ಫಿಲಿಪೈನ್ಸ್ ನಲ್ಲಿ ಕೊರೊನಾ ವೈರಸ್ ನಿಂದಾಗಿ 96 ಸಾವನ್ನಪ್ಪಿದ್ದರೆ, ಅಲ್ಲಿ 2,311 ಪಾಸಿಟಿವ್ ಕೇಸ್ ಗಳು ದೃಢಪಟ್ಟಿವೆ. ಕಳೆದ ಮೂರು ವಾರಗಳಲ್ಲಿ ಮೂರು ಪ್ರಕರಣಗಳನ್ನು ಹೊರತುಪಡಿಸಿದರೆ ಬೇರೆ ಹೊಸ ಪ್ರಕರಣಗಳು ಇಲ್ಲದ ಇಲ್ಲಿ, ಈಗ ಸೋಂಕಿನ ಸಂಖ್ಯೆಯು ದಿನದಿಂದ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಈ ಕುರಿತಾಗಿ ಫಿಲಿಪೈನ್ಸ್ ಅಧ್ಯಕ್ಷರಾದ ಡುಟೆರ್ಟೊ ಅವರು ಮಾತನಾಡುತ್ತಾ, ” ಈ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಆದ್ದರಿಂದ ಮತ್ತೊಮ್ಮೆ ನಾನು ನಿಮಗೆ ಸಮಸ್ಯೆಯ ಗಂಭೀರತೆಯನ್ನು ಹೇಳುತ್ತಿದ್ದೇನೆ ಮತ್ತು ನೀವೆಲ್ಲರೂ ಇದನ್ನು ಕೇಳಲೇಬೇಕು” ಎಂದು ಅಲ್ಲಿನ ಜನರಿಗೆ ಲಾಕ್ ಡೌನ್ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅವರು “ಪೊಲೀಸ್ ಮತ್ತು ಮಿಲಿಟರಿಗೆ ನನ್ನ ಆದೇಶ ಎನ್ನುತ್ತಾ, ನಿಮಗೆ ತೊಂದರೆ ಉಂಟು ಮಾಡುವ ಮತ್ತು ನಿಮ್ಮೊಡನೆ ಜಗಳಕ್ಕೆ ಇಳಿದು ನಿಮ್ಮ ಜೀವಗಳು ಅಪಾಯದಲ್ಲಿದ್ದರೆ, ಲಾಕ್ ಡೌನ್ ಮುರಿದವರನ್ನು ಶೂಟ್ ಮಾಡಿ” ಎಂದು ತಿಳಿಸಿದ್ದಾರೆ. ಫಿಲಿಪೈನ್ಸ್ ನಲ್ಲಿ ಎಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ನಂತರವೂ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಲೇ ಇರುವುದು ಮಾತ್ರವಲ್ಲದೇ ಕೆಲವೆಡೆ ಲಾಕ್ ಡೌನ್ ಪಾಲಿಸಲು ಕೂಡಾ ಜನರು ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಇಂತಹ ಒಂದು ಕಠಿಣ ನಿರ್ಧಾರವನ್ನು ಮಾಡಲಾಗಿದೆ.

ಹಲವು ಕಡೆ ಲಾಕ್ ಡೌನ್ ನ ಮಹತ್ವ ತಿಳಿಯದೆ ಜನರು ಬೀದಿಗೆ ಇಳಿಯುತ್ತಿರುವುದು ಕೂಡಾ ದೊಡ್ಡ ಸಮಸ್ಯೆ ಆಗಿ ಪರಿಣಿಮಿಸಿದೆ. ಅಲ್ಲದೆ ಫಿಲಿಪೈನ್ಸ್ ನ ಹಳ್ಳಿಯೊಂದರಲ್ಲಿ ಸರ್ಕಾರದ ಪರಿಹಾರ ವಿತರಣೆ ಮುಗಿದಿದೆ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿನ ಜನರು ಅದೇ ಸ್ಥಳದಲ್ಲಿ ಉಳಿದು, ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು ಎಂದು ಕೂಡಾ ಹೇಳಲಾಗಿದೆ. ಒಟ್ಟಾರೆ ಲಾಕ್ ಡೌನ್ ನಿರ್ವಹಣೆ ಸಮಸ್ಯೆ ಆಗಿದ್ದರಿಂದ ಅಲ್ಲಿನ ಅಧ್ಯಕ್ಷರು ಇಂತಹ ನಿರ್ಣಯ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here