ಮಹಾ ಮಾರಿ, ತನ್ನ ಭೀಕರತೆಯನ್ನು ಜಗತ್ತಿನಾದ್ಯಂತ ಹರಡಿರುವ ಕೊರೊನಾ ಭಾರತದ ಮೇಲೂ ಕೂಡಾ ತನ್ನ ಕರಾಳ ಛಾಯೆ ಬೀರಿದ ಹಿನ್ನೆಲೆಯಲ್ಲಿ, ಸೋಂಕು ಹರಡುವುದನ್ನಿ ತಡೆಯಲು ಭಾರತ ಸರ್ಕಾರ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಿದೆ. ಏಪ್ರಿಲ್ 14 ರ ವರೆಗೂ ಕೂಡಾ ದೇಶ ಲಾಕ್ ಡೌನ್ ಆಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರನ್ನಿ ಮನೆಯಿಂದ ಹೊರ ಬರದಂತೆ ಆದೇಶ ನೀಡಿದೆ. ಇದರಿಂದಾಗಿ ಬಡವರು, ನಿರ್ಗತಿಕರು, ದಿನಗೂಲಿ ಕಾರ್ಮಿಕರು, ಗ್ರಾಮೀಣ ಭಾಗದ ಜನರು ಜೀವನ ನಡೆಸುವುದು ದುರ್ಬರವಾಗಿದ್ದು, ನಿತ್ಯ ಜೀವನದ ಅಗತ್ಯ ವಸ್ತುಗಳು ಕೂಡಾ ಸಿಗದೇ ಪರದಾಡುವಂತಾಗಿದೆ.

ಇಂತಹುದೇ ಸನ್ನಿವೇಶ ಕೇರಳದಲ್ಲಿ ಕೂಡಾ ಇದೆ. ಕೇರಳದ ಬುಡಕಟ್ಟು ಗ್ರಾಮವೊಂದರಲ್ಲಿ ಜನರು ಅಗತ್ಯ ವಸ್ತುಗಳು ಮತ್ತು ದಿನಸಿ ಇಲ್ಲದೆ ಪರದಾಡುತ್ತಿದ್ದರು. ಈ ವಿಷಯ ತಿಳಿದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ದಟ್ಟವಾದ ಕಾಡಿನ ನಡುವೆ ಸುಮಾರು ಮೂರು ಕಿಮೀ ದೂರ ತಮ್ಮವರ ಜೊತೆಗೆ ತಾನೂ ಕೂಡಾ ಅಗತ್ಯ ವಸ್ತುಗಳನ್ನು ಬೆನ್ನ ಮೇಲೆ ಹೊತ್ತು ಗ್ರಾಮವನ್ನು ತಲುಪಿದ್ದಾರೆ. ಪೆರಿಯಾರ್ ವನ್ಯಜೀವಿ ಧಾಮದ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಕ್ಕೆ ಅಗತ್ಯ ನೆರವು ನೀಡಲು ಜಿಲ್ಲಾಧಿಕಾರಿ ಖುದ್ದು ತಾವೇ ಮುತುವರ್ಜಿಯಿಂದ ಸಾಗಿದ್ದಾರೆ.

ಆಹಾರ, ದವಸ ಧಾನ್ಯ ಹಾಗೂ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದ ಬುಡಕಟ್ಟು ಜನರ ಸಂಕಷ್ಟದಲ್ಲಿ ನೆರವಾಗಲು ಕೊನ್ನಿ ಕ್ಷೇತ್ರದ ಶಾಸಕ ಕೆ ಯು ಜಾನಿಶ್ ಹಾಗೂ ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ ಬಿ ನೂಹ್ ಅವರು ಮೂರು ಕಿಲೋ ಮೀಟರ್ ಕಾಡಿನಲ್ಲಿ ನಡೆದುಕೊಂಡೇ ಹೋಗಿ ಆಹಾರ ಸಾಮಗ್ರಿಗಳನ್ನು ಅಲ್ಲಿನ 37 ಕುಟುಂಬಗಳಿಗೆ ತಲುಪಿಸಿ ಬಂದಿರುವ ಅವರ ಈ ಕಾರ್ಯವು ಜನರ ಮೆಚ್ಚುಗೆಯನ್ನು ಪಡೆದಿದೆ. ಕೇರಳದಲ್ಲಿ ಕೂಡಾ ಕೊರೊನಾ ರುದ್ರ ತಾಂಡವ ಮಾಡುತ್ತಿದ್ದು, 200 ಕ್ಕೂ ಅಧಿಕ ಜನರು ಸೋಂಕಿತರಾಗಿದ್ದು, ಅಲ್ಲಿನ ಸರ್ಕಾರ ಸೋಂಕು ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here