ನನ್ನ ಒಬ್ಬ ಮಗ ದೇಶಕ್ಕಾಗಿ ಹುತಾತ್ಮನಾಗಿರಬಹುದು ಆದರೆ, ನರಿಬುದ್ಧಿಯ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡಲು ನನ್ನ ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ….ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ ರತನ್​ ಠಾಕೂರ್​ ತಂದೆಯವರ ದಿಟ್ಟ ತನದ ಮಾತು. ಒಂದೆಡೆ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಉಗ್ರರ ಮೇಲಿನ ಪ್ರತಿಕಾರದ ಮಾತು ರತನ್​ ಠಾಕೂರ್​ ಅವರ ತಂದೆಯ ಪದಗಳಲ್ಲಿತ್ತು.ಬಿಹಾರದ ಭಾಗಲ್ಪುರದ ನಿವಾಸಿಯಾಗಿರುವ ರತನ್​ ಠಾಕೂರ್​ ಅವರ ತಂದೆ ಹುತಾತ್ಮನಾದ ಮಗನ ಕುರಿತು ಮಾತನಾಡಿ ತಾಯಿ ಭಾರತಕ್ಕಾಗಿ ನನ್ನ ಒಬ್ಬ ಮಗನನ್ನು ತ್ಯಾಗ ಮಾಡಿದ್ದೇನೆ.

ನನ್ನ ಮತ್ತೊಬ್ಬ ಮಗನನ್ನು ತಾಯಿ ಭಾರತದ ಪರವಾಗಿ ಹೋರಾಡಲು ಕಳುಹಿಸುತ್ತೇನೆ. ನನ್ನ ಮಗ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಬೇಕು ಎಂಬ ಧೀರತನದ ಮಾತುಗಳನ್ನಾಡಿದ್ದಾರೆ. ಭಾರತ ಮಾತೆಗೆ ನನ್ನೊಬ್ಬ ಮಗನನ್ನು ಅರ್ಪಣೆ ಮಾಡಿದ್ದೇನೆ. ಮತ್ತೊಬ್ಬ ಮಗನನ್ನೂ ಆಕೆ ಮಡಿಲಿಗೆ ಹಾಕುತ್ತೇನೆ. ಆದರೆ ಪಾಕ್​ ಉಗ್ರರ ನಿರ್ನಾಮವಾಗಬೇಕು ಎಂದು ಹುತಾತ್ಮ ಯೋಧ ರತನ್​ ಠಾಕೂರ್​ ತಂದೆ ಆಕ್ರೋಶದಿಂದ ನುಡಿದಿದ್ದಾರೆ.ನಿನ್ನೆ ಜೈಶ್​ ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ ಬಿಹಾರದ ಭಾಗಲ್​ಪುರದ ನಿವಾಸಿ, ಸಿಆರ್​ಪಿಎಫ್​ ಯೋಧ ರತನ್​ ಠಾಕೂರ್ ಸಹ ಹುತಾತ್ಮರಾಗಿದ್ದಾರೆ.

ಮನೆಯ ಅಧಾರಸ್ಥಂಭವಾಗಿದ್ದ ನೆಚ್ಚಿನ ಮಗನನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.ತನ್ನ ಮಗನ ಸಾವಿಗೆ ಕಣ್ಣೀರು ಸುರಿಸುತ್ತಲೇ ಮಾತನಾಡಿದ ರತನ್​ ತಂದೆ ನಿರಂಜನ್​ ಠಾಕೂರ್​, ಭಾರತದ ಮಾತೆಯ ಸೇವೆಗೆ ಕಳುಹಿಸಿದ್ದ ಮಗನನ್ನು ಇದೀಗ ಆಕೆಗೇ ಅರ್ಪಣೆ ಮಾಡಿದ್ದೇನೆ. ಮತ್ತೊಬ್ಬ ಮಗನನ್ನೂ ಸೇನೆಗೆ ಕಳುಹಿಸಿ, ಆಕೆಗೇ ಅರ್ಪಿಸುತ್ತೇನೆ. ಆದರೆ ಪಾಕ್​ನ ಯಾವ ಉಗ್ರರೂ ಉಳಿಯಬಾರದು. ಇಂತಹ ಭಯಂಕರ ದಾಳಿ ನಡೆಸಿದ ಪಾಕ್​ಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದ್ದಾರೆ. ಈ ತಂದೆಯ 

ಭಾವನಾತ್ಮಕ ವೀಡಿಯೋ ಇಲ್ಲಿದೆ ನೋಡಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here