ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಂದ್ರೆ ಎಲ್ಲರೂ ಮೊದಲು ಹೇಳುವುದು ಅವರ ಸರಳತೆ ಬಗ್ಗೆ.ಕನ್ನಡದ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿರುವ ಪುನೀತ್ ರಾಜ್‍ಕುಮಾರ್ ಗೆ ಅಭಿಮಾನಿಗಳು ಭೇಟಿಯಾದಾಗೆಲ್ಲಾ ಉಡುಗೊರೆಗಳನ್ನು ಕೊಡುತ್ತಲೇ ಇರುತ್ತಾರೆ.ಹೀಗೆ ಅಭಿಮಾನಿಗಳು ಪ್ರೀತಿಯಿಂದ ಕೊಡುವ ಉಡುಗೊರೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಸಮಯ ಸಿಕ್ಕಾಗ ನೋಡಿ ಅಭಿಮಾನಿಗಳ ಪ್ರೀತಿಯ ಉಡುಗೊರೆಗಳನ್ನು ಗೌರವಿಸುತ್ತಾರೆ.ಹೀಗೆ ಇತ್ತೀಚಿಗೆ ಅಭಿಮಾನಿಯೊಬ್ಬ ಪುನೀತ್ ರಾಜ್‍ಕುಮಾರ್ ಅವರಿಗೆ ಅಪರೂಪದ ಉಡುಗೊರೆ ಕೊಟ್ಟಿದ್ದಾರೆ.


ಏನಪ್ಪಾ ಆ ಉಡುಗೊರೆ ಅಂತೀರಾ ಅದೇ ವಾಲ್ಮೀಕಿ ರಾಮಾಯಣ ಪುಸ್ತಕ. ಅರೆ ವಾಲ್ಮೀಕಿ ರಾಮಾಯಣ ಪುಸ್ತಕ ಪುನೀತ್ ರಾಜ್‍ಕುಮಾರ್ ಅವರಿಗೆ ಹೇಗೆ ವಿಶೇಷ ಉಡುಗೊರೆ ಆಗಲು ಸಾಧ್ಯ ಅಂತೀರಾ.ಹೌದು ಪುನೀತ್ ಅವರಿಗೂ ವಾಲ್ಮೀಕಿ ರಾಮಾಯಣ ಪುಸ್ತಕಕ್ಕೂ ಸಂಬಂಧ ಇದೆ.ಪುನೀತ್ ರಾಜ್‍ಕುಮಾರ್ ಅವರು ಬಾಲ್ಯದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಮನಗೆದ್ದಿದ್ದಾರೆ.ಅದರಲ್ಲಿ ಪುನೀತ್ 1985 ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ಪುನೀತ್ ರಾಜ್‍ಕುಮಾರ್ ಅವರಿಗೆ ಬಾಲ್ಯದಲ್ಲಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾ ಬೆಟ್ಟದ ಹೂ.


ಈ ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ವಾಲ್ಮೀಕಿ ರಾಮಾಯಣ ಪುಸ್ತಕ ಕೊಂಡುಕೊಳ್ಳುವ ಮಹದಾಸೆ ಇರುತ್ತದೆ ಪುಸ್ತಕ ಕೊಂಡುಕೊಳ್ಳುವ ಸಲುವಾಗಿ ಹಣವನ್ನು ಕೂಡಿ ಇಟ್ಟಿರುತ್ತಾರೆ.ಆದರೆ ಅದೇ ದುಡ್ಡಲ್ಲಿ ಪುನೀತ್ ಅಮ್ಮನಿಗಾಗಿ ಸೀರೆ ತೆಗೆದುಕೊಂಡುಬಿಡುತ್ತಾರೆ.ಆ ಸಿನಿಮಾದಲ್ಲಿ ಈ ಪುಸ್ತಕ ಪುನೀತ್ ಅವರಿಗೆ ಧಕ್ಕಿರುವುದಿಲ್ಲ.ಈಗ ಅಭಿಮಾನಿಯೊಬ್ಬರು ಪುನೀತ್ ರಾಜ್‍ಕುಮಾರ್ ಅವರಿಗೆ ವಾಲ್ಮೀಕಿ ರಾಮಾಯಣ ಪುಸ್ತಕ ಉಡುಗೊರೆ ಆಗಿ ನೀಡಿದ್ದಾರೆ.ಈ ಸಂಭ್ರಮವನ್ನು ಪುನೀತ್ ರಾಜ್‍ಕುಮಾರ್ ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದಾರೆ.
ಬೆಟ್ಟದಹೂವು movieLi ಎಷ್ಟೇ ದುಡ್ಡು save ಮಾಡದ್ರೂ ತೊಗೊಳೋಕ್ಕೆ ಆಗ್ಲಿಲ್ಲ, finally a fan gifted it.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here