪರಾಧಕ್ಕೆ ಸಹಕಾರ ನೀಡಿದರೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ‌. ಅಂತಹುದೊಂದು ಬೆಳವಣಿಗೆ ರಾಜ್ಯದಲ್ಲಿ ನಡೆದಿದ್ದು, ಅದರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ, ಅತ್ಯಧಿಕ ಪ್ರಮಾಣದ ಮಾರಕಾಸ್ತ್ರ ಹಾಗೂ ಗಾಂಜಾವನ್ನು ವಶಪಡಿಸಿಕೊಂಡ ಘಟನೆಯೊಂದು ನಡೆದಿದೆ. ಸಿಸಿಬಿ ಜಂಟಿ ಆಯುಕ್ತರಾದ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ 60 ಜನರ ಪೋಲಿಸ್ ತಂಡವು ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಧಾಳಿ ನಡೆಸಿದ್ದಾರೆ.

ಜೈಲಿನಲ್ಲಿ ಖೈದಿಗಳು ಮೊಬೈಲ್ ಬಳಕೆ ಮಾಡುವ ಬಗ್ಗೆ, ಗಾಂಜಾ ಹಾಗೂ ಮಾರಕಾಸ್ತ್ರಗಳ ಬಳಕೆ ಬಗ್ಗೆ ದೂರ ಬಂದ ಹಿನ್ನೆಲೆಯಲ್ಲಿ ಜೈಲಿನ ಮೇಲೆ ಧಾಳಿಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಧಾಳಿಯ ಸಂದರ್ಭದಲ್ಲಿ ವೇಳೆ ಸುಮಾರು 37 ಚಾಕು, ಗಾಂಜಾ ಸೇದುವ ಪೈಪ್ ಗಳನ್ನು ವಶಕ್ಕೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಇವುಗಳ ಜೊತೆಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳು ಕೂಡಾ ದೊರೆತಿದ್ದು, ಅವುಗಳನ್ನು ಸಹಾ ಸಿಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವಿಷಯದ ಬಗ್ಗೆ ಮಾತನಾಡಿರುವ ಆಯುಕ್ತರಾದ ಸಂದೀಪ್ ಪಾಟೀಲ್ ಅವರು ಧಾಳಿ ವೇಳೆ ಅನೇಕ ವಸ್ತುಗಳು ಪತ್ತೆಯಾಗಿದ್ದು, ಅಪರಾಧ ಚಟುವಟಿಕೆಗಳು ಜೈಲಿನಿಂದಲೇ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸಲಾಗುವುದು ಎಂಬ ಮಾಹಿತಿಯನ್ನು ಕೂಡಾ ಅವರ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here