ಕನ್ನಡ ಚಿತ್ರರಂಗದಲ್ಲಿ ತಮ್ಮ ಪವರ್ ಫುಲ್ ಸ್ಟಂಟ್ ಮತ್ತು ಪವರ್ ಫುಲ್ ಡ್ಯಾನ್ಸ್ ನಿಂದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಮಾಡಿರುವ ರಿಯಲ್ ಸಾಹಸದ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಸಹ ಪುನೀತ್ ರಾಜಕುಮಾರ್ ಅವರು ಹಲವಾರು ಬಾರಿ ರಿಯಲ್ ವಿಡಿಯೋಗಳನ್ನು ಮಾಡಿದ್ದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಅಪ್ಲೋಡ್ ಮಾಡಿ ಎಂಜಾಯ್ ಮಾಡುತ್ತಿರುತ್ತಾರೆ.

ದೀಪಾವಳಿಯ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹೆಚ್ಚಾಗಿ ವೀಡಿಯೋ ಶೇರ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಈ ಹಿಂದಿನಿಂದಲೂ ಸಹ ರಿಯಲ್ ಆಗಿ ಸಾಹಸ ಮಾಡುವುದು ಎಂದರೆ ಬಹಳ ಅಚ್ಚುಮೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಇದೀಗ ಸಹ ಅಂತಹದ್ದೇ ಸಾಹಸಸ ಮಾಡಿರುವ ವಿಡಿಯೋ ಅಭಿಮಾನಿಗಳ ಮನ ರಂಜಿಸುತ್ತಿದೆ. ಬಾಲ್ಯದಿಂದಲೂ ಸಹ ಡಾನ್ಸ್ ಮತ್ತು ಫೈಟ್ ಬಗ್ಗೆ ಹೆಚ್ಚಾಗಿ ಒಲವು ಹೊಂದಿರುವ ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಪವರ್ ಸ್ಟಾರ್ ಎಂದು ಕರೆಯುವುದು ವಾಡಿಕೆ. ಪುನೀತ್ ರಾಜ್ ಕುಮಾರ್ ಅವರ ಈ ವೈರಲ್ ವೀಡಿಯೋ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here