ನೆರೆಯ ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಜಾರಿಗೆ ತರಲು ಸಿಎಂ ಜಗನ್​​ ಮೋಹನ್​​ ರೆಡ್ಡಿ ಮುಂದಾಗಿದ್ದು, ಸರ್ಕಾರದ ಈ ನಿರ್ಧಾರದ ವಿರುದ್ಧ ನಟ ಹಾಗೂ ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪವನ್​​ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. ಅವರು ಮಾತನಾಡುತ್ತಾ ಪವನ್​​ ಕಲ್ಯಾಣ್​​ ಅವರೇ ನಿಮಗೆ ಮೂರು ಮದುವೆಯಾಗಿದೆ. ನಾಲ್ಕೈದು ಮಕ್ಕಳಿದ್ದಾರೆ. ಅವರು ಯಾವ ಮಾಧ್ಯಮದಲ್ಲಿ ಓದುತ್ತಿದ್ಧಾರೆ ಎಂದು ಒಮ್ಮೆ ಹೇಳಿ ಎನ್ನುವ ಮೂಲಕ ಪವನ್​​ ಕಲ್ಯಾಣ್ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದರು ಜಗನ್ ಮೋಹನ್ ರೆಡ್ಡಿ.

ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರು ಮುಖ್ಯ ಮಂತ್ರಿ ಅವರ ವಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ ಪವನ್ ಕಲ್ಯಾಣ್ ಅವರು. ನಾನು ಮೂರು ಮದುವೆ ಆಗಿದ್ದರಿಂದಲೇ ನೀವು ಜೈಲುವಾಸ ಅನುಭವಿಸಿದ್ದೀರಾ? ಎಂದು ಜಗನ್​​ ತಮ್ಮ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ವ್ಯಂಗ್ಯವಾಡಿದ್ದಾರೆ ಪವನ್ ಕಲ್ಯಾಣ್ ಅವರು. ನಟ ಕಮ್ ರಾಜಕಾರಣಿ ಪವನ್​​ ಕಲ್ಯಾಣ್​​ ಅವರು 1977 ರಲ್ಲಿ ನಂದಿನಿ ಎಂಬುವರನ್ನು ಮದುವೆಯಾಗಿದ್ದರು. ಆದರೆ 1999 ರಲ್ಲಿ ಪತ್ನಿಯಿಂದ ದೂರವಾದ ಮೇಲೆ ಅವರು 2009 ರಲ್ಲಿ ನಟಿ ರೇಣು ದೇಸಾಯಿ ಎಂಬುವವರನ್ನು ಮದುವೆಯಾಗಿದ್ದರು.

ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಅವರು 2012ರಲ್ಲಿ ರೇಣು ದೇಸಾಯಿ ಅವರಿಂದ ದೂರವಾದರು‌. ಅದಾದ ನಂತರ ಪವನ್ 2013 ರಲ್ಲಿ ಅನ್ನಾ ಲೆಜ್ನೆವಾ ಎಂಬುವವರನ್ನು ವಿವಾಹವಾದರು. ಇದೇ ಮೂರು ವಿವಾಹಗಳನ್ನು ಕುರಿತಾಗಿಯೇ ಜಗನ್ ಅವರು ತಮ್ಮ ಮಾತಿನಲ್ಲಿ ವ್ಯಂಗ್ಯವಾಡಿದ್ದರು‌. ಇದರಿಂದ ಸಿಟ್ಟಾದ ಪವನ್ ಕಲ್ಯಾಣ್ ಕೂಡಾ ಈಗ ಅದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here