ದಶಕಗಳ ಕಾಲ ಕೋರ್ಟ್ ನಲ್ಲಿ ನಲುಗಿದ್ದ ವಿವಾದಿತ ಅಯೋಧ್ಯಾ ಭೂ ವಿವಾದ ಪ್ರಕರಣ ನಿನ್ನೆಯ ಸುಪ್ರೀಂ ಕೋರ್ಟ್ ತೀರ್ಮಾನದ ನಂತರ ಸುಖಾಂತ್ಯವಾಗಿದೆ. ಈ ಪ್ರಕರಣದ ಕುರಿತಾಗಿ ಅಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಕೋರ್ಟ್ ನಲ್ಲಿ ವಾದ ಮಂಡಿಸಿ ಇಂದಿನ ಈ ತೀರ್ಪಿಗೆ ಪೂರಕವಾದ ವಾದ ಮಂಡನೆ ಮಾಡಿದ ಆ ವಕೀಲರು ಯಾರು ಎನ್ನುವುದನ್ನು ನಾವು ತಿಳಿಯಬೇಕು. ಅವರ ಬಗ್ಗೆ ತಿಳಿಯಲು ಹೋದಾಗ ಮೊದಲಿಗೆ ನಮಗೊಂದು ಆಶ್ಚರ್ಯಕರ ಸಂಗತಿ ಎದುರಾಗುವುದು ಅದೇನೆಂದರೆ ಕೋರ್ಟ್ ನಲ್ಲಿ ಈ ಪ್ರಕರಣದ ಕುರಿತಾಗಿ ವಾದ ಮಂಡಿಸಿದ ವಕೀಲರ ಪ್ರಸ್ತುತ ವಯಸ್ಸು 92.ಹೌದು 92 ರ ಇಳಿವಯಸ್ಸಿನಲ್ಲಿ ಕೂಡಾ ವಕೀಲರಾದ ಪರಸರನ್ ಅವರು ಸುಪ್ರೀಂ ಕೋರ್ಟ್ ನಲ್ಲಿ 40 ದಿನಗಳ ಕಾಲ ರಾಮಲಲ್ಲಾ ವಿರಾಜ ಮಾನ್ ಪರವಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ.

ವಿಶೇಷ ಎಂದರೆ ಅವರು ತಮ್ಮ ವಾದ ಮಂಡನೆ ಮಾಡುವ ಸಮಯದಲ್ಲಿ ನ್ಯಾಯಧೀಶರ ಮುಂದೆ ನಿಂತು ಕೊಂಡೇ ವಾದ ಮಂಡಿಸಿದ್ದಾರೆ. ವಯೋಸಹಜ ಆಯಾಸ ಅಥವಾ ಇನ್ನಾವುದೇ ವಿಷಯದ ಕಡೆಗೆ ಗಮನ ನೀಡದೆ, ಸ್ವತಃ ನ್ಯಾಯಾಧೀಶರೇ ಅವರಿಗೆ ಕುಳಿತು ನ್ಯಾಯ ಮಂಡನೆ ಮಾಡಲು ಅವಕಾಶ ನೀಡಿದರೂ, ಪರಸರನ್ ಅವರು ಹಾಗೆ ಮಾಡಲಿಲ್ಲ.
ಬದಲಿಗೆ ನಿಂತು ವಾದ ಮಂಡಿಸುವುದು ನಮ್ಮ ಸಂಸ್ಕೃತಿ ಎಂದು ಹೇಳಿದ್ದಾರೆ.”ನನಗೆ ಯಾವುದೇ ಅಭ್ಯಂತರವಿಲ್ಲ. ಸುಪ್ರೀಂಕೋರ್ಟ್ ಪ್ರತೀದಿನ ವಿಚಾರಣೆ ಕೈಗೆತ್ತಿಕೊಳ್ಳುತ್ತಿರುವುದೇ ಖುಷಿಯ ವಿಚಾರ.

ನಾನು ಕೊನೆಯುಸಿರು ಎಳೆಯುವ ಮುನ್ನ, ಅಯೋಧ್ಯೆ ಕೇಸಿನ ತೀರ್ಪು ಹೊರಬಿದ್ದರೆ ಸಾಕು. ನಾನು ಪ್ರತೀದಿನ ವಾದ ಮಂಡಿಸಲು ಬರುವೆ” ಎನ್ನುವ ಮಾತನ್ನು ಹೇಳುತ್ತಾರೆ. ಆಗ, ಸಿಜಿಐ ಅವರಿಗೊಂದು ಆಫರ್ ನೀಡುತ್ತಾರೆ.ಸಿಜೆಐ ಗೊಗೊಯ್, “ನೀವು ಕುಳಿತುಕೊಂಡೇ ವಾದ ಮಂಡಿಸಲು ಬಯಸುತ್ತೀರಾ” ಎನ್ನುವ ಆಫರ್ ಅನ್ನು ನೀಡುತ್ತಾರೆ. ಆಗ, ಪರಶರನ್ ನಯವಾಗಿ ಸಿಜಿಐ ನೀಡಿದ ಆಫರ್ ಅನ್ನು ತಿರಸ್ಕಾರ ಮಾಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here