ಕನ್ನಡ ಚಿತ್ರರಂಗದಲ್ಲಿ ಟಗರು ಚಿತ್ರದ ನಂತರ ಧನಂಜಯ್ ಅವರ ಲಕ್ ಬದಲಾಗಿದೆ ಎನ್ನಬಹುದು. ಟಗರು ಚಿತ್ರದ ನಂತರ ಡಾಲಿ ಎಂಬ ಹೆಸರಿನಿಂದಲೇ ಪ್ರಖ್ಯಾತರಾದ ಧನಂಜಯ್ ಅಭಿನಯದ, ಸುಕ್ಕಾ ಸೂರಿ ನಿರ್ದೇಶನದ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರವು ಶುಕ್ರವಾರ ವಿಶ್ವದ್ಯಾಂತ ಅದ್ದೂರಿಯಾಗಿ ತೆರೆಗೆ ಬಂದಿದೆ. ಬಾರಿ ನಿರೀಕ್ಷೆ ಹುಟ್ಟಿಸಿದ್ದ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರಕ್ಕೆ ಮೊದಲ ದಿನವೇ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಸಹ ಸೂರಿ ಅವರ ನಿರ್ದೇಶನದ ಶೈಲಿಯ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ.

ಈ ಚಿತ್ರ ನೋಡಿದ ಪ್ರತಿಯೊಬ್ಬರ ಬಾಯಲ್ಲೂ ಸಹ ಡಾಲಿ ಧನಂಜಯ್ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.”ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ ಪ್ರಮುಖ ಆಕರ್ಷಣೆ ಅಂದ್ರೆ ಚಿತ್ರದ ನಿರೂಪಣಾ ಶೈಲಿ. ನಮ್ಮ ಕಣ್ಣ ಮುಂದೆ ನಡೆಯುವ ಸನ್ನಿವೇಶಗಳಿಗೆ ಸೂರಿ ಮತ್ತು ಧನಂಜಯ್ ಜೀವ ತುಂಬಿದ್ದಾರೆ. ತೆರೆಕಂಡ ಮೊದಲ ದಿನವೇ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರಕ್ಕೆ ಭರ್ಜರಿ  ರೆಸ್ಪಾನ್ಸ್ ಜೊತೆಗೆ ಉತ್ತಮ ಕಲೆಕ್ಷನ್ ಸಹ ದೊರಕಿದೆ.

ಮೊದಲ  ದಿನವೇ  “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರವು ಬರೋಬ್ಬರಿ 2.53 ಕೋಟಿ ಗಳಿಸಿದೆ. ಈ ಮೂಲಕ ಧನಂಜಯ ಅಭಿನಯದ ಈ ವರೆಗಿನ ಚಿತ್ರಗಳಲ್ಲಿ “ಪಾಪ್ ಕಾರ್ನ್ ಮಂಕಿ ಟೈಗರ್”ಚಿತ್ರದ ಗಳಿಕೆ ಹೊಸ ದಾಖಲೆ ಬರೆದಿದೆ.ಇಂದು ಸಹ ಚಿತ್ರಮಂದಿರಗಳಲ್ಲಿ “ಪಾಪ್ ಕಾರ್ನ್ ಮಂಕಿ ಟೈಗರ್”ಚಿತ್ರದ ಗಳಿಕೆ ಜೋರಾಗಿಯೇ ಇದೆ. ಧನಂಜಯ್ ಅವರು “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ ಮೂಲಕ ಒಂದು ದೊಡ್ಡ ಸಕ್ಸಸ್ ಪಡೆದು ಮತ್ತೊಮ್ಮೆ ಕನ್ನಡ ಸಿನಿ ಪ್ರಿಯರ ಹೃದಯ ಗೆದ್ದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here