ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಈಗಾಗಲೇ ಬಹಳಷ್ಟು ಜಾಗೃತಿಯನ್ನು ಮೂಡಿಸಲಾಗಿದೆ. ಆದರೂ ಕೂಡಾ ವಿದ್ಯಾವಂತರೇ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಬಗ್ಗೆ ಯೋಚಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಒಬ್ಬ ವ್ಯಕ್ತಿ ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಕೇರಳದ
ಪಾಲಕ್ಕಾಡ್ ಜಿಲ್ಲೆಯ ದೀಪಕ್ ವರ್ಮಾ ಅವರು ಇಂತಹುದೊಂದು ಜಾಗೃತಿ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. ಅವರು 24 ಗಂಟೆಗಳಲ್ಲಿ 100 ಕಿಲೋಮೀಟರ್‌ಗಿಂತ ಹೆಚ್ಚು ದೂರ ನಡೆದು, “ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವನ್ನು ಎಸೆಯಬೇಡಿ” ಎಂದು ಬರೆದ ಫಲಕವನ್ನು ಹಿಡಿದು ಪ್ರದರ್ಶನ ಮಾಡಿದ್ದಾರೆ.

ಅವರು ಆ ರೀತಿ ಫಲಕ ಹಿಡಿದದ್ದು ಸಾಮಾನ್ಯ, ಆದರೆ ಅಲ್ಲೊಂದು ಅಸಾಮಾನ್ಯವಾದುದು ಜನರ ಗಮನವನ್ನು ಅವರತ್ತ ಸೆಳೆಯುವಂತೆ ಮಾಡಿತ್ತು. ಅದೇನೆಂದರೆ ದೀಪಕ್ ವರ್ಮಾ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಉದ್ದದ ನಿಲುವಂಗಿಯನ್ನು ತಮ್ಮ ಉಡುಗೆಯಾಗಿ ಧರಿಸಿರುವುದು. ಹೌದು ಅವುಗಳು ರಸ್ತೆಗಳಲ್ಲಿ ಬಿದ್ದಿರುವ ಕಸದ ರಾಶಿಯಾಗಿ ಕಂಡುಬರುತ್ತವೆ: ಚಿಪ್ಸ್ ಪ್ಯಾಕೆಟ್, ಶಾಂಪೂ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಪಾತ್ರೆಗಳು, ಇತರ ಪ್ಲಾಸ್ಟಿಕ್ ವಸ್ತುಗಳಿಂದ ಮಾಡಿದ ಉಡುಗೆಯಂತೆ ಅದು ಇದ್ದು, ಜನರ ಗಮನ ಸಹಜವಾಗಿಯೇ ದೀಪಕ್ ಅವರ ಕಡೆ ಹೊರಳಿದೆ.

ಅಕ್ಟೋಬರ್ 2 , ನಿನ್ನೆ ಗಾಂಧೀ ಜಯಂತಿಯಂದು ಪರಿಸರವಾದಿ ಮತ್ತು ಪಾಲಕ್ಕಾಡ್ ಜಿಲ್ಲಾ ಶುಚಿತ್ವ ಮಿಷನ್‌ನ ಸಂಪನ್ಮೂಲ ವ್ಯಕ್ತಿಯಾಗಿರುವ ದೀಪಕ್ ಅವರು ಪಾಲಕ್ಕಾಡ್‌ನಿಂದ ಎರ್ನಾಕುಲಂ ಜಿಲ್ಲೆಗೆ 35 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ತಮ್ಮ ದೇಹಕ್ಕೆ ಕಟ್ಟಿಕೊಂಡು ಜಾಥಾ ನಡೆಸಿದ್ದಾರೆ. ಅವರೊಟ್ಟಿಗೆ ಇಬ್ಬರು ಸ್ವಯಂಸೇವಕರು ಇದ್ದರು. ಇಂತಹ ಒಂದು ಜಾಗೃತಿ ಜಾಥಾ , ಕ್ಲೀನ್ ಇಂಡಿಯಾ ಕ್ಯಾಂಪೇನ್ ಅನ್ನು ದೀಪಕ್ ಅವರು 2018 , ಫೆಬ್ರವರಿಯಲ್ಲಿ ಮೊದಲು ನಿರ್ವಹಿಸಿದ್ದರು. ಆಗ ಅವರು 24 ಗಂಟೆಯಲ್ಲಿ 4000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿಸಿದ್ದರು. ಇನ್ನೊಂದು ಪ್ರಯತ್ನದಲ್ಲಿ 16 ಕಿಮೀ ದೂರದಲ್ಲಿ ಒಂದು ಲಕ್ಷ ಚಾಕೊಲೇಟ್ ಪೇಪರ್ ಸಂಗ್ರಹಿಸಿ ವಿಲೇವಾರಿ ಮಾಡಿಸಿದ್ದರು. ಈ ಬಾರಿ ಕೂಡಾ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here