ಚಿತ್ರ :- ಪಾಪ್ ಕಾರ್ನ್ ಮಂಕಿ ಟೈಗರ್ 

ತಾರಾಗಣ :- ಧನಂಜಯ್, ನಿವೇದಿತಾ, ಸ್ಪರ್ಶ ರೇಖಾ, ಅಮೃತ ಅಯ್ಯರ್, ಸಪ್ತಮಿ ಗೌಡ, ಕಾಕ್ರೋಜ್ ಸುಧಿ..

ಸಂಗೀತ :- ಚರಣ್ ರಾಜ್ 

ಛಾಯಾಗ್ರಾಹಣ :- ಶೇಖರ್ 

ನಿರ್ಮಾಪಕರು :- ಸುಧೀರ್ 

ಕಥೆ ಚಿತ್ರಕಥೆ ನಿರ್ದೇಶನ :- ಸೂರಿ. 

ಸುದ್ದಿ ಮನೆ ರೇಟಿಂಗ್ :- 4/5

ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಖ್ಯಾತ ನಿರ್ದೇಶಕ ಸೂರಿ ನಿರ್ದೇಶನದ, ಡಾಲಿ ಧನಂಜಯ ಅಭಿನಯದ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ. ವಿಚಿತ್ರವಾದ ಟೈಟಲ್ ನಿಂದಲೇ ಬಾರಿ ಕುತೂಹಲ ಮೂಡಿಸಿದ್ದ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ ನಿರೂಪಣೆ ಶೈಲಿ ಕೂಡ ವಿಭಿನ್ನವಾಗಿದೆ. ಜೈಲಿನಿಂದ ಹೊರಬಂದ ದೇವಿಕಾ ಕಳೆದು ಹೋದ ತನ್ನ

ಮಗುವನ್ನು ಹುಡುಕುವುದು ಒಂದು ಕಡೆಯಾದರೆ, ಪ್ರೇಯಸಿ ಕಳೆದುಕೊಂಡ ಮಂಕಿ ಸೀನ ಮತ್ತೊಂದು ಕಡೆ.. ಜೊತೆಯಲ್ಲಿ ಸಾಗುವ ಚಿತ್ರ ವಿಚಿತ್ರ ಪಾತ್ರಗಳು ಒಂದು ಕಡೆ ಪ್ರೇಕ್ಷಕರಿಗೆ ಮನರಂಜನೆ ಕೊಡುತ್ತ ಸಾಗುತ್ತದೆ. ಶುಗರ್, ಹಾವ್ ರಾಣಿ, ಕೊಥ್ಮುರಿ, ವಾಷ್ ರೂಮ್ ಹೀಗೆ ಒಂದೊಂದು ಪಾತ್ರಕ್ಕೂ ಸೂರಿ ಇಟ್ಟಿರುವ ಹೆಸರುಗಳು ಮಜಾ ಕೊಡುತ್ತವೆ.ಚಿತ್ರದ ಆರಂಭದಿಂದ ಹಿಡಿದು ಕೊನೆವರೆಗೂ ಸೂರಿ ತಮ್ಮ ಎಂದಿನ ಶೈಲಿಯ ಪಕ್ಕ ಲೋಕಲ್ ಸುಕ್ಕಾ ಸ್ಟೈಲ್ ನಿರೂಪಣೆ “ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ ಪ್ರಮುಖ ಆಕರ್ಷಣೆ. ಇನ್ನು ಧನಂಜಯ್ ವಿಷಯಕ್ಕೆ

ಬಂದರೆ ತಲೆ ಬೋಳಿಸಿಕೊಂಡು, ಕುಂಡಿ ಕೆರ್ಕೊಂಡು, ತಿಪ್ಪೆ ಗುಂಡಿಯನ್ನು ಲೆಕ್ಕಿಸದೆ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೆಲವೊಂದು ದೃಶ್ಯದಲ್ಲಿ ಈ ಪಾತ್ರಕ್ಕೆ ಧನಂಜಯ್ ಹೊರತುಪಡಿಸಿ ಬೇರೆಯವರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಪ್ರಾಮಾಣಿಕವಾಗಿ ಧನಂಜಯ್ ಸೂರಿ ಕನಸಿಗೆ ಜೀವ ತುಂಬಿದ್ದಾರೆ. “ಪಾಪ್ ಕಾರ್ನ್ ಮಂಕಿ ಟೈಗರ್”ಚಿತ್ರದ ಮತ್ತೊಂದು ಆಕರ್ಷಣೆ ಚಿತ್ರದ ಬ್ಯಾಕ್ ರೌಂಡ್ ಮ್ಯೂಸಿಕ್. ಚರಣ್ ರಾಜ್ ಹಿನ್ನೆಲೆ ಸಂಗೀತ ಸೊಗಸಾಗಿದೆ. ಚಿತ್ರದ ಛಾಯಾಗ್ರಾಹಕರಾಗಿ ಶೇಖರ್ ಅವರದ್ದು ಉತ್ತಮ ಕೆಲಸ.

ಇನ್ನು ಚಿತ್ರದಲ್ಲಿ ನಿವೇದಿತಾ, ಸ್ಪರ್ಶ ರೇಖಾ, ಅಮೃತ ಅಯ್ಯರ್, ಸಪ್ತಮಿ ಗೌಡ, ಕಾಕ್ರೋಜ್ ಸುಧಿ ಸೇರಿ ಹಲವಾರು ಕಲಾವಿದರ ಅಭಿನಯ ಮನಮುಟ್ಟುತ್ತದೆ. ಕಮರ್ಷಿಯಲ್ ಮಾಸ್ ಮನರಂಜನೆ ಬಯಸುವ ಸಿನಿ ಪ್ರಿಯರಿಗೆ ಸೂರಿ ಸಿನಿಮಾಗಳು ಮೊದಲ ಆಯ್ಕೆ. “ಪಾಪ್ ಕಾರ್ನ್ ಮಂಕಿ ಟೈಗರ್”ಸಹ ಸೂರಿ ಸ್ಟೈಲ್ ನ ಮನರಂಜನಾತ್ಮಕ ಸಿನಿಮಾ ಆಗಿದೆ.ಆರಾಮಾಗಿ ಕುಳಿತು ಎಂಜಾಯ್ ಮಾಡಲು ತಪ್ಪದೇ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೋಡಿ. ಸುದ್ದಿ ಮನೆ 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here