ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾಗಿ ನಿರ್ದೇಶನ ಮಾಡಿ ಯಶಸ್ಸು ಕಂಡಿರುವ ನಿರ್ದೇಶಕರ ಪೈಕಿ ಸುಕ್ಕ ಸೂರಿ ಪ್ರಮುಖರು. ಮಾಸ್ ಸಿನಿಮಾಗಳಿಗೆ ಸೂರಿ ಎತ್ತಿದ ಕೈ . ದುನಿಯಾ ಚಿತ್ರದಿಂದ ಹಿಡಿದು ಟಗರು ಚಿತ್ರದ ತನಕ ಸೂರಿ ನಿರ್ದೇಶನದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿವೆ. ಟಗರು ಚಿತ್ರದ ನಂತರ ಧನಂಜಯ ಅವರ ಲುಕ್ ಮತ್ತು ಲಕ್ ಎರಡೂ ಬದಲಾಗಿತ್ತು. ಇದೀಗ ಮತ್ತೆ ಸೂರಿ ಮತ್ತು ಧನಂಜಯ್ ಒಂದಾಗಿದ್ದಾರೆ. ಸುಕ್ಕಾ ಸೂರಿ ಮತ್ತು ಡಾಲಿ ಧನಂಜಯ್ ಒಂದಾಗಿರುವ ಬಹುನಿರೀಕ್ಷೆಯ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರವು ಇದೇ ತಿಂಗಳ 21 ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ ಟೀಸರ್ ಸಾಕಷ್ಟು ಸುದ್ದಿಯಾಗಿತ್ತು. ಧನಂಜಯ್ ಅವರು ವಿಭಿನ್ನ ಗೆಟಪ್ ನಲ್ಲಿ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡಾಲಿ ಧನಂಜಯ್ ಜೊತೆಗೆ,ನಾಯಕಿಯಾಗಿ ನಿವೇದಿತಾ, ರೇಖಾ, ಕಾಕ್ರೋಜ್ ಖ್ಯಾತಿಯ ಸುಧಿ ಸೇರಿ ಹಲವಾರು ಪ್ರಮುಖ ಕಲಾವಿದರು “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದಲ್ಲಿ ಅಭಿನಯಿಸಿದ್ದಾರೆ.ಟಗರು ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ ಅವರೇ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.’ಟಗರು’ ಸಿನಿಮಾದಲ್ಲಿ ಡಾಲಿ ಎಂಬ ಪಾತ್ರ ಮಾಡಿದ ಬಳಿಕ ನಟ ಧನಂಜಯ ಅವರ ಮಾರುಕಟ್ಟೆ ದೊಡ್ಡದಾಗಿದೆ. ಈಗ ಅವರು ಮತ್ತೆ ಸೂರಿ ನಿರ್ದೇಶನದಡಿ ಮೂಡಿಬಂದಿರುವ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದಲ್ಲಿ ನಟಿಸಿರುವುದು ಪಾಪ್ ಕಾರ್ನ್ ಮಂಕಿ ಟೈಗರ್ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡುವಂತೆ ಮಾಡಿದೆ.

ಇದೆಲ್ಲದರ ಎಫೆಕ್ಟ್ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದ ವಿತರಣಾ ಹಕ್ಕುಗಳನ್ನು ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನ ಅವರು’ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ವಿತರಣೆ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಕಂಡುಕೊಂಡಿದ್ದಾರೆ. ಅದಷ್ಟೇ ಅಲ್ಲದೆ ವಿದೇಶಗಳಲ್ಲೂ ಪಾಪ್ ಕಾರ್ನ್ ಮಂಕಿ ಟೈಗರ್  ಬಿಡುಗಡೆಗೆ ಹೆಚ್ಚಿನ ಬೇಡಿಕೆ ಬಂದಿದ್ದು ಆಸ್ಟ್ರೇಲಿಯಾ,  ಅಮೆರಿಕ, ಸೇರಿದಂತೆ ಹಲವೆಡೆ ಪಾಪ್ಕಾರ್ನ್ ಚಿತ್ರ ಏಕಕಾಲದಲ್ಲೇ ತೆರೆಕಾಣಲಿದೆ

ಇನ್ನು  ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಕಿರುತೆರೆಯಲ್ಲೂ ಈ ಚಿತ್ರವನ್ನು ಪ್ರದರ್ಶಿಸಲು ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿಗಳು ನಾಮುಂದು ತಾಮುಂದು ಎಂದು ಪ್ರಸಾರ ಹಕ್ಕುಗಳನ್ನು ಖರೀದಿಸಲು ಮುಗಿಬಿದ್ದಿವೆಯಂತೆ. ಕನ್ನಡದ ಎಲ್ಲ ಮುಂಚೂಣಿ ಚಾನಲ್‌ಗಳು ‘ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾವನ್ನು ಖರೀದಿ ಮಾಡಲು ಉತ್ಸುಕತೆ ತೋರಿಸಿವೆ ಎನ್ನಲಾಗುತ್ತಿದೆ.

ಈ ಪೈಕಿ ಒಂದು ವಾಹಿನಿಯು ಬಹು ದೊಡ್ಡ ಮೊತ್ತಕ್ಕೆ ಚಿತ್ರದ ಪ್ರಸಾರ ಹಕ್ಕುಗಳನ್ನು ಖರೀದಿ ಮಾಡೋದಕ್ಕೆ ನಿರ್ಧರಿಸಿದೆಯಂತೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.ಡಿಜಿಟಲ್ ಮಾರುಕಟ್ಟೆಯಲ್ಲೂ ನಡೆದಿದೆ ಮಾತುಕತೆ ಟಿವಿ ಮತ್ತು ಚಿತ್ರಮಂದಿರಗಳ ರೀತಿಯೇ ಡಿಜಿಟಲ್‌ ಮಾರುಕಟ್ಟೆಯಲ್ಲೂ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಹವಾ ಎಬ್ಬಿಸುವ ಲಕ್ಷಣ ತೋರಿಸಿದೆ. ಅಮೇಜಾನ್‌ನಿಂದ ಬಂಪರ್ ಆಫರ್ ಬಂದಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಡಿಜಿಟಲ್ ಪ್ರಸಾರ ಹಕ್ಕುಗಳ ವ್ಯವಹಾರ ಕೂಡ ಅಂತಿಮವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here