ನಟಿ ರಮ್ಯಕೃಷ್ಣ ಇಂದು ದಕ್ಷಿಣ ಭಾರತದ ಜನಪ್ರಿಯ ನಟಿ. ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ತಾರೆಯಾಗಿ ಮೆರದು, ಪಂಚ ಭಾಷಾ‌‌ ನಟಿಯಾಗಿ,‌ ನಟನೆಯಲ್ಲಿ ತನ್ನ ಪ್ರತಿಭೆಯನ್ನು, ಗ್ಲಾಮರ್ ನಲ್ಲಿ ಬಾಲಿವುಡ್ ನಾಯಕಿಯರನ್ನೇ ಸಡ್ಡು ಹೊಡೆದು, ದಕ್ಷಿಣದ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಗೆ ಅಲ್ಲಸೆ ಬಾಲಿವುಡ್ ನಲ್ಲಿ ಕೂಡಾ ಮಿಂಚಿದ ನಾಯಕಿ. ರಜನೀಕಾಂತ್ ಜೊತೆ ಪಡೆಯಪ್ಪ ಸಿನಿಮಾದ ನೀಲಾಂಬರಿ, ಕನ್ನಡದಲ್ಲಿ ನೀಲಾಂಬರಿ, ಬಾಹುಬಲಿಯ ಶಿವಗಾಮಿ, ಅಮ್ಮೋರು ಸಿನಿಮಾದ ಶಕ್ತಿ ದೇವತೆ ಹೀಗೆ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಯಶಸ್ವಿ ನಟಿ.

ಆದರೆ ಇದೇ ರಮ್ಯಕೃಷ್ಣ ಅವರು ಸಿನಿಮಾ ರಂಗಕ್ಕೆ ಪರಿಚಯವಾದಾಗ ಅವರಿಗೆ ಟಾಲಿವುಡ್ ನಲ್ಲಿ ಐರನ್ ಲೆಗ್ ಎಂಬ ಟ್ಯಾಗ್ ಇತ್ತು. ಅಂದರೆ ರಮ್ಯಕೃಷ್ಣ ನಾಯಕಿಯಾಗುವ ಸಿನಿಮಾಗಳು ಫ್ಲಾಪ್ ಎನ್ನುವ ನಂಬಿಕೆ ಹರಡಿತ್ತು. ಅಲ್ಲದೆ ರಮ್ಯಕೃಷ್ಣ ಅವರ ಆರಂಭದ ಸಿನಿಮಾಗಳು ಸೋತಿದ್ದರಿಂದ ಆಕೆಗೆ ಭವಿಷ್ಯ ಇಲ್ಲ ಎಂದು ಆಡಿಕೊಂಡರು. ಆಗ ಟಾಲಿವುಡ್ ಸ್ಟಾರ್ ನಿರ್ದೇಶಕ ಕೆ.ರಾಘವೇಂದ್ರ ರಾವ್ ಅವರು ರಮ್ಯಕೃಷ್ಣ ಅವರ ತಂದೆ ತಾಯಿ ಮಗಳ ಬಗ್ಗೆ ತಮ್ಮ ವೇದನೆಯನ್ನು ಹೇಳಿಕೊಂಡಾಗ, ರಾಘವೇಂದ್ರ ರಾವ್ ಅವರು ತಮ್ಮ ಅಲ್ಲುಡುಗಾರು ಸಿನಿಮಾದಲ್ಲಿ ನಾಯಕಿ ಪಾತ್ರ ಕೊಟ್ಟರು. ಆ ಸಿನಿಮಾದ ಹಾಡೊಂದರಿಂದ ರಮ್ಯಕೃಷ್ಣ ಕ್ರೇಜ್ ಹುಟ್ಟಿತು.

ಅದಾದ ನಂತರ ರಾಘವೇಂದ್ರ ರಾವ್ ಅವರು ತಮ್ಮ ಅಲ್ಲರಿ ಮೊಗುಡು ಸಿನಿಮಾದಲ್ಲೂ ನಾಯಕಿಯ ಅವಕಾಶ ನೀಡಿದರು. ಆ ಸಿನಿಮಾ ಶತದಿನೋತ್ಸವ ಆಚರಿಸಿದಾಗ, ನಡೆದ ಬೃಹತ್ ಸಮಾರಂಭದಲ್ಲಿ ರಮ್ಯಕೃಷ್ಣ ವೇದಿಕೆಯ ಮೇಲೆ ಅತ್ತು ಬಿಟ್ಟರು. ಅದಾದ ನಂತರ ರಮ್ಯಕೃಷ್ಣ ಅವರು ಬೆಳೆದ ರೀತಿ ಅಷ್ಟಿಷ್ಟಲ್ಲ. ಅವರು ನಿರ್ವಹಿಸದ ಪಾತ್ರಗಳೇ ಇಲ್ಲ ಎನ್ನುವಂತೆ ಬೆಳೆದರು. ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಬೇಡಿಕೆಯ ನಟಿಯಾಗಿ ಬೆಳೆದರು. ಐರನ್ ಲೆಗ್ ಎಂದು ಕರೆದವರೇ ಮುಂದೆ ರಮ್ಯಕೃಷ್ಣ ಅವರ ಮುಂದೆ ನಿಲ್ಲುವಂತೆ ಆಕೆ ಬೆಳೆದರು. ರಾಘವೇಂದ್ರ ರಾವ್ ಅವರ ಒಂದು ಪ್ರಯತ್ನ, ಅದಕ್ಕೆ ರಮ್ಯಕೃಷ್ಣ ಅವರ ಪ್ರತಿಭೆ ಜೊತೆಯಾಗಿ ಇಂದು ರಮ್ಯಕೃಷ್ಣ ಅವರಿಗೆ ಒಂದು ಸ್ಥಾನವನ್ನು ಕಲ್ಪಿಸಿಕೊಟ್ಟಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here