ತೆಲುಗು ಚಿತ್ರರಂಗದಲ್ಲಿ ಇತ್ತೀಚಿಗೆ ಸಂಚಲನ ಸೃಷ್ಟಿಸುತ್ತಿರುವ ಹೆಸರು ಅಂದ್ರೆ ಅದು ಶ್ರೀರೆಡ್ಡಿ.ಕಾಸ್ಟಿಂಗ್ ಕೌಚ್ ಬಗ್ಗೆ ತನಗಾದ ಅನುಭವದ ಬಗ್ಗೆ ಮಾಧ್ಯಮದ ಮುಂದೆ ತನ್ನ ಅಳಲು ತೋಡಿಕೊಂಡಿದ್ದ ಶ್ರೀರೆಡ್ಡಿ ಇತ್ತೀಚಿಗೆ ಬೆತ್ತಲೆಯಾಗಿ ಪ್ರತಿಭಟನೆ ಕೂಡ ಮಾಡಿ ಗಮನ ಸೆಳೆದಿದ್ದರು.

ಖ್ಯಾತ ನಟರು ನನ್ನನ್ನು ಬಳಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ ಶ್ರೀರೆಡ್ಡಿ ಈಗ ಪವನ್ ಕಲ್ಯಾಣ್ ಅವರಿಗೆ ಮಾಧ್ಯಮಗಳ ಮುಂದೆ ಮಧ್ಯದ ಬೆರಳು ತೋರಿಸಿ ಬಾಯಿಗೆ ಬಂದಾಗೆ ಬೈದಿದ್ದಾರೆ.ತನ್ನ ನೆರವಿಗೆ ಪವನ್ ಕಲ್ಯಾಣ್ ಬರಬೇಕು ಎಂದು ಶ್ರೀರೆಡ್ಡಿ ಕೆಲವು ದಿನಗಳ ಹಿಂದೆ ಹೇಳಿದ್ದರು.

ಆದರೆ ಈ ವಿಷಯವನ್ನು ಮಾಧ್ಯಮಗಳು ಪವನ್ ಕಲ್ಯಾಣ್ ಅವರಿಗೆ ತಿಳಿಸಿ ಶ್ರೀರೆಡ್ಡಿ ಬಗ್ಗೆ ಅಭಿಪ್ರಾಯ ಕೇಳಿದ್ದಕ್ಕೆ ಶ್ರೀರೆಡ್ಡಿ ಅವರಿಗೆ ಅನ್ಯಾಯವಾಗಿದ್ದರೆ ಅವರು ಪೋಲೀಸ್ ಬಳಿ ನ್ಯಾಯ ಕೇಳಲಿ‌ ಅದು ಬಿಟ್ಟು ರಸ್ತೆಯಲ್ಲಿ ಪ್ರತಿಭಟಿಸಿದರೆ ಹೇಗೆ ಎಂದು ಪವನ್ ಕಲ್ಯಾಣ್ ಹೇಳಿದ್ದರು.

ಈ ವಿಷಯದಿಂದ ಕೆಂಡಾಮಂಡಲವಾದ ಶ್ರೀರೆಡ್ಡಿ ನಾನು ಆತನನ್ನು (ಪವನ್ ಕಲ್ಯಾಣ್) ಅಣ್ಣಾ ಅಂತ ಕರೆದಿದ್ದಕ್ಕೆ ನನಗೆ ನಾನೇ ಚಪ್ಪಲಿಯಲ್ಲಿ ಹೊಡೆದುಕೊಳ್ಳುತ್ತೇನೆ ಎಂದು ಹೇಳುತ್ತಾ ನಟಿ ಶ್ರೀ ರೆಡ್ಡಿ ಸ್ವತಃ ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಕೆನ್ನೆಗೆ ಬಾರಿಸಿಕೊಂಡರು.

ಯಾವೊಬ್ಬ ತೆಲುಗು ಹುಡುಗಿಯೂ ಪವನ್ ಕಲ್ಯಾಣ್​ನನ್ನು ಇನ್ಮುಂದೆ ಅಣ್ಣ ಅಂತ ಕರೀಬೇಡಿ. ಮೂವರನ್ನು ಮದುವೆಯಾಗಿರುವ ನಿನ್ನಿಂದ ಮಹಿಳಾ ಜಾತಿಗೇ ಅವಮಾನ. ನಿನ್ನಿಂದ ಪೊಲೀಸ್​ ಠಾಣೆ ಮೆಟ್ಟಿಲು

ಹತ್ತುವ ಸಲಹೆಯನ್ನ ನಾನು ಕೇಳಬೇಕಾ? ಇದೇನಾ ನಿನ್ನ ಪ್ರಜಾನಾಯಕನ ವರಸೆ? ನಾಚಿಕೆಯಾಗಬೇಕು ನಿನಗೆ ಎಂದು ಮುಂದುರಿಯುತ್ತಾ, ಮಾಧ್ಯಮಗಳೆದುರು ಮಾತನಾಡಿದ ಶ್ರೀರೆಡ್ಡಿ ಕೊನೆಯಲ್ಲಿ ‘ಪವನ್ ಕಲ್ಯಾಣ್ ಇದು ನಿನಗೆ’ ಎಂದು ತಮ್ಮ ಮಧ್ಯದ ಬೆರಳನ್ನು ತೋರಿಸುತ್ತಾ, ಸುದ್ದಿಗೋಷ್ಠಿಯಿಂದ ನಿರ್ಗಮಿಸಿದರು.ವೀಡಿಯೋ ನೋಡಿ

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here