ಇಂದಿನ ದಿನಗಳಲ್ಲಿ ನಾವು ಯಾವುದೇ ಕೆಲಸ ಮಾಡಿದರೂ ಅದಕ್ಕೆ ಪ್ರಚಾರದ ಅತ್ಯವಶ್ಯಕ ಇದೆ. ನಾವು ಮಾಡುವ ಕೆಲಸ ಅಥವಾ ಮಾಡ ಹೊರಟಿರುವ ಕೆಲಸಗಳು ಜನಸಾಮಾನ್ಯರಿಗೆ ತಲುಪಿಸುವುದು ದೊಡ್ಡ ಸಾಹಸದ ಕೆಲಸ. ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ನೂರಾರು ಸಿನಿಮಾಗಳು ಬರುತ್ತವೆ ಕೆಲವು ಗೆಲ್ಲುತ್ತವೆ. ಮತ್ತೆ ಕೆಲವು ಸೋಲುತ್ತವೆ. ಸೋಲಿಗೆ ಪ್ರಮುಖ ಕಾರಣ ಹುಡುಕ ಹೊರಟಾಗ ಸಾಮಾನ್ಯ ಜನರಿಂದ ಸಿಗುವ ಹೆಚ್ಚಿನ ಉತ್ತರ “ಸಿನಿಮಾ ಬಂದಿದ್ದೇ ಗೊತ್ತಿಲ್ಲ” ಎನ್ನುವುದು. ಹೌದು ಕೋಟ್ಯಾಂತರ ಖರ್ಚು ಮಾಡಿ ಸಿನಿಮಾ ನಿರ್ಮಾ ಮಾಡುವ ನಿರ್ಮಾಪಕರು ಪ್ರಚಾರದ ವಿಷಯ ಬಂದಾಗ ಎಡವಿಬಿಡುತ್ತಾರೆ. ಹೀಗಾಗಿ ಅದೆಷ್ಟೋ ಒಳ್ಳೆಯ ಸಿನಿಮಾಗಳು ಸಹ ಸೋತುಬಿಡುತ್ತವೆ.

ಇದೀಗ ಪ್ರಚಾರಕ್ಕಾಗಿ ಹಲವಾರು ಸಾಮಾಜಿಕ ಜಾಲತಾಣಗಳು ಮತ್ತು ಅನೇಕ ವಿವಿಧ ತಾಣಗಳು ಹುಟ್ಟಿವೆ. ಅಂತಹದ್ದೇ ಪ್ರಮುಖ ಮಾರ್ಕೆಟಿಂಗ್ ಪ್ರಮೋಷನ್ ಟೀಂ ಪವನ್ ಈವೆಂಟ್ಸ್ . ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಪವನ್ ಈವೆಂಟ್ ಸಂಸ್ಥೆ ಸಿನಿಮಾ ಪ್ರಮೋಷನ್ ಮಾಡುವ ಶೈಲಿಗೇ ಹಲವಾರು ನಿರ್ಮಾಪಕರು ಫಿದಾ ಆಗಿದ್ದಾರೆ.

ರಾಜ್ಯದ ಎಲ್ಲಾ ತಾಲ್ಲೂಕಿನ ಹಾಗೂ ಹೋಬಳಿಗಳ ಮಟ್ಟದಲ್ಲಿ ಇರುವ ಕಾಲೇಜುಗಳು ,ಸಿನಿಮಾ ಮಂದಿರಗಳು ,ಮತ್ತು ಜನಸಂಖ್ಯೆ ಹೆಚ್ಚಾಗಿರುವಂತಹ ಪ್ರದೇಶಗಳಲ್ಲಿ ಸಿನಿಮಾ ಬಗ್ಗೆ ಪ್ರಚಾರ ಮಾಡಿ ಗಮನ ಸೆಳೆಯುತ್ತಿರು ಪವನ್ ಈವೆಂಟ್ಸ್ . ಇತ್ತೀಚಿನ ದಿನಗಳಲ್ಲಿ ರಥಾವರ , ಅಯೋಗ್ಯ , ಟೈಸನ್ ಸಿನಿಮಾಗಳು ಸೇರಿದಂತೆ  ಹಲವಾರು ಸಿನಿಮಾಗಳ ಸಕ್ಸಸ್ ನಲ್ಲಿ ಪವನ್ ಈವೆಂಟ್ಸ್ ಅವರ ಪಾಲು ಇದೆ ಎನ್ನುವುದೇ ವಿಶೇಷ. ಕಡಿಮೆ ದರದಲ್ಲಿ ಕನ್ನಡ ಸಿನಿಮಾಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಸಂಸ್ಥೆಗೆ ಒಳ್ಳೆಯದಾಗಲಿ..ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂಬುದೇ ನಮ್ಮ ಆಶಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here