ಮಥುರಾದ ಕೈಂಟ್ ಸ್ಟೇಷನ್ ನಲ್ಲಿ ಒಬ್ಬ ಪೋಲಿಸ್ ಅಧಿಕಾರಿ ಮಾಡಿದ ಕಾರ್ಯವನ್ನು ನೋಡಿದ ಮೇಲೆ ಈಗ ಪ್ರತಿಯೊಬ್ಬರು ಪೋಲಿಸರಿಗೆ ಸೆಲ್ಯೂಟ್ ಮಾಡಿ ಗೌರವ ‌ನೀಡುವಂತಾಗಿದೆ. ಆ ಪೋಲಿಸ್ ಅಧಿಕಾರಿ ಮಾಡಿರುವ ಮಾನವೀಯ ಕಾರ್ಯ ಈಗ ಎಲ್ಲರಿಂದಲೂ ಮೆಚ್ಚುಗೆ ಪಡೆದಿರುವುದು ಮಾತ್ರವಲ್ಲದೆ ಅಪಾರ ಗೌರವಕ್ಕೆ ಪಾತ್ರವಾಗಿದ್ದು, ಪೋಲಿಸ್ ಎಂದರೆ ಜನ ಗೌರವದಿಂದ ನೋಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಈ ಪೋಲಿಸ್ ಅಧಿಕಾರಿ. ಅವರ ತಮ್ಮ ಕರ್ತವ್ಯದ ಜೊತೆಜೊತೆಗೆ ಮಾನವೀಯತೆಯನ್ನು ಸಹಾ ಮರೆದಿದ್ದಾರೆ. ಹಾಗಾದರೆ ಆ ರೋಚಕ ಮಾಹಿತಿ ಏನೆಂಬುದರ ಸಂಪೂರ್ಣ ವಿವರಣೆ ಇಲ್ಲಿದೆ.

ಶುಕ್ರವಾರದ ದಿನ ಸೋನುಕುಮಾರ್ ಎಂಬ ಪೋಲಿಸ್ ಅಧಿಕಾರಿಯು ಪ್ಯಾಸೆಂಜರ್ ರೈಲಿನಲ್ಲಿ ಬಂದು, ತಮ್ಮ ಯಾವುದೋ ಕೇಸಿನ ವಿಚಾರವಾಗಿ ಛಾವ್ಣಿ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಪ್ಲಾಟ್ ಫಾರಂ ನಲ್ಲಿ ದಯಾಲ್ಪುರದ ನಿವಾಸಿ ಛಾತ್ರಪಾಲ ಎಂಬುವವರ ಪತ್ನಿ ಭಾವನಾ ಪ್ರಸವ ವೇದನೆಯಿಂದ ನರಳುತ್ತಿರುವುದನ್ನು ಕಂಡು, ತಕ್ಷಣವೇ ಆ್ಯಂಬುಲೆನ್ಸ್ ಗೆ ಕರೆಮಾಡಿದ್ದಾರೆ. ಆದರೆ ಅದು ಬರಲು ತಡವಾಗಿದ್ದರಿಂದ, ಪೋಲಿಸ್ ಅಧಿಕಾರಿ ತಡಮಾಡದೆ ಆಕೆಯನ್ನು ತಾಯಿ ಮಗುವನ್ನು ಎತ್ತಿಕೊಳ್ಳುವಂತೆ, ತಮ್ಮ ಭುಜಬಲದಿಂದ ಎತ್ತಿಕೊಂಡೇ ಸ್ಟೇಷನ್ ನಿಂದ ಹೊರಬಂದು, ಆಟೋ ರಿಕ್ಷಾ ದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ.

ಆಸ್ಪತ್ರೆಗೆ ತಲುಪಿದ ನಂತರ ಅಲ್ಲಿ ವೈದ್ಯರು ಆಕೆಯನ್ನು ಮಹಿಳಾ ಆಸ್ಪತ್ರೆಗೆ ಸೇರಿಸಿ ಎಂದು ಸಲಹೆ ನೀಡಿದ್ದು, ಮಹಿಳಾ ಆಸ್ಪತ್ರೆ ಅಲ್ಲಿಂದ ಸುಮಾರು 100 ಮೀಟರ್ ದೂರವಿದ್ದುದ್ದರಿಂದ ಮತ್ತೆ ಸೋನುಕುಮಾರ್ ಆಕೆಯನ್ನು ಹೊತ್ತುಕೊಂಡು ಮಹಿಳಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆಕೆಗೆ ಪ್ರಸವವಾಗಿದ್ದು, ಆಕೆ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಆಕೆ ಹಾಗೂ ಮಗು ಎರಡೂ ಆರೋಗ್ಯದಿಂದ ಇದ್ದಾರೆ. ಒಟ್ಟಾರೆ ಈ ಪೋಲಿಸ್ ಅಧಿಕಾರಿಯ ಸಮಯಪ್ರಜ್ಞೆ ಹಾಗೂ ಮಾನವೀಯತೆಯಿಂದಾಗಿ ಎರಡು ಜೀವಗಳು ಉಳಿದಿವೆ ಎಂಬುದು ನಿಜವಾಗಿದೆ. ಇಂತಹ ಅಧಿಕಾರಿಗಳು ನಿಜವಾಗಿಯೂ ಗೌರವಕ್ಕೆ ಅರ್ಹರು ಹಾಗೂ ಇತರರಿಗೆ ಮಾದರಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here