ಪ್ರವಾಹ ವೀಕ್ಷಣೆಗೆ ತೆರಳಿದ್ದ ಸಂಸದರೊಬ್ಬರು, ಅಲ್ಲಿ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ, ನೀರಿನಲ್ಲಿ ಬಿದ್ದಿರುವ ಘಟನೆಯೊಂದು ನಡೆದಿದ್ದು, ಆ ದೃಶ್ಯ ಇರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿವೆ‌. ವಿಡಿಯೋ ಹಾಗೂ ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಸಂಸದನಿಗೆ ಈ ಘಟನೆ ತೀವ್ರ ಮುಜುಗರ ವನ್ನು ಉಂಟು ಮಾಡಿದೆ. ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಕಳೆದು ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಹಲವೆಡೆ ಅಪಾರ ಹಾನಿಯುಂಟಾಗಿದ್ದು, ಜನರ ಪರಿಸ್ಥಿತಿ ಸಂಕಷ್ಟದಲ್ಲಿದೆ.

ಪ್ರವಾಹ ಪರಿಸ್ಥಿತಿಯಿಂದ ಜನರು ಕಂಗೆಟ್ಟಿದ್ದು, ಪಾಟಲೀಪುತ್ರ ಕ್ಷೇತ್ರದ ಬಿಜೆಪಿ ಸಂಸದರಾದ ರಾಮ್ ಕೃಪಾಲ್ ಯಾದವ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಯನ್ನು ಮಾಡಲು ತೆರಳಿದ್ದರು‌. ಈ ವೇಳೆಯಲ್ಲಿ ಸಂಸದರು ಸಮೀಕ್ಷೆ ನಡೆಸುತ್ತಾ , ಅದರ ಮಧ್ಯೆಯೇ ಪ್ರವಾಹದ ನೀರಿನ ಮಧ್ಯೆ ನಿಂತು ಫೋಟೋ ತೆಗೆಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿದ ಸಂಸದರು ಅಲ್ಲೇ ತಮ್ಮೊಂದಿಗೆ ಇದ್ದವರ ಜೊತೆ ನೀರಿನಲ್ಲಿ ಬಿದ್ದಿದ್ದಾರೆ.

ಟಯರ್ ಗಳಿಗೆ ಕಟ್ಟಲಾಗಿದ್ದ ಮರದ ಹಲಗೆಗಳ ಮೇಲೆ ನಿಂತು ಫೋಟೋಗೆ ಫೋಸ್ ಕೊಡಲು ಹೋದ ಸಂಸದರು, ಸಹಚರರೊಂದಿಗೆ ನೀರಿನಲ್ಲಿ ಬಿದ್ದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಅಭಿವೃದ್ಧಿ ನೀರಿನಲ್ಲಿ ಮುಳುಗಿತು, ಮುಳುಗುವುದಾದರೆ ಎಲ್ಲರನ್ನೂ ಮುಳುಗಿಸಿ ನಾನು ಮುಳುಗುತ್ತೇನೆ ಎಂದು ಸಾಂಕೇತಿಕವಾಗಿ ತೋರಿಸದ್ದಾರೆ ಎಂದು ಕಾಮೆಂಟ್ ನೀಡುತ್ತಾ ಸಂಸದರ ಬಗ್ಗೆ ಟೀಕೆ ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here