ರಸ್ತೆ ಬದಿಯ ನಿವಾಸಿ ವೃದ್ಧೆಯೊಬ್ಬರ ಸಂಕಟಕ್ಕೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರ ಹೃದಯ ಮಿಡಿದಿದೆ. ಅ ವೃದ್ಧೆಗೆ ಹೊಸ ಬಟ್ಟೆ, ಒಂದು ಜತೆ ಚಪ್ಪಲಿ ಕೊಡಿಸಿರುವ ಅವರು, ಇದೀಗ ಸಾರ್ವಜನಿಕರ ದೃಷ್ಟಿಯಲ್ಲಿ ಹೀರೋಯಿನ್​ ಆಗಿದ್ದಾರೆ. ಅವರ ಈ ಔದಾರ್ಯದ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಶೇರ್​ ಆಗಿದ್ದು, ಭಾರಿ ವೈರಲ್​ ಆಗಿದೆ. ಮಧ್ಯಪ್ರದೇಶದ ದಮೋಹ್​ ಜಿಲ್ಲೆಯ ಮ್ಯಾಗ್ರಾನ್​ ಪೊಲೀಸ್​ ಠಾಣೆಯ ಠಾಣಾಧಿಕಾರಿಯಾಗಿರುವ ಶ್ರದ್ಧಾ ಶುಕ್ಲಾ ಹೀರೋಯಿನ್​ ಆಗಿರುವ ಅಧಿಕಾರಿ. ಇವರು ಪ್ರತಿದಿನ ಠಾಣೆಗೆ ಹೋಗಿಬರುವ ಹಾದಿಯಲ್ಲಿ ಒಬ್ಬ ವೃದ್ಧೆ ಹರಕಲು ಬಟ್ಟೆಯಲ್ಲಿ ಸದಾ ಮುದುಡಿಕೊಂಡು ಕುಳಿತುಕೊಂಡಿರುವುದನ್ನು ಗಮನಿಸುತ್ತಿದ್ದರು.

ಆಕೆಯ ಸಂಕಷ್ಟ ನೋಡಿ ಇವರ ಮನಮಿಡಿಯಿತು. ಅದೊಂದು ದಿನ ಅಂಗಡಿಗೆ ಹೋದವರೇ ಹೊಸ ಬಟ್ಟೆ ಹಾಗೂ ಒಂದು ಜತೆ ಚಪ್ಪಲಿ ಖರೀದಿಸಿ, ಆ ವೃದ್ಧೆಗೆ ಕೊಟ್ಟರು. ಅವನ್ನು ಧರಿಸಿದ ಆ ವೃದ್ಧೆ ಕಣ್ಣೀರು ಹಾಕುತ್ತಾ ಶ್ರದ್ಧಾ ಶುಕ್ಲಾ ಅವರನ್ನು ಅಪ್ಪಿಕೊಂಡರು. ಈ ದೃಶ್ಯವನ್ನು ಯಾರೋ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು.ಈ ವಿಡಿಯೋ ಗಮನಕ್ಕೆ ಬಂದ ತಕ್ಷಣವೇ ಅದನ್ನು ರಿಟ್ವೀಟ್​ ಮಾಡಿರುವ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಚೌಹಾಣ್​, ಶ್ರದ್ಧಾ ಶುಕ್ಲಾ ಅವರಂಥ

ಪುತ್ರಿಯರ ಬಗ್ಗೆ ಇಡೀ ಮಧ್ಯಪ್ರದೇಶವೇ ಹೆಮ್ಮೆಪಡುತ್ತದೆ ಎಂದು ಮೆಸೇಜ್​ ಮಾಡಿದ್ದಾರೆ. ಇದಕ್ಕೂ ಕೆಲವೇ ಗಂಟೆಗಳ ಮೊದಲು ಕರ್ನಾಟಕದಲ್ಲಿ ಸಂಚಾರಿ ಪೊಲೀಸರೊಬ್ಬರು ರಸ್ತೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಈ ದೃಶ್ಯ ಕೂಡ ಸಾರ್ವಜನಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here